Neer Dose Karnataka
Take a fresh look at your lifestyle.

ವಾರದ ಟಿಆರ್ಪಿ ಬಿಡುಗಡೆ, ಜೊತೆ ಜೊತೆಯಲಿಗೆ ಸಿಹಿಸುದ್ದಿ. ಪಡೆದ ಟಿಆರ್ಪಿ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಜೊತೆಯಲ್ಲಿ ಧಾರವಾಹಿ ಬಿಡುಗಡೆಯಾದ ಹಲವಾರು ತಿಂಗಳುಗಳ ಕಾಲ ಮೊದಲನೇ ಸ್ಥಾನವನ್ನು ಪಡೆದು ಕೊಂಡಿತ್ತು. ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬಂದ ಕಾರಣ ಹಲವಾರು ತಿಂಗಳುಗಳ ಕಾಲ ಧಾರವಾಹಿಯನ್ನು ಮೀರಿಸಲು ಸಾಧ್ಯವಿಲ್ಲ ಎಂಬಂತೆ ಕಾಣಿಸುತ್ತಿದ್ದದ್ದು ಸುಳ್ಳಲ್ಲ. ಆದರೆ ಕಥೆ ಎಳೆಯುವುದನ್ನು ಆರಂಭಿಸಿದ ಬಳಿಕ ಜನರು ಧಾರಾವಾಹಿಯ ಟಿಆರ್ ಪಿಯನ್ನು ಕ್ರಮೇಣ ಕಡಿಮೆ ಮಾಡಿದ್ದರು. ತದ ನಂತರ ಹಲವಾರು ತಿರುವುಗಳನ್ನು ಪಡೆದು ಕೊಂಡರೂ ಕೂಡ ಜೊತೆ ಜೊತೆಯಲ್ಲಿ ದಾರವಾಹಿ ಮೊದಲನೇ ಸ್ಥಾನಕ್ಕೆ ಏರಲು ಸಾಧ್ಯವಾಗಲಿಲ್ಲ,

ಇದೇ ಸಂದರ್ಭದಲ್ಲಿ ಬಿಡುಗಡೆಯಾದ ಸತ್ಯ ಧಾರವಾಹಿಯ ಕೂಡ ಉತ್ತಮವಾಗಿ ಮೂಡಿ ಬಂದ ಕಾರಣ ಮೊದಲನೇ ಸ್ಥಾನದಲ್ಲಿ ಭದ್ರವಾಗಿ ಕುಳಿತುಕೊಂಡು ಬಿಟ್ಟಿತ್ತು, ಅಷ್ಟೇ ಅಲ್ಲದೆ ಗಟ್ಟಿಮೇಳ ಧಾರವಾಹಿಯ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದ ಕಾರಣ ಜೊತೆ ಜೊತೆಯಲ್ಲಿ ದಾರವಾಹಿ ಮೂರನೇ ಸ್ಥಾನಕ್ಕೆ ಜಾರಿತು, ಏನೇ ಮಾಡಿದರೂ ಜೊತೆ ಜೊತೆಯಲ್ಲಿ ಸ್ಥಾನ ಮೂರನೇ ಸ್ಥಾನದಿಂದ ಮೇಲಕ್ಕೆ ಹೋಗಲು ಸಾಧ್ಯವಾಗಲಿಲ್ಲ.

ಸತ್ಯ ದಾರವಾಹಿ 2000 ಕ್ಕಿಂತಲೂ ಹೆಚ್ಚು ಟಿಆರ್ ಪಿಯನ್ನು ಅಂಕಗಳಿಂದ ಮುಂದಿತ್ತು, ಆದರೆ ಕಳೆದ ವಾರ ಜೊತೆ ಜೊತೆಯಲಿ ಧಾರಾವಾಹಿ ಕಥೆಯಲ್ಲಿ ಪ್ರಮುಖ ತಿರುವು ಪಡೆದು ಕೊಳ್ಳುವ ಎಪಿಸೋಡ್ ಗಳು ಪ್ರಸಾರವಾದ ಕಾರಣ ಹೆಚ್ಚಿನ ಜನರು ಧಾರವಾಹಿ ನೋಡಿದ್ದಾರೆ, ಆದ ಕಾರಣ ಬರೋಬ್ಬರಿ 10.9 ಟಿವಿಆರ್ ಪಡೆದು ಕೊಂಡು ಹಲವಾರು ತಿಂಗಳುಗಳ ಬಳಿಕ ಜೊತೆ ಜೊತೆಯಲ್ಲಿ ದಾರವಾಹಿ ಮೊದಲನೇ ಸ್ಥಾನ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಧಾರವಾಹಿ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.