Neer Dose Karnataka
Take a fresh look at your lifestyle.

ಟಾಪ್ ನಟಿ ರಚಿತಾ ರಾಮ್ ರವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?? ಇಷ್ಟು ಕಡಿಮೇನಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಇದೀಗ ರಚಿತಾ ರಾಮ್ ರವರ ಹೆಸರು ಕೇಳಿ ಬರುತ್ತದೆ. ಹಲವಾರು ವರ್ಷಗಳಿಂದ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿರುವ ರಚಿತ ರಾಮ್ ರವರು ಕನ್ನಡದ ಬಹುತೇಕ ನಟರ ಜೊತೆ ನಟಿಸುವ ಮೂಲಕ ಕನ್ನಡದ ಟಾಪ್ ನಟಿಯರಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಕೇವಲ ಬೆಳ್ಳಿ ಪರದೆಯಲ್ಲಿ ಅಷ್ಟೇ ಅಲ್ಲದೆ ಕಿರುತೆರೆಯಲ್ಲಿಯೂ ಕೂಡ ಛಾಪು ಮೂಡಿಸಿರುವ ರಚಿತ ರಾಮ್ ರವರು ಮಜಾಭಾರತ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ಅಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡು ಜನರ ಅಚ್ಚುಮೆಚ್ಚಿನ ತೀರ್ಪುಗಾರರಲ್ಲಿ ಒಬ್ಬರಾಗಿರುವ ರಚಿತ ರಾಮ್ ರವರು ಇತ್ತೀಚಿನ ಕನ್ನಡ ನಟಿಯರ ಜೊತೆ ಹೋಲಿಸಿಕೊಂಡರೆ ಕನ್ನಡದ ಟಾಪ್ ನಟಿ ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಇನ್ನು ಹೀಗಿರುವಾಗ ರಚಿತರಾಮ್ ಎಂದ ತಕ್ಷಣ ಇವರು ಉತ್ತಮ ಸಂಭಾವನೆ ಪಡೆಯುತ್ತಾರೆ ಎಂಬ ಲೆಕ್ಕಾಚಾರ ನಿಮ್ಮದಾಗಿದ್ದರೆ ನಿಜಕ್ಕೂ ಅದು ತಪ್ಪು.

ಹೌದು ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಟರಿಗೆ ನಿಮಗೆಲ್ಲರಿಗೂ ತಿಳಿದಿರುವಂತೆ ಕೋಟಿ ಕೋಟಿ ಹಣವನ್ನು ನೀಡಲಾಗುತ್ತದೆ. ಆದರೆ ಇತರ ಚಿತ್ರರಂಗಗಳಂತೆ ಕನ್ನಡದಲ್ಲಿ ನಟಿಯರಿಗೆ ಹೆಚ್ಚಿನ ಸಂಭಾವನೆ ನೀಡಲಾಗುವುದಿಲ್ಲ, ನಟರಿಗೆ ಕೋಟಿ ಕೋಟಿ ಹಣ ನೀಡಿದರೂ ಕೂಡ ನಟಿಯರಿಗೆ ಸಂಭಾವನೆ ಲಕ್ಷಗಳಲ್ಲಿ ಇರುತ್ತದೆ, ಇನ್ನೂ ರಚಿತ ರಾಮ್ ರವರ ಸಂಭಾವನೆ ಕುರಿತು ನಾವು ಮಾತನಾಡುವುದಾದರೆ ಗಾಂಧಿ ನಗರದ ಲೆಕ್ಕಾಚಾರದ ಪ್ರಕಾರ ರಚಿತಾ ರಾಮ್ ರವರು ಒಂದು ಸಿನಿಮಾಗೆ 40 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ.

Comments are closed.