Neer Dose Karnataka
Take a fresh look at your lifestyle.

ದರ್ಶನ್ ರವರನ್ನು ಮೊದಲು ಡು ಬಾಸ್ ಎಂದು ಕರೆದ ವ್ಯಕ್ತಿ ಯಾರು ಗೊತ್ತಾ?? ಅಭಿಮಾನಿಗಳಲ್ಲ, ಖ್ಯಾತ ನಟ

1

ನಮಸ್ಕಾರ ಸ್ನೇಹಿತರೇ ದರ್ಶನ್ ಚಿತ್ರದಲ್ಲಿ ಡಿ ಬಾಸ್ ಎಂದೇ ಖ್ಯಾತಿ ಪಡೆದು ಕೊಂಡಿದ್ದಾರೆ, ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಲಕ್ಷಾಂತರ ಅಲ್ಲ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿರುವ ದರ್ಶನ್ ರವರನ್ನು ಕೆಲವರು ಗೌರವದಿಂದ ಇನ್ನೂ ಕೆಲವರು ಅಭಿಮಾನದಿಂದ ಇನ್ನು ಕೆಲವರು ಪ್ರೀತಿಯಿಂದ ಡಿ ಬಾಸ್ ಎಂದು ಕರೆಯುತ್ತಾರೆ.

ಡಿ ಬಾಸ್ ಎನ್ನುವುದು ಕರ್ನಾಟಕದಲ್ಲಿ ಒಂದು ಬ್ರಾಂಡ್ ಆದಂತೆ ಕಾಣುತ್ತಿದೆ, ಯಾಕೆಂದರೆ ಬಹುತೇಕ ಜನರು ದರ್ಶನ್ ಅವರನ್ನು ಹೆಸರಿಟ್ಟು ಕರೆಯುವುದು ಬಹಳ ಕಡಿಮೆ ಎಲ್ಲರೂ ಡಿ ಬಾಸ್ ಎಂದು ಕರೆಯುತ್ತಾರೆ, ಹಾಗಿದ್ದರೆ ಇವರಿಗೆ ಡಿ ಬಾಸ್ ಎಂಬ ಹೆಸರು ಹೇಗೆ ಬಂತು ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ, ಕೆಲವರು ಇದನ್ನು ಅಭಿಮಾನಿಗಳು ಇಟ್ಟಿದ್ದಾರೆ ಎಂದು ಕೊಂಡಿದ್ದಾರೆ. ಆದರೆ ಮೊದಲಿಗೆ ಡಿ ಬಾಸ್ ಎಂದು ಕರೆದ ವ್ಯಕ್ತಿ ಕನ್ನಡ ಚಿತ್ರರಂಗದ ಖ್ಯಾತ ನಟ ಒಬ್ಬರು. ಹೌದು ಸ್ನೇಹಿತರೆ ನೀವು ಅಭಿಮಾನಿಗಳು ನಟರಿಗೆ ಹೆಸರು ಇಡುವುದನ್ನು ನೀವು ನೋಡಿರಬಹುದು ಆದರೆ ಇಲ್ಲಿ ಸ್ಟಾರ್ ನಟರೊಬ್ಬರು ದರ್ಶನ್ ರವರಿಗೆ ಡಿ ಬಾಸ್ ಎಂದು ಹೆಸರಿಟ್ಟಿದ್ದಾರೆ.

ಹೌದು ಸ್ನೇಹಿತರೇ ಹೀಗೆ ದರ್ಶನ್ ಅವರನ್ನು ಎಂದು ಕರೆದ ವ್ಯಕ್ತಿ ಯಾರು ಮತ್ಯಾರು ಅಲ್ಲ ಅವರೇ ಕನ್ನಡ ಚಿತ್ರರಂಗದ ಕನ್ನಡದ ಟಾಪ್ ನಟರಲ್ಲಿ ಒಬ್ಬರಾಗಿದ್ದ ಟೈಗರ್ ಪ್ರಭಾಕರ್ ರವರ ಮಗ ವಿನೋದ್ ಪ್ರಭಾಕರ್, ಇದರ ಕುರಿತು ದರ್ಶನ್ ಅವರು ಮಾತನಾಡಿ ನಾನು ಇಲ್ಲಿಯವರೆಗೂ ವಿನೋದ್ ರವರನ್ನು ವಿನೋದ್ ಎಂದು ಕರೆದೆ ಇಲ್ಲ ನಾನು ಸದಾ ಆತನನ್ನು ಟೈಗರ್ ಎಂದು ಕರೆಯುತ್ತೇನೆ ಇನ್ನು ಆತ ಕೂಡ ನನ್ನನ್ನು ಡಿ ಬಾಸ್ ಎನ್ನುತ್ತಾನೆ ಮೊದಲು ಡಿ ಬಾಸ್ ಎಂಬ ಪದ ಬಳಕೆ ಮಾಡಿದ್ದು ವಿನೋದ್ ಪ್ರಭಾಕರ್ ಎಂದು ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.