Neer Dose Karnataka
Take a fresh look at your lifestyle.

ದಿಡೀರ್ ಎಂದು ಮೊಟ್ಟೆ ಬೇಯಿಸುವುದು ಹೇಗೆ ಗೊತ್ತೇ?? ಅದು ಕೇವಲ ಬೆರಳೆಣಿಕೆಯ ನಿಮಿಷಗಳಲ್ಲಿ

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಮೊಟ್ಟೆ ಬೇಯಿಸಲು 10 – 15 ನಿಮಿಷ ಬೇಕಾಗುತ್ತದೆ. ಇಂದು ನಾವು ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಗ್ಯಾಸ್ ಅನ್ನು ಉಪಯೋಗಿಸಿಕೊಂಡು ಮೊಟ್ಟೆಯನ್ನು ಬೇಯಿಸುವ ಟಿಪ್ಸ್ ಅನ್ನು ಇಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಒಂದು ಬಾರಿ ಮೊಟ್ಟೆ ಬೇಯಿಸಲು ಬಳಸುವ ಗ್ಯಾಸ್ ನಲ್ಲಿ ನಾವು ಹೇಳುವ ವಿಧಾನವನ್ನು ಫಾಲೋ ಮಾಡಿದರೆ ನಂತರ 3 ಬಾರಿ ಮೊಟ್ಟೆಯನ್ನು ಬೇಯಿಸಬಹುದು.

ಕೇವಲ 3 – 4 ನಿಮಿಷಗಳಲ್ಲಿ ಮೊಟ್ಟೆಯನ್ನು ಬೇಯಿಸುವ ವಿಧಾನ: ಮೊದಲಿಗೆ ಒಂದು ಬಟ್ಟಲಿಗೆ ಬೇಯಿಸಿಕೊಳ್ಳಬೇಕಾದ ಮೊಟ್ಟೆ, ನೀರು ಹಾಗೂ ಉಪ್ಪನ್ನು ಹಾಕಿ ಉಪ್ಪಿನ ನೀರಿನಿಂದ ತೊಳೆದುಕೊಳ್ಳಿ. ನಂತರ ಸಾಮಾನ್ಯ ನೀರಿನಲ್ಲಿಯೂ ಸಹ ಒಂದು ಬಾರಿ ತೊಳೆದುಕೊಳ್ಳಿ. ನಂತರ ಮೊಟ್ಟೆ ಬೇಯಿಸಿಕೊಳ್ಳುವ ಪಾತ್ರೆಗೆ ಒಂದು ಮೊಟ್ಟೆ ಮುಳುಗುವಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 4 ಹನಿ ಎಣ್ಣೆ ಹಾಗೂ 4 ಹನಿ ವಿನೆಗರ್ ಅನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಂಡು ಮುಚ್ಚಳವನ್ನು ಮುಚ್ಚಿ ಗ್ಯಾಸ್ ಮೇಲೆ ಇಟ್ಟು ಅಧಿಕ ಉರಿಯಲ್ಲಿ 1 ನಿಮಿಷ ಕುದಿಯಲು ಬಿಡಿ.

ಕುದಿಯಲು ಪ್ರಾರಂಭವಾದ ನಂತರ ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿ ಇಟ್ಟು ಕೊಳ್ಳಿ. ನಂತರ ಚಮಚದ ಸಹಾಯದಿಂದ ಮೊಟ್ಟೆಯನ್ನು ಹಾಕಿಕೊಂಡು ಕಡಿಮೆ ಉರಿಯಲ್ಲಿ 1 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಅಧಿಕ ಉರಿಯಲ್ಲಿ 2 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ನಿಂದ ಇಳಿಸಿ ಒಂದು ಮುಚ್ಚಳವನ್ನು ಮುಚ್ಚಿ ಸಂಪೂರ್ಣ ತಣ್ಣಗಾಗಲು ಬಿಡಿ ಅಥವಾ 10 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ನಂತರ ಪಾತ್ರೆಯಿಂದ ನೀರನ್ನು ಚೆಲ್ಲಿಕೊಳ್ಳಿ. ನಂತರ ಅದೇ ಪಾತ್ರೆಗೆ ತಣ್ಣಗಿರುವ ನೀರನ್ನು ಹಾಕಿ 2 ನಿಮಿಷಗಳ ಕಾಲ ಮೊಟ್ಟೆಯನ್ನು ಹಾಗೆ ಬಿಡಿ. ಈ ರೀತಿ 2 ನಿಮಿಷಗಳ ಕಾಲ ತಣ್ಣೀರಿನಲ್ಲಿ ಇಡುವುದರಿಂದ ಮೊಟ್ಟೆಯ ಸಿಪ್ಪೆಯು ಸುಲಭವಾಗಿ ಬಿಡುತ್ತದೆ.

Comments are closed.