Neer Dose Karnataka
Take a fresh look at your lifestyle.

ಖ್ಯಾತ ನಟಿಯಲ್ಲ, ನಟರಲ್ಲ ಸುದೀಪ್ ರವರ ಜೊತೆ ವೇದಿಕೆ ಹಂಚಿಕೊಳ್ಳುತ್ತಾರಂತೆ ಈ ವಿಶೇಷ ಅತಿಥಿ. ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮವನ್ನು ಇದೇ ಮೊಟ್ಟ ಮೊದಲ ಬಾರಿಗೆ ಕಳೆದ ಎರಡು ವಾರಗಳ ಕಾಲ ಕಿಚ್ಚ ಸುದೀಪ್ ರವರು ನಡೆಸಿ ಕೊಡಲು ಸಾಧ್ಯವಾಗಿಲ್ಲ. ಇದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿರುವುದು ಸುಳ್ಳಲ್ಲ. ಆದರೆ ಅದೇ ಸಮಯದಲ್ಲಿ ಸುದೀಪ್ ರವರಿಗೆ ಅನಾರೋಗ್ಯ ಇರುವ ಕಾರಣ ಎಲ್ಲರೂ ಬೇಗ ಹುಷಾರಾಗಿ ಬರಲಿ ಎಂದು ತುದಿಗಾಲಲ್ಲಿ ಕಾದು ನಿಂತಿದ್ದಾರೆ.

ಮನೆಯ ಸ್ಪರ್ಧಿಗಳು ಮಾತ್ರವಲ್ಲದೆ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಬಿಗ್ಬಾಸ್ ನೋಡುವ ಜನರು ಸುದೀಪ್ ರವರು ಮಾತ್ರ ವೇದಿಕೆಗೆ ಸರಿ ಇನ್ಯಾವುದೇ ನಟರು ಬಂದರೂ ಸುದೀಪ್ ರವರು ಮಾಡಿದಷ್ಟು ಅದ್ಭುತವಾಗಿ ನಿರೂಪಣೆ ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ, ಬಹುಶಹ ಅಭಿಪ್ರಾಯಗಳನ್ನು ನೋಡಿದ ಬಳಿಕ ವಾಹಿನಿ ಕೆಲವು ಅತಿಥಿಯಾಗಿ ನಟರನ್ನು ನಿಲ್ಲಿಸಿರಬಹುದು ಎಂದು ಕೂಡ ಕೇಳಿಬಂದಿದೆ.

ಇದೇ ಸಮಯದಲ್ಲಿ ಇದೀಗ ವಿಶೇಷ ಅಂದರೆ ಇನ್ಯಾವುದೆ ನಟರಲ್ಲ ಅಥವಾ ನಟಿಯರೆಲ್ಲ ಬಹಳ ವಿಶೇಷವಾದ ವ್ಯಕ್ತಿಯೊಬ್ಬರು ಸುದೀಪ್ ಅವರ ಜೊತೆ ತಮ್ಮ ನೆಚ್ಚಿನ ಸ್ಪರ್ಧಿಗಳ ಜೊತೆ ಮಾತನಾಡಲು ವೇದಿಕೆಯ ಮೇಲೆ ಬರುತ್ತಾರೆ ಎಂಬ ಮಾತು ಕೇಳಿ ಬಂದಿದೆ, ಇನ್ನು ವಾಹಿನಿ ಕಡೆಯಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲವಾದರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಹಳ ವೇಗವಾಗಿ ಹಬ್ಬುತ್ತಿದೆ. ವಿಶೇಷ ಅತಿಥಿ ಯಾರು ಎಂಬುದನ್ನು ನೋಡುವುದಾದರೇ ಅವರು ಮತ್ತ್ಯಾರು ಅಲ್ಲ ಇತ್ತೀಚೆಗಷ್ಟೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕಿಚ್ಚ ಸುದೀಪ್ ರವರ ಪುತ್ರಿ ಸಾನ್ವಿ ಸುದೀಪ್ ರವರು. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಕುರಿತಂತೆ ಹಲವಾರು ಪ್ರಶ್ನೆಗಳಿಗೆ ಇವರು ಉತ್ತರ ನೀಡಿದ್ದಾರೆ.

Comments are closed.