Neer Dose Karnataka
Take a fresh look at your lifestyle.

ಕಿರುತೆರೆ ನಟ ಭವಾನಿ ಸಿಂಗ್ ರವರ ಪತ್ನಿ ಕೂಡ ಖ್ಯಾತ ಕಿರುತೆರೆ ನಟಿ. ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದು ಕೊಂಡಿರುವ ನಟ ಭವಾನಿ ಸಿಂಗ್ ರವರು ಇತ್ತೀಚಿಗೆ ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಭವಾನಿ ಸಿಂಗ್ ರವರು, ಹಲವರು ಧಾರವಾಹಿಗಳನ್ನು ನಟನಾಗಿ ಹಾಗೂ ನೆಗೆಟಿವ್ ಶೇಡ್ ಪಾತ್ರದಲ್ಲಿ ಕೂಡ ನಟನೆ ಮಾಡಿದ್ದಾರೆ. ಇನ್ನು ಸುಬ್ಬಲಕ್ಷ್ಮಿ ಸಂಸಾರ ಧಾರವಾಹಿ ಯಲ್ಲಿ ನಾಯಕ ನಟನ ಪಾತ್ರದಲ್ಲಿ ನೆಗೆಟೀವ್ ಶೇಡ್ ನಾಯಕ ನಟನಾಗಿ ಕಾಣಿಸಿಕೊಂಡು ತಮಗೆ ನೀಡಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಮೂಲಕ ತಮ್ಮ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.

ಹೀಗೆ ಕರ್ನಾಟಕದಲ್ಲಿ ಚಿರಪರಿಚಿತ ಕಿರುತೆರೆಯ ನಟರಲ್ಲಿ ಒಬ್ಬರಾಗಿರುವ ಭವಾನಿ ಸಿಂಗ್ ರವರ ಪತ್ನಿ ಕೂಡ ಖ್ಯಾತ ನಟಿಯಾಗಿದ್ದು, ವಿವಿಧ ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಪಂಕಜ ಶಿವಣ್ಣ ರವರು ನಿಜ ಜೀವನದಲ್ಲಿ ಭವಾನಿ ಸಿಂಗ್ ರವರ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರ ಜೋಡಿ ಕನ್ನಡದ ಕಿರುತೆರೆಯ ಮುದ್ದಾದ ಜೋಡಿಗಳಲ್ಲಿ ಒಂದಾಗಿದ್ದು, ಹೀಗೆ ನೂರು ವರ್ಷಗಳ ಕಾಲ ಸುಖವಾಗಿ ಬಾಳಲಿ ಎಂದು ಹಾರೈಸುತ್ತೇವೆ.

Comments are closed.