Neer Dose Karnataka
Take a fresh look at your lifestyle.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಗೆ ಅನ್ನಪೂರ್ಣ ಅಜ್ಜಿ ರವರು ಪಡೆಯುತ್ತಿರುವ ಅಸಲಿ ಸಂಭಾವನೆ ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ಈ ಸೀಸನ್ ಅಲ್ಲಿಯೂ ಕೂಡ ಪ್ರೇಕ್ಷಕರಿಂದ ಮೆಚ್ಚುಗೆ ಕಲಿಸುವುದರಲ್ಲಿ ಯಶಸ್ವಿಯಾಗಿದೆ, ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಕೊಂಚ ಟಿಆರ್ಪಿ ಕಡಿಮೆಯಾಗಿದ್ದರೂ ಕೂಡ ದಿನೇ ದಿನೇ ಟಿಆರ್ಪಿ ಹೆಚ್ಚುತ್ತಿರುವುದು ಕಾರ್ಯಕ್ರಮಕ್ಕೆ ಪ್ರೇಕ್ಷಕರು ಹೆಚ್ಚಾಗುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಕೆಲವೊಂದು ಸ್ಪರ್ಧಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಪ್ರೇಕ್ಷಕರ ಮೆಚ್ಚಿನ ಸ್ಪರ್ಧಿಗಳ ಆಗಿದ್ದಾರೆ, ಅದೇ ರೀತಿ ತಮ್ಮ ವಯಸ್ಸಿಗೆ ಹಾಗೂ ನೃತ್ಯವು ಯಾವುದೇ ಸಂಬಂಧ ವಿಲ್ಲದಂತೆ ಡ್ಯಾನ್ಸ್ ಮಾಡುವ ಅನುಪೂರ್ಣ ರವರು ಕೂಡ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಇನ್ನು ಹೀಗೆ ಎಲ್ಲರ ಮನ ಗೆದ್ದಿರುವ ಅನ್ನಪೂರ್ಣರವರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಉತ್ತಮ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ಕೂಡ ಕಿರುತೆರೆಯ ಮೂಲಗಳಿಂದ ತಿಳಿದು ಬಂದಿದೆ, ಮೊದಲಿಗೆ ಅನ್ನಪೂರ್ಣ ರವರಿಗೆ ಎಂಟರಿಂದ ಹತ್ತು ಸಾವಿರ ರೂಪಾಯಿಗಳನ್ನು ಎಪಿಸೋಡಿಗೆ ನೀಡಲಾಗುತ್ತಿತ್ತು ಆದರೆ ಇದೀಗ ಈ ಸಂಭಾವನೆ ಹದಿನೈದರಿಂದ ಇಪ್ಪತ್ತು ಸಾವಿರಕ್ಕೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಸಂಭಾವನೆ ಅದೇನೇ ಆಗಲಿ ಅನ್ನಪೂರ್ಣ ರವರಿಗೆ ಒಂದು ವೇದಿಕೆ ಸಿಕ್ಕಿರುವುದು ನಿಜಕ್ಕೂ ಉತ್ತಮ ವಿಷಯವಾಗಿದೆ

Comments are closed.