Neer Dose Karnataka
Take a fresh look at your lifestyle.

ನಾನಿನ್ನೂ ಚಿಕ್ಕವಳು ಆಂಟಿ ಯಲ್ಲ, ಎಂದ ಪ್ರಿಯಾಂಕಾ, ಇವರ ನಿಜವಾದ ವಯಸ್ಸೆಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಿನ್ನರಿ ಧಾರಾವಾಹಿ ಯಲ್ಲಿ ನಟನೆ ಮಾಡುವ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾಂಕಾ ರವರು ತದ ನಂತರ ವಿವಿಧ ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿ ಯಲ್ಲಿ ನೆಗೆಟಿವ್ ಶೇಡ್ ಪಾತ್ರದ ಮೂಲಕ ಭಾರಿ ಸದ್ದು ಮಾಡಿದ ಪ್ರಿಯಾಂಕಾ ರವರು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡರು.

ಇದಾದ ನಂತರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಳಿಕವಂತೂ ಇಡೀ ಕರ್ನಾಟಕದಲ್ಲಿ ಪ್ರಿಯಾಂಕಾ ಯಾರು ಎಂದರೆ ಎಲ್ಲರಿಗೂ ತಿಳಿಯುವಂತೆ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಹಲವಾರು ವಾರಗಳ ಕಾಲ ಇದ್ದು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡುವ ಮೂಲಕ ಸದ್ದು ಮಾಡಿದ್ದ ಪ್ರಿಯಾಂಕಾ ರವರು ಇತ್ತೀಚಿನ ಸಂದರ್ಶನದಲ್ಲಿ ನನಗೆ ನೀವಂದುಕೊಂಡಷ್ಟು ವಯಸ್ಸಾಗಿಲ್ಲ ನಾನಿನ್ನೂ ಚಿಕ್ಕವಳು ಆಂಟಿ ಎಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಹೌದು ಸ್ನೇಹಿತರೇ ವಿವಿಧ ಧಾರವಾಹಿಗಳಲ್ಲಿ ನೆಗೆಟಿವ್ ಪಾತ್ರದಲ್ಲಿ ನಟನೆ ಮಾಡುತ್ತಿರುವ ಪ್ರಿಯಾಂಕಾ ರವರು ನನಗೆ ಎಲ್ಲ ವಯಸ್ಸಿಗೆ ಮೀರಿದ ಪಾತ್ರಗಳು ಸಿಗುತ್ತಿವೆ, ನೆಗೆಟಿವ್ ಪಾತ್ರದಲ್ಲಿ ಮಾಡುತ್ತಿರುವ ಕಾರಣ ಎಲ್ಲರೂ ಹಾಗೆಂದು ಕೊಂಡಿದ್ದಾರೆ ನನಗೆ ನಿಜವಾಗಲು ಅಷ್ಟಾಗಿ ವಯಸ್ಸಾಗಿಲ್ಲ ನಾನು ಇನ್ನು ಚಿಕ್ಕ ಹುಡುಗಿ ನನಗೆ ಇದೀಗ ಕೇವಲ ಇಪ್ಪತ್ತಾರು ವರ್ಷ ಎಂದು ಉತ್ತರ ನೀಡಿದ್ದಾರೆ. 1996 ರಲ್ಲಿ ಜನಿಸಿರುವ ಪ್ರಿಯಾಂಕಾ ರವರಿಗೆ ಇದೀಗ ಕೇವಲ 26 ವರ್ಷಗಳು ಎಂದರೆ ನೀವು ನಂಬಲು ಅಸಾಧ್ಯ ಆದರೆ ಅದೇ ಅವರ ನಿಜವಾದ ವಯಸ್ಸು.

Comments are closed.