Neer Dose Karnataka
Take a fresh look at your lifestyle.

ರಾಜೀವ್ ಅಸಲಿ ಮುಖ ಅರ್ಥವಾಯಿತು ಎಂದು ರೊಚ್ಚಿಗೆದ್ದ ಪ್ರೇಕ್ಷಕರು, ರಾಜೀವ್ ರವರು ಈ ರೀತಿ ಮಾಡಿದ್ದು ಸರಿಯೇ??

ನಮಸ್ಕಾರ ಸ್ನೇಹಿತರೇ ಬಹುಶಹ ನಿಮಗೆಲ್ಲರಿಗೂ ತಿಳಿದಿರಬಹುದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇತರ ಸ್ಪರ್ಧಿಗಳಿಗೆ ನಾಮಿನೇಷನ್ ಪ್ರಕ್ರಿಯೆಯಿಂದ ತಪ್ಪಿಸಿ ಕೊಳ್ಳಲು ಅನುವು ಮಾಡಿಕೊಳ್ಳಲು ಬಿಗ್ಬಾಸ್ ಹೊಸದೊಂದು ರೀತಿಯ ಟಾಸ್ಕ್ ನೀಡಿದರು. ಶನಿವಾರ ಕಿಚ್ಚ ಸುದೀಪ್ ರವರು ಕಾರಣಾಂತರಗಳಿಂದ ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಳ್ಳದೆ ಇರುವ ಕಾರಣ ಎಪಿಸೋಡನ್ನು ಬಹಳ ವಿಶೇಷವಾಗಿ ಆಯೋಜನೆ ಮಾಡಲು ಆಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿತ್ತು.

ಸ್ಪರ್ಧಿಗಳು ಯಾವುದೇ ವಾರದಲ್ಲಿ ಬೇಕಾದರೂ ನಾಮಿನೇಟ್ ಆಗಿದ್ದರು, ಅವರ ನಾಮಿನೇಷನ್ ಆದ ಲಿಸ್ಟಿನಿಂದ ಅಮೇನಿಟಿ ಪಡೆದು ಕೊಳ್ಳಲು ಬಳಸ ಬಹುದಾದಂತಹ ಪಾಸನ್ನು ಪಡೆಯಲು ಅವಕಾಶ ನೀಡಿ ಟಾಸ್ಕ್ ಮಾಡಲಾಗಿತ್ತು. ಇದನ್ನು ಗೋಲ್ಡನ್ ಪಾಸ್ ಎಂದು ಕರೆದಿದ್ದ ಬಿಗ್ ಬಾಸ್, ಈ ಪಾಸ್ ಅನ್ನು ಯಾರು ಪಡೆದುಕೊಂಡರೂ ಕೂಡ ನಾಮಿನೇಷನ್ ಇಂದ ಬಚಾವಾಗಬಹುದು ಎಂದು ತಿಳಿದ ತಕ್ಷಣ ಎಲ್ಲಾ ಸ್ಪರ್ಧಿಗಳು ಬಹಳ ಕಷ್ಟಪಟ್ಟು ಟಾಸ್ಕ್ ನಲ್ಲಿ ಭಾಗವಹಿಸಿದ್ದರು.

ಈ ಸಮಯದಲ್ಲಿ ಇಷ್ಟು ದಿವಸ ಕ್ರೀಡಾ ಸ್ಪೂರ್ತಿ ಎಂಬ ಪದಗಳನ್ನು ಹೆಚ್ಚಾಗಿ ಬಳಸಿ ಎಲ್ಲಾ ಟಾಸ್ಕ್ ನಲ್ಲಿಯೂ ಪಾಲ್ಗೊಳ್ಳುತ್ತಿದ್ದ ರಾಜೀವ್ ರವರ ಮತ್ತೊಂದು ಮುಖ ಬಯಲಾಗಿದೆ ಎಂಬ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿವೆ, ಯಾಕೆಂದರೆ ರಾಜೀವ್ ರವರು ಶಮಂತ್ ರವರನ್ನು ಈ ಟಾಸ್ಕ್ ನಲ್ಲಿ ನಡೆಸಿಕೊಂಡ ರೀತಿ ಯಾವುದೇ ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಎಂಬುದು ಸಾಮಾಜಿಕ ಜಾಲತಾಣಗಳಿಂದ ತಿಳಿದು ಬಂದಿದೆ.

ಹೌದು ಸ್ನೇಹಿತರೆ ಈ ಟಾಸ್ಕ್ ನಲ್ಲಿ ಭಾಗವಹಿಸಿದ್ದಾಗ ರಾಜೀವ್ ರವರು ಬಹಳ ಲೆಕ್ಕಾಚಾರದಲ್ಲಿ ಆಟವಾಡಿದ್ದು ಸ್ಪಷ್ಟವಾಗಿ ಕಾಣುವಂತೆ ಇತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ, ಯಾಕೆಂದರೆ ಬೇರೊಬ್ಬರ ಬ್ಯಾಗ್ ಎತ್ತುಕೊಂಡು ಬಸ್ ಹತ್ತುವ ಸಂದರ್ಭದಲ್ಲಿ ರಾಜೀವ್ ರವರು ಮೊದ ಮೊದಲು ಬಹಳ ವೇಗವಾಗಿ ಓಡಿ ಹೋಗಿ ಬಸ್ ಹತ್ತುತ್ತಿದ್ದರು. ಬಹಳ ಫಿಟ್ ಆಗಿರುವ ರಾಜೇವ್ ರವರು ವೇಗವಾಗಿ ಬಸ್ ಓಡಿ ಹತ್ತುವುದು ಬಹಳ ಸುಲಭವೇ ಸರಿ.

ಆದರೆ ಇದೇ ಸಮಯದಲ್ಲಿ ಶಮಂತ್ ರವರ ಜೊತೆ ಟಾಸ್ಕ್ ನಲ್ಲಿ ಕೆಲವೊಂದು ವಿವಾದಗಳು ಸೃಷ್ಟಿಯಾದ ಕಾರಣ ಶಮಂತ್ ರವರಿಗೆ ಬಹಳ ಕಾರವಾಗಿ ರಾಜೀವ್ ರವರು ಪ್ರತಿಕ್ರಿಯೆ ನೀಡಿದರು. ಅದೇ ಸಮಯದಲ್ಲಿ ಕೊನೆಗೆ ಶುಭ ಪೂಂಜಾ ಹಾಗೂ ರಾಜೀವ್ ರವರು ಇಬ್ಬರು ಉಳಿದು ಕೊಂಡಾಗ ಶುಭ ಪುಂಜ ಅವರು ರಾಜೀವ್ ರವರ ಬ್ಯಾಗ್ ಎತ್ತುಕೊಂಡು ಹೋಗುವಾಗ ರಾಜೀವ್ ರವರನ್ನು ಓಡುವುದರಲ್ಲಿ ಸೋಲಿಸಿದರು. ಆದರೆ ಇಲ್ಲಿ ರಾಜೀವ್ ರವರು ಹೆಚ್ಚಿನ ಪ್ರಯತ್ನ ಮಾಡಲಿಲ್ಲ, ಆದರೆ ಇಲ್ಲಿ ಪ್ರೇಕ್ಷಕರು ಶುಭ ಪೂಂಜ ರವರು ರಾಜೀವ್ ರವರ ಗಿಂತ ವೇಗವಾಗಿ ಓಡಲು ಸಾಧ್ಯವೇ?? ಇಲ್ಲವೇ ಇಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ

ಹಾಗೂ ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯಲ್ಲಿರುವ ಶಮಂತ್ ಗೌಡರವರು ತಾವು ವಿಶ್ವನಾಥರ ವರಿಗಿಂತ ವೇಗವಾಗಿ ಓಡಿದರೆ ತಾವು ಗೋಲ್ಡನ್ ಪಾಸ್ ಪಡೆಯುವ ಟಾಸ್ಕ ನಿಂದ ಹೊರ ಬರುತ್ತೇನೆ ಎಂಬುದು ತಿಳಿದಿದ್ದರೂ ಕೂಡ, ಹೆಚ್ಚಿನ ಮುಂದಾಲೋಚನೆ ಮಾಡದೆ ಎರಡನೇ ಅವಕಾಶದಲ್ಲಿ ಗಾಯಕ ವಿಶ್ವನಾಥ್ ರವರನ್ನು ಮೀರಿಸಿ ಬಹಳ ವೇಗವಾಗಿ ಓಡಿ ಬಸ್ ಹತ್ತಿದರು. ಈ ಮೂಲಕ ಶುಭ ಪುಂಜ ರವರಿಗೆ ಗೋಲ್ಡನ್ ಪಡೆದುಕೊಳ್ಳುವ ಅವಕಾಶವನ್ನು ತಾವೇ ಬಿಟ್ಟುಕೊಟ್ಟಿದ್ದರು.

ಆದರೆ ಟಾಸ್ಕ್ ನ ಕೊನೆಯಲ್ಲಿ ಶುಭಪೂಂಜಾ ರವರ ಜೊತೆ ವೇಗವಾಗಿ ಓಡದೆ ರಾಜೀವ್ ರವರು ಈ ರೀತಿ ಮಾಡಿದ್ದು ಎಷ್ಟು ಸರಿ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಯಾಕೆಂದರೆ ರಾಜೀವ್ ರವರು ಸದಾ ಕ್ರೀಡಾಸ್ಪೂರ್ತಿ ಕುರಿತು ಬಿಗ್ಬಾಸ್ ಮನೆಯಲ್ಲಿ ಎಲ್ಲರಿಗೂ ಪಾಠಗಳನ್ನು ಮಾಡುತ್ತಿರುತ್ತಾರೆ ಅವರು ಹೀಗೆ ಮಾಡಿದ್ದು ಎಷ್ಟು ಸರಿ ಎಂದು ಜನರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಹಾಗೂ ಇದೇ ಸಮಯದಲ್ಲಿ ಶಮಂತ್ ರವರು ಪರೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.