ನಮ್ಮನೆ ಯುವರಾಣಿ ಸಾಕೇತ್ ರವರ ರಿಯಲ್ ಲೈಫ್ ನ ಹೆಂಡತಿ ಕೂಡ ಖ್ಯಾತ ನಟಿ. ಯಾರು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್ ಪಾತ್ರಧಾರಿಯಾಗಿ ನಟಿಸುತ್ತಿರುವ ರಘುರವರು ಧಾರಾವಾಹಿಯಲ್ಲಿ ಬಹಳ ಅತ್ಯುತ್ತಮವಾಗಿ ನಟನೆ ಮಾಡುವ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಧಾರವಾಹಿ ಕೂಡ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ಪ್ರತಿಯೊಂದು ಪಾತ್ರಗಳು ತಮ್ಮದೇ ಆದ ಚಾಪು ಮೂಡಿಸುವುದರಲ್ಲಿ ಯಶಸ್ವಿಯಾಗಿವೆ.

ಇನ್ನು ಸಾಕೇತ್ ಪಾತ್ರಧಾರಿ ರಘು ಅವರ ಕುರಿತು ಮಾತನಾಡುವುದಾದರೆ ರಘು ರವರು ಕಿರುತೆರೆಯಲ್ಲಿ ವಿವಿಧ ಧಾರವಾಹಿಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದು ಕೊಂಡಿದ್ದಾರೆ. ಅದರಲ್ಲಿಯೂ ಮಿಸ್ಟರ್ ರಂಗೇಗೌಡ ಪಾತ್ರ ಇವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ತದ ನಂತರ ‌ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮತ್ತಷ್ಟು ಜನಪ್ರಿಯತೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇವರ ವಯಕ್ತಿಕ ಜೀವನದ ಕುರಿತು ಮಾತನಾಡುವುದಾದರೆ ಕನ್ನಡದ ಕಿರುತೆರೆಯ ಖ್ಯಾತ ನಟಿಯನ್ನು ಪ್ರೀತಿಸಿ ತದ ನಂತರ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆಯಾಗಿದ್ದಾರೆ. ಹೌದು ಸ್ನೇಹಿತರೇ ಕಿರುತೆರೆಯ ಖ್ಯಾತ ನಟಿ ನೆಗೆಟಿವ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕುಲವಧು ದಾರವಾಹಿಯ ವಚನ ಪಾತ್ರಧಾರಿ ಅಮೃತಾ ರಾಮಮೂರ್ತಿ ರವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಮೃತಾ ರಾಮಮೂರ್ತಿ ರವರ ಕುಟುಂಬ ಬಹಳ ದೊಡ್ಡದಾಗಿದ್ದು, ಅಮೃತ ರವರು ದೊಡ್ಡ ಕುಟುಂಬದಿಂದ ಬಂದಿದ್ದು ಇವರ ಕುಟುಂಬದಲ್ಲಿ ಇವರು 25ನೇ ಮೊಮ್ಮಗಳು, ಆದ ಕಾರಣ ಅಮೃತ ರವರ ಮನೆಯ ಪ್ರತಿಯೊಬ್ಬರನ್ನು ಒಪ್ಪಿಸಿ ಮದುವೆಯಾಗಿದೆ ಈ ಜೋಡಿ.

Leave a Reply

Your email address will not be published. Required fields are marked *