Neer Dose Karnataka
Take a fresh look at your lifestyle.

ವಿರಾಟ್ ಕೊಹ್ಲಿ ಆರಂಭಿಕ ಸ್ಥಾನದ ಕುರಿತು ಮಾತನಾಡಿದ ಬ್ರಿಯಾನ್ ಲಾರಾ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಇಂಗ್ಲೆಂಡ್ ದೇಶದ ವಿರುದ್ಧ ನಡೆದ ಟಿ-ಟ್ವೆಂಟಿ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಪಂದ್ಯ ಗೆಲ್ಲಿಸಿಕೊಟ್ಟಿದ್ದ ವಿರಾಟ್ ಕೊಹ್ಲಿ ರವರು, ಮುಂದಿನ ಐಪಿಎಲ್ ಟೂರ್ನಿ ಯಲ್ಲಿ ಆರ್ಸಿಬಿ ತಂಡದ ಪರವಾಗಿ ನಾನು ಆರಂಭಿಕನಾಗಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದರು. ಹೇಳಿಕೆ ನೀಡಿದಂತೆ ತಂಡದ ಮ್ಯಾನೇಜ್ಮೆಂಟ್ ಕೂಡ ಒಪ್ಪಿಕೊಂಡಿದ್ದು, ಆರಂಭಿಕರಾಗಿ ವಿರಾಟ್ ಕಣಕ್ಕಿಳಿಯುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ರವರು ಉತ್ತಮ ರನ್ ಗಳಿಸುವುದರಲ್ಲಿ ಯಶಸ್ವಿಯಾಗಿ, ತಂಡಕ್ಕೆ ಅಗತ್ಯವಿದ್ದ ಸಂದರ್ಭದಲ್ಲಿ ಅತ್ಯುತ್ತಮವಾಗಿ ಇನಿಂಗ್ಸ್ ಕಟ್ಟಿದರು, ಈ ಮೂಲಕ ಆರಂಭಿಕರಾಗಿ ಕಣಕ್ಕಿಳಿದ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದರು.

ಈ ಸಂದರ್ಭದಲ್ಲಿ ಕ್ರಿಕೆಟ್ ಲೋಕದ ದಿಗ್ಗಜರಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಬ್ರಿಯಾನ್ ಲಾರಾ ರವರು ಪ್ರತಿಕ್ರಿಯೆ ನೀಡಿ, ವಿರಾಟ್ ಕೊಹ್ಲಿ ರವರು ಆರಂಭಿಕರಾಗಿ ಕಣಕ್ಕಿಳಿಯುವುದರ ಕುರಿತು ನನ್ನ ಅಭಿಪ್ರಾಯವನ್ನು ನಾನು ಹೇಳುವುದಾದರೆ, ಇದು ಒಂದು ನಿಜಕ್ಕೂ ಉತ್ತಮ ನಿರ್ಧಾರ ಎಂದು ಅನಿಸುತ್ತದೆ, ಯಾಕೆಂದರೆ ಆರಂಭಿಕರಾಗಿ ಕಣಕ್ಕಿಳಿದರೆ ಹೆಚ್ಚು ಬಾಲಗಳನ್ನು ಎದುರಿಸುವ ಅವಕಾಶ ಸಿಗುತ್ತದೆ, ವಿಶ್ವ ಷ್ಠ ಬ್ಯಾಟ್ಸ್ಮನ್ ಆಗಿರುವ ವಿರಾಟ್ ಕೊಹ್ಲಿ ಇರುವವರು ಹೆಚ್ಚು ಬಾಲ್ ಗಳನ್ನು ಎದುರಿಸಿದಷ್ಟು ಕೂಡ ಎದುರಾಳಿ ತಂಡಕ್ಕೆ ಗೆಲ್ಲುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ನಿಜಕ್ಕೂ ಇದು ಒಂದು ಅತ್ಯುತ್ತಮ ನಿರ್ಧಾರ ಎಂದು ಹಾಡಿ ಹೊಗಳಿದ್ದಾರೆ.

Comments are closed.