Neer Dose Karnataka
Take a fresh look at your lifestyle.

ಬಿಗ್ ಬಾಸ್ ನಿಂದ ದೂರ ಉಳಿಯುತ್ತಾರಂತೆ ಸುದೀಪ್, ಬದಲಾಗಿ 3 ನಟರನ್ನು ಆಯ್ಕೆ ಮಾಡಿದ ಚಾನೆಲ್, ಯಾರ್ಯಾರು ಗೊತ್ತೇ??

7

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಆರಂಭವಾದ ದಿನದಿಂದಲೂ ಕೂಡ ಕನ್ನಡದ ಖ್ಯಾತ ನಟರಾಗಿರುವ ಸುದೀಪ್ ರವರು ಬಿಗ್ ಬಾಸ್ ಕಾರ್ಯಕ್ರಮವನ್ನು ಬಹಳ ಅತ್ಯುತ್ತಮವಾಗಿ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಈಗಾಗಲೇ ಏಳು ಸೀಸನ್ ಗಳಲ್ಲಿ ಯಶಸ್ವಿಯಾಗಿ ನಿರೂಪಣೆ ಮಾಡಿರುವ ಸುದೀಪ್ ರವರು, ಇದೇ ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮದಿಂದ ಒಂದೆರಡು ಎಪಿಸೋಡುಗಳ ಕಾಲ ದೂರ ಉಳಿಯಲಿದ್ದಾರೆ ಎಂಬುದು ತಿಳಿದು ಬಂದಿದೆ.

ಹೌದು ಸ್ನೇಹಿತರೇ ಇಲ್ಲಿಯವರೆಗೂ ಪ್ರತಿಯೊಂದು ವಾರದ ಕೊನೆಯ ಎಪಿಸೋಡ್ ಗಳನ್ನು ನಡೆಸಿಕೊಡುವ ಕಿಚ್ಚ ಸುದೀಪ್ ರವರು ಇದೀಗ ಯಾಕೆ ದೂರವುಳಿಯುತ್ತಾರೆ ಎಂಬುದನ್ನು ನೋಡುವುದಾದರೇ ಸುದೀಪ್ ರವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸುತ್ತಿದೆ, ಅದೇ ಸಮಯದಲ್ಲಿ ಕೋರೋನ ಎಲ್ಲೆಡೆ ಹೆಚ್ಚಾಗುತ್ತಿರುವ ಕಾರಣ ಅನಾರೋಗ್ಯ ವಿರುವಾಗ ಮನೆಯಲ್ಲಿಯೇ ಉಳಿದುಕೊಳ್ಳಬೇಕು ಎಂಬ ಮುಂಜಾಗ್ರತಾ ಕ್ರಮದಿಂದ ಸುದೀಪ್ ರವರು ಈ ವಾರ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವುದು ಆಗುವುದಿಲ್ಲ ಎಂದು ತಿಳಿದು ಬಂದಿದೆ.

ಇನ್ನು ಇದೇ ಸಮಯದಲ್ಲಿ ನಾವು ಬಿಗ್ ಬಾಸ್ ಕಾರ್ಯಕ್ರಮವನ್ನು ಮತ್ತೆ ಯಾರು ನಡೆಸಿಕೊಡುತ್ತಾರೆ ಎಂಬ ಆಯ್ಕೆಗಳನ್ನು ನಾವು ನೋಡುವುದಾದರೇ ನಮಗೆ ಮೊದಲನೇಯದಾಗಿ ಕೇಳಿ ಬರುತ್ತಿರುವ ಹೆಸರು ರಮೇಶ್ ಅರವಿಂದ್, ಎರಡನೆಯದಾಗಿ ಕ್ಯಾತ ನಟರಾಗಿರುವ ಪುನೀತ್ ರಾಜಕುಮಾರ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ, ಇನ್ನು ಮೂರನೆಯದಾಗಿ ಹಾಗೂ ಕೊನೆಯದಾಗಿ ಕನ್ನಡದ ಸ್ಟಾರ್ ನಟರಾಗಿರುವ ಯಶ್ ರವರ ಹೆಸರು ಕೇಳಿ ಬರುತ್ತಿದ್ದು ಖಂಡಿತ ಮೂವರಲ್ಲಿ ಯಾರು ನಡೆಸಿಕೊಟ್ಟರೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ಅತ್ಯಂತ ಯಶಸ್ವಿ ಟಿಆರ್ಪಿ ಪಡೆಯಲಿದೆ ಎಂಬುದು ವಾಹಿನಿಯ ಲೆಕ್ಕಾಚಾರವಾಗಿದೆ. ಅದು ನಿಜವೂ ಕೂಡ. ಈ ಮೂವರು ನಟರಲ್ಲಿ ಯಾರು ನಡೆಸಿಕೊಟ್ಟರೆ ನಿಮಗೆ ಇಷ್ಟ ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸುವುದನ್ನು ಮರೆಯಬೇಡಿ.

Leave A Reply

Your email address will not be published.