Neer Dose Karnataka
Take a fresh look at your lifestyle.

ಅಡುಗೆ ಭಟ್ಟರು ಮಾಡುವ ಟೊಮೇಟೊ ಸಾರು ಮಾಡಿ ನೋಡಿ, ಮನೆಯಲ್ಲಿ ಬಾಯಿ ಚಪ್ಪರಿಸಿಕೊಂಡು ತಿಂತಾರೆ ಎಲ್ಲರೂ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಅಡುಗೆ ಭಟ್ಟರು ಮಾಡುವ ಟೊಮೇಟೊ ಸಾರು ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಟೊಮೇಟೊ ಸಾರು ಮಾಡಲು ಬೇಕಾಗುವ ಸಾಮಗ್ರಿಗಳು: ಒಂದೂವರೆ ಚಮಚ ಧನಿಯಾ, 1 ಚಮಚ ಜೀರಿಗೆ, ಕಾಲು ಚಮಚ ಮೆಂತ್ಯ, 5 – 6 ಬ್ಯಾಡಿಗೆ ಮೆಣಸಿನಕಾಯಿ,2 ಚಮಚ ತೆಂಗಿನಕಾಯಿ ತುರಿ, 2 ಟೊಮೇಟೊ,2 ಚಮಚ ಬೆಲ್ಲ,ರುಚಿಗೆ ತಕಷ್ಟು ಉಪ್ಪು, 4 ಬಟ್ಟಲು ಬೇಳೆ ಕಟ್ಟು, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 2 – 3 ಚಮಚ ತುಪ್ಪ, ಸಾಸಿವೆ, ಇಂಗು, 2 ಒಣಮೆಣಸಿನಕಾಯಿ.

ಟೊಮೇಟೊ ಸಾರು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಒಂದೂವರೆ ಚಮಚದಷ್ಟು ಧನಿಯವನ್ನು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚ ಜೀರಿಗೆ, ಕಾಲು ಚಮಚ ಮೆಂತ್ಯವನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ.ನಂತರ ಇದಕ್ಕೆ 5 – 6 ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಮತ್ತೆ ಫ್ರೈ ಮಾಡಿಕೊಂಡು ಒಂದು ಪ್ಲೇಟಿಗೆ ಹಾಕಿ ತಣ್ಣಗಾಗಲು ಬಿಡಿ.

ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ, 2 ಚಮಚ ತೆಂಗಿನಕಾಯಿ ತುರಿ,2 ಹಚ್ಚಿದ ಟೊಮೇಟೊ ಹಾಗೂ ನೀರನ್ನು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿ ಗ್ಯಾಸ್ ಮೇಲೆ ಇಟ್ಟುಇದಕ್ಕೆ 2 ಚಮಚ ಬೆಲ್ಲ, ರುಚಿಗೆ ತಕಷ್ಟು ಉಪ್ಪನ್ನು ಹಾಕಿ 5 – 6 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ.ನಂತರ ಇದಕ್ಕೆ 4 ಬಟ್ಟಲಿನಷ್ಟು ಬೇಳೆ ಕಟ್ಟನ್ನು ಹಾಕಿ 4 – 5 ನಿಮಿಷಗಳ ಕಾಲ ಕುದಿಸಿಕೊಳ್ಳಿ.ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪುನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಿ.

ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 2 – 3 ಚಮಚದಷ್ಟು ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಇದಕ್ಕೆ ಸಾಸಿವೆ, ಇಂಗು , 2 ಒಣಮೆಣಸಿನಕಾಯಿಯನ್ನು ಹಾಕಿ ಒಗ್ಗರಣೆ ಮಾಡಿಕೊಂಡು ಕುದಿಯುತ್ತಿರುವ ಸಾರಿಗೆ ಮಿಕ್ಸ್ ಮಾಡಿದರೆ ಅಡುಗೆ ಭಟ್ಟರು ಮಾಡುವ ಟೊಮೇಟೊ ಸಾರು ಸವಿಯಲು ಸಿದ್ದ.

Comments are closed.