Neer Dose Karnataka
Take a fresh look at your lifestyle.

ವಿಜಯ್ ದೇವರಕೊಂಡ ಗರ್ಲ್ ಫ್ರೆಂಡ್ ಯಾರಂತೆ ಗೊತ್ತಾ?? ರಶ್ಮಿಕ ಅಂತೂ ಅಲ್ಲ. ಹಾಗಿದ್ದರೆ ಯಾರು??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಿತ್ರರಂಗ ಎಂದ ಮೇಲೆ ಗಾಸಿಪ್ಗಳು ಸರ್ವೇ ಸಾಮಾನ್ಯ. ಹಲವಾರು ಬಾರಿ ನಟ ನಟಿಯರ ನಡುವೆ ಸ್ನೇಹ ಇದ್ದರೂ ಕೂಡ ಪ್ರೀತಿ ಎಂಬಮಾತುಗಳು ಕೇಳಿ ಬರುತ್ತಿರುತ್ತವೆ. ಆದರೆ ಸ್ನೇಹ ಎಂದುಕೊಂಡು ಓಡಾಡುತ್ತಿದ್ದರು ಕೂಡ ಹಲವಾರು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದೇ ರೀತಿ ವಿಜಯ್ ದೇವರಕೊಂಡ ರವರ ಜೊತೆ ಹಲವಾರು ನಟಿಯರ ಹೆಸರು ಇಲ್ಲಿಯವರೆಗೂ ಕೇಳಿ ಬಂದಿದೆ, ಅದರಲ್ಲಿ ರಶ್ಮಿಕಾ ರವರ ಹೆಸರು ಕೂಡ ಇದೆ.

ಆದರೆ ರಶ್ಮಿಕ ಮಂದನ್ನ ರವರು ಹಲವಾರು ಬಾರಿ ನಾನು ಮತ್ತು ವಿಜಯ ದೇವರಕೊಂಡ ರವರು ಕೇವಲ ಸ್ನೇಹಿತರು ಎಂಬುದನ್ನು ಸ್ಪಷ್ಟಪಡಿಸಿ ಹಲವಾರು ಬಾರಿ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದಾರೆ. ಇದನ್ನು ಕೆಲವು ಜನ ಒಪ್ಪಿಕೊಂಡರೆ ಇನ್ನು ಕೆಲವರು ಒಪ್ಪಿಕೊಳ್ಳುವುದಿಲ್ಲ. ಆದರೆ ಅದೇ ಸಮಯದಲ್ಲಿ ರಶ್ಮಿಕ ರವರ ಬದಲು ವಿಜಯ್ ದೇವರಕೊಂಡ ರವರ ಜೊತೆ ಮತ್ತೊಂದು ನಟಿಯ ಹೆಸರು ಕೇಳಿಬಂದಿದೆ.

ಚಿತ್ರೀಕರಣದ ಸಮಯದಲ್ಲಿ ಸ್ನೇಹಿತರಾದ ವಿಜಯ್ ದೇವರಕೊಂಡ ಹಾಗೂ ಈ ಖ್ಯಾತ ನಟಿ ಇದೀಗ ಡೇಟ್ ಮಾಡುತ್ತಿದ್ದಾರೆ ಎಂಬ ಗಾಸಿಪ್ ಕೇಳಿ ಬಂದಿದೆ, ಹೌದು ಸ್ನೇಹಿತರೇ ವಿಜಯ್ ದೇವರಕೊಂಡ ರವರ ಜೊತೆ ಇದೀಗ ಕೇಳಿ ಬಂದಿರುವ ಹೆಸರು ಬಾಲಿವುಡ್ ನಟಿ ಅನನ್ಯ ಪಾಂಡೆ ರವರದ್ದು, ಇವರಿಬ್ಬರು ಒಟ್ಟಾಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆದರೆ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು ಗುಸು ಮಾತುಗಳು ಶುರುವಾಗಿವೆ, ಇದಕ್ಕೆಲ್ಲ ಕಾರಣ ಹೊರಗಡೆ ಕಾಣಿಸಿಕೊಂಡಿದ್ದು ಹಾಗೂ ಚಿತ್ರೀಕರಣ ಮಾಡುವಾಗ ತೆಗೆದಿರುವ ಕೆಲವೊಂದು ಫೋಟೋಗಳು.

Comments are closed.