Neer Dose Karnataka
Take a fresh look at your lifestyle.

20 ವರ್ಷದವರಂತೆ ಕಾಣಿಸುವ ದೀಪಿಕಾ ರವರ ವಯಸ್ಸು ಕೇಳಿದರೆ ನೀವು ನಂಬುವುದಿಲ್ಲ ! ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿಯ ಮೂಲಕ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಜನಪ್ರಿಯತೆಯನ್ನು ಪಡೆದು ಕೊಂಡು, ಇದೇ ಜನಪ್ರಿಯತೆಯನ್ನು ಬಳಸಿಕೊಂಡು ಬಿಗ್ ಬಾಸ್ ಮನೆಗೆ ಕೂಡ ತೆರಳಿ, ಅಲ್ಲಿಯೂ ಕೂಡ ತಮ್ಮ ನೈಜ ನಡವಳಿಕೆಯ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿ ಕೊನೆಯ ವಾರದವರೆಗೂ ಮನೆಯಲ್ಲಿ ಉಳಿದು ಕೊಂಡಿದ್ದ ದೀಪಿಕಾ ದಾಸ್ ರವರ ಕುರಿತು ನಿಮಗೆ ಹೆಚ್ಚಾಗಿ ಹೇಳಬೇಕು ಎಂಬ ಅವಶ್ಯಕತೆ ಇಲ್ಲವೇ ಇಲ್ಲ.

ಯಾಕೆಂದರೆ ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ದಾಸ್ ರವರು, ಇದೀಗ ಕನ್ನಡ ಕಿರುತೆರೆಯಲ್ಲಿ ಅಷ್ಟೇ ಅಲ್ಲದೆ ಸ್ಯಾಂಡಲ್ ವುಡ್ ನಲ್ಲಿ ಕೂಡ ತಮ್ಮ ಸಿನಿ ಜರ್ನಿ ಯನ್ನು ಆರಂಭಿಸುತ್ತಿದ್ದಾರೆ. ಹೀಗೆ ಯಶಸ್ಸಿನ ಮೆಟ್ಟಿಲುಗಳನ್ನು ಹತ್ತುತ್ತಿರುವ ದೀಪಿಕಾ ದಾಸ್ ರವರ ಬಗ್ಗೆ ಮುಂದಿನ ದಿನಗಳು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸುತ್ತಾ ಇವರ ಕುರಿತು ನಿಮಗೆ ತಿಳಿಯದ ಕೆಲವೊಂದು ಮಾಹಿತಿಗಳನ್ನು ನೀಡುತ್ತೇವೆ ಕೇಳಿ.

ಸ್ನೇಹಿತರೇ ದೀಪಿಕಾ ದಾಸ್ ರವರು ಕನ್ನಡದ ಖ್ಯಾತ ನಟರಾಗಿರುವ ಯಶ್ ರವರ ಚಿಕ್ಕಮ್ಮನ ಮಗಳು, ಇವರು ಈ ಕುರಿತು ಎಲ್ಲಿದು ಇದುವರೆಗೆ ಮಾತಾಡಿಲ್ಲ, ಮೂಲತಹ ಹಾಸನ ಜಿಲ್ಲೆಯ ಹುಡುಗಿ ಯಾಗಿರುವ ದೀಪಿಕಾ ದಾಸ್ ರವರು ತಾವು ಚಿಕ್ಕ ವಯಸ್ಸಿನವರು ಇದ್ದಾಗಲೂ ಕೂಡ ನಟಿಯಾಗಬೇಕು ಎಂಬ ಕನಸನ್ನು ಹೊಂದಿದ್ದರು. ವಿದ್ಯಾಭ್ಯಾಸದಲ್ಲಿ ಕೂಡ ಹಿಂದೆ ಉಳಿಯದ ದೀಪಿಕಾ ರವರು ಪದವಿಯನ್ನು ಕೂಡ ಪಡೆದು ಕೊಂಡಿದ್ದಾರೆ, ಇನ್ನು ಇವರ ಫೇವರೆಟ್ ನಟರು ಯಾರು ಎಂಬುದನ್ನು ನಾವು ನೋಡುವುದಾದರೇ ರಜನಿಕಾಂತ್ ಮತ್ತು ಕಮಲ್ ಹಾಸನ್ ರವರ ಹೆಸರು ಕೇಳಿ ಬರುತ್ತದೆ. ಇವರ ವಯಸ್ಸು ಎಷ್ಟು ಎಂಬುದನ್ನು ನಾವು ನೋಡುವುದಾದರೆ 1993 ರಲ್ಲಿ ಜನಿಸಿರುವ ಇವರು, ಇದೀಗ ಇಂದಿನ ಲೆಕ್ಕಾಚಾರದ ಪ್ರಕಾರ 28 ವರ್ಷ ವಯಸ್ಸಿನವರಾಗಿದ್ದಾರೆ, ನೋಡಿದರ್ ಇನ್ನೂ 20 ವರ್ಷದ ಹುಡುಗಿಯಂತೆ ಕಾಣುವ ಇವರು 28 ಎಂದರೆ ಯಾರು ನಂಬುವುದಿಲ್ಲ.

Comments are closed.