Neer Dose Karnataka
Take a fresh look at your lifestyle.

ದಟ್ಟಿಮೇಳ ಆಧ್ಯಾ ಪಾತ್ರದಾರಿ ಅನ್ವಿತಾ ರವರ ನಿಜ ಜೀವನದ ಬಾಯ್ ಫ್ರೆಂಡ್ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಗಟ್ಟಿಮೇಳ ಧಾರವಾಹಿಯ ಕನ್ನಡ ಕಿರುತೆರೆಯಲ್ಲಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ, ಹಲವಾರು ತಿಂಗಳುಗಳಿಂದ ಟಾಪ್ ಧಾರವಾಹಿಯಾಗಿ ಮೆರೆಯುತ್ತಿರುವ ಗಟ್ಟಿಮೇಳ ಧಾರವಾಹಿಯ ಸದಾ ಟಿಆರ್ಪಿ ಲಿಸ್ಟಿನಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಪಡೆದು ಕೊಂಡಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಷ್ಟೆಲ್ಲಾ ಪ್ರೇಕ್ಷಕರ ಮನಗೆದ್ದಿರುವ ಗಟ್ಟಿಮೇಳ ಧಾರವಾಹಿಯ ಕಲಾವಿದರೂ ಕೂಡ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಳ್ಳುತ್ತಿದ್ದಾರೆ.

ಈ ದಾರವಾಹಿಯಲ್ಲಿ ಬರುವ ಕೆಲವೊಂದು ಪಾತ್ರಗಳಿಗೆ ಪ್ರತ್ಯೇಕ ಅಭಿಮಾನಿ ಬಳಗ ಗಳು ಕೂಡ ಸೃಷ್ಟಿಯಾಗಿದೆ. ನಟಿ ಅಮೂಲ್ಯ ಪಾತ್ರದಾರಿ ನಿಶಾ ರವಿಕೃಷ್ಣನ್ ರವರು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡರೇ ಅದೇ ರೀತಿ ತಮ್ಮ ಅತ್ಯುತ್ತಮ ನಟನೆಯ ಮೂಲಕ ಹಾಗೂ ಅದ್ಭುತ ಎಕ್ಸ್ಪ್ರೆಶನ್ ಗಳ ಮೂಲಕ ಧಾರವಾಹಿಯಲ್ಲಿ ಆದ್ಯ ರವರು ತಮಗೆ ನೀಡಿದ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬುವ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅದೆಷ್ಟೋ ಜನ ಇವರ ನಟನೆಗೆ ಫಿದಾ ಆಗಿ ಕೇಬಲ ಇವರಿಗಾಗಿ ಧಾರವಾಹಿ ನೋಡುತ್ತಾರೆ ಎಂದರೆ ನೀವು ಇವರ ನಟನೆಯ ಕುರಿತು ಅರ್ಥ ಮಾಡಿಕೊಳ್ಳಬಹುದು. ಹೀಗೆ ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದು ಕೊಂಡಿರುವ ಆದ್ಯ ಪಾತ್ರದಾರಿ ಅನ್ವಿತಾ ಸಾಗರ್ ರವರು ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ತಮ್ಮ ಬಹುಕಾಲದ ಬಾಯ್ಫ್ರೆಂಡ್ ಜೊತೆ ಕಾಲಿಡಲಿದ್ದಾರೆ ಎಂಬುದು ತಿಳಿದು ಬಂದಿದೆ.

ಅಂದಹಾಗೆ ಇವರ ಬಾಯ್ ಫ್ರೆಂಡ್ ಯಾರು ಸಾಮಾನ್ಯ ನಟನಲ್ಲ, ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಮುಗ್ದ ನಟನೆಯ ಮೂಲಕ ಎಲ್ಲರನ್ನೂ ನಗಿಸುವುದರಲ್ಲಿ ಯಶಸ್ವಿಯಾಗಿರುವ ಅಶ್ವಿನ್ ರಾವ್ ರವರು ಅನ್ವಿತಾ ಸಾಗರ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಈ ಜೋಡಿ ನೂರಾರು ವರ್ಷಗಳ ಕಾಲ ಸುಖವಾಗಿ ಬಾಳಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ

Comments are closed.