Neer Dose Karnataka
Take a fresh look at your lifestyle.

ಕೆಲವು ವಾರಗಳು ಇದ್ದರೂ ಕೂಡ ಪ್ರೇಕ್ಷಕರ ಮನಗೆದ್ದಿದ್ದ ಪ್ರಿಯಾಂಕಾರ ಬಿಗ್ ಬಾಸ್ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡದ ಖ್ಯಾತ ನಟಿಯಾಗಿರುವ ಪ್ರಿಯಾಂಕ ತಿಮ್ಮೇಶ್ ರವರು ಕಳೆದ ಕೆಲವು ವಾರಗಳ ಹಿಂದೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಯಾರು ಊಹಿಸದ ರೀತಿಯಲ್ಲಿ ಪ್ರಿಯಂಕ ತಿಮ್ಮೇಶ್ ರವರು ಮನೆಯ ಒಳಗಡೆ ಹೋಗಿ ಕೆಲವು ದಿನಗಳ ಕಾಲ ಯಾವುದೇ ಸದ್ದು ಮಾಡಿರಲಿಲ್ಲ. ಯಾಕೆಂದರೆ ಮನೆಯ ಸ್ಪರ್ಧಿಗಳು ಈಗಾಗಲೇ ಕೆಲವೊಂದು ವಾರಗಳು ಪರಸ್ಪರ ಕಳೆದಿರುವ ಕಾರಣ ಪ್ರಿಯಾಂಕಾ ರವರು ಮನೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗಿತ್ತು.

ಆದರೆ ಹೀಗೆ ಸಮಯ ತೆಗೆದುಕೊಂಡರೂ ಕೂಡ ಕಳೆದ ಎರಡು ವಾರಗಳಿಂದ ಪ್ರಿಯಾಂಕ ತಿಮ್ಮೇಶ್ ರವರು ಬಹಳ ಸದ್ದು ಮಾಡಿದ್ದಾರೆ, ಅದರಲ್ಲಿಯೂ ಬಾಲ್ ಅನ್ನು ತಲೆಯಿಂದ ತಳ್ಳುವ ಟಾಸ್ಕ ನಲ್ಲಿ ಪ್ರಿಯಾಂಕ ರವರು ಮಾತನಾಡಿದ ರೀತಿ ಹಾಗೂ ಸರಿಯಾದ ಕ್ರಮ ಪಾಲಿಸಿದ ರೀತಿ ಎಲ್ಲರಿಗೂ ಬಹಳ ಇಷ್ಟವಾಗಿದೆ. ತದ ನಂತರ ಕೆಲವೊಂದು ವಿಚಾರಗಳಲ್ಲಿ ಪ್ರಿಯಾಂಕಾ ರವರ ಮಾತು ಕೇಳಿ ನಿಜಕ್ಕೂ ಪ್ರೇಕ್ಷಕರು ಪ್ರಿಯಾಂಕಾರನ್ನು ಇಷ್ಟಪಟ್ಟಿದ್ದಾರೆ.

ಹೀಗೆ ಹಲವಾರು ಸ್ಪರ್ಧಿಗಳು ಹಲವಾರು ವಾರಗಳಿಂದ ಇದ್ದರೂ ಕೂಡ ಪಡೆದ ಜನಪ್ರಿಯತೆಯನ್ನು ಪ್ರಿಯಾಂಕಾ ತಿಮ್ಮೇಶ್ ರವರು ಕೆಲವೇ ಕೆಲವು ವಾರಗಳಲ್ಲಿ ಪಡೆದಿದ್ದಾರೆ. ಇನ್ನು ಹೀಗೆ ಇನ್ನೇನು ಮತ್ತಷ್ಟು ಸದ್ದು ಮಾಡುತ್ತಿದ್ದಾರೆ ಎನ್ನುವಷ್ಟರಲ್ಲಿ ಮನೆಯಿಂದ ಹೊರಗಡೆ ಬಂದಿದ್ದರೂ ಕೂಡ ಪ್ರೇಕ್ಷಕರ ಮನಗೆದ್ದಿದ್ದು ಸುಳ್ಳಲ್ಲ. ಇನ್ನು ಇವರ ಸಂಭಾವನೆ ಕುರಿತು ನಾವು ಮಾತನಾಡುವುದಾದರೆ, ಒಂದು ವಾರಕ್ಕೆ ಪ್ರಿಯಂಕ ತಿಮ್ಮೇಶ್ ರವರು 45 ಸಾವಿರ ರೂಪಾಯಿಗಳನ್ನು ಸಂಭಾವನೆಯನಾಗಿ ಪಡೆದು ಕೊಳ್ಳುತ್ತಿದ್ದರು ಎಂಬುದು ತಿಳಿದು ಬಂದಿದೆ.

Comments are closed.