Neer Dose Karnataka
Take a fresh look at your lifestyle.

ಅಭಿಮಾನಿಗಳಿಗೆ ನಿರಾಸೆಯ ಸುದ್ದಿ ನೀಡಿದ ರಮ್ಯಾ ! ಇದ್ದಕ್ಕಿದ್ದ ಹಾಗೆ ಕಠಿಣ ನಿರ್ಧಾರ ! ಏನು ಗೊತ್ತಾ??

1

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ವುಡ್ನಲ್ಲಿ ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಮೆರೆದ ನಟಿ ರಮ್ಯಾ ರವರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇವರು ಕನ್ನಡ ಚಿತ್ರರಂಗದಿಂದ ದೂರ ಹೋಗಿ ಹಲವಾರು ವರ್ಷಗಳು ಕಳೆದರೂ ಕೂಡ ಈಗಲೂ ಕೂಡ ಇವರಿಗೆ ಸಕ್ರಿಯವಾಗಿರುವ ನಟಿಯರಿಗಿಂತ ಹೆಚ್ಚು ಅಭಿಮಾನಿಗಳನ್ನು ಬಂದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿರುವ ರಮ್ಯಾರವರು, ಸಿನಿಮಾ ಮಾಡಿ ಈಗಾಗಲೇ ಬಹುತೇಕ ವರ್ಷಗಳಾಗಿವೆ.

2016ರಲ್ಲಿ ನಾಗರಹಾವು ಚಿತ್ರದಲ್ಲಿ ನಟನೆ ಮಾಡಿದ ರಮ್ಯಾರವರು ತದ ನಂತರ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು, ಇದಾದ ಮೇಲೆ ಕೆಲವು ವರ್ಷಗಳ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ರಮ್ಯ ಅವರು ಕಳೆದ ಕೆಲ ವರ್ಷಗಳಿಂದ ಎಲ್ಲಿದ್ದಾರೆ ಎಂಬುದನ್ನು ಕೂಡ ತಿಳಿಸಿರಲಿಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳಿಂದ ದೂರವಾಗಿದ್ದರು.

ಇನ್ನು ಇತ್ತೀಚೆಗೆ ಅಂದರೆ ಕಳೆದ ಜೂನ್ ನಲ್ಲಿ ಮತ್ತೊಮ್ಮೆ ಸೋಶಿಯಲ್ ಮೀಡಿಯಾ ಗೆ ವಾಪಸ್ ಬಂದು ವಿವಿಧ ಪ್ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಹಾಗಾಗಿ ಪೋಸ್ಟ್ ಮಾಡಿ ಅಭಿಮಾನಿಗಳ ಜೊತೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದ ರಮ್ಯಾರವರು ಇದೀಗ ಇದ್ದಕ್ಕಿದ್ದಹಾಗೆ ಸಾಮಾಜಿಕ ಜಾಲತಾಣಗಳನ್ನು ತೊರೆಯುವ ನಿರ್ಧಾರ ಮಾಡಿದಂತೆ ಕಾಣುತ್ತಿದೆ, ಇದೀಗ ಇವರ ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ ಡಿ ಆಕ್ಟಿವೇಟ್ ಆಗಿದೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಮತ್ತೊಮ್ಮೆ ರಮ್ಯಾರವರು ಅಜ್ಞಾತವಾಸ ಮಾಡುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

Leave A Reply

Your email address will not be published.