Neer Dose Karnataka
Take a fresh look at your lifestyle.

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಆರತಿಯವರ ಮೊಮ್ಮಗಳು ಕೂಡ ಖ್ಯಾತ ನಟಿಯಂತೆ! ಅವರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ ಸುಮಾರು 70-80 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ತಮ್ಮ ಅಮೋಘವಾದ ನಟನೆ ಹಾಗೂ ಭಾವನಾತ್ಮಕವಾದ ಅಭಿನಯದಿಂದ ಸಾಕಷ್ಟು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಇನ್ನು ಕನ್ನಡ ಚಿತ್ರರಂಗದ ಇಂತಹ ನಟಿಯರಲ್ಲಿ ಹಿರಿಯ ನಟಿ ಆರತಿ ಕೂಡ ಒಬ್ಬರು.

ಕೇವಲ ತಮ್ಮ ಮುಖದ ಹಾವಭಾವಗಳಿಂದ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಕನ್ನಡಿಗರ ಮನಸ್ಸನ್ನು ಗೆದ್ದವರು. ಕನ್ನಡದ ಅನೇಕ ಸ್ಟಾರ್ ನಟರೊಂದಿಗೆ ಅಭಿನಯಿಸಿದ ಅವರ ಸಿನಿಮಾ ವೃತ್ತಿ ಜೀವನ ಕನ್ನಡ ಚಿತ್ರರಂಗದಲ್ಲಿ ಇತಿಹಾಸವಾಗಿದೆ. ಗೆಜ್ಜೆಪೂಜೆ ಎಂಬ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ನಟಿ ಆರತಿ ಅವರು ಪಾದರ್ಪಣೆ ಮಾಡಿದ್ದರು. ನಂತರ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಅವರು ಸಾಕಷ್ಟು ಸಿನಿಪ್ರಿಯರ ಮೆಚ್ಚುಗೆಯನ್ನು ಪಡೆದರು.

ಕನ್ನಡ ಚಿತ್ರರಂಗದಲ್ಲಿ ಅವರು ನಾಗರಹಾವು, ಎಡಕಲ್ಲು ಗುಡ್ಡದಮೇಲೆ, ಬಿಳಿ ಹೆಂಡತಿ, ಪಡುವಾರಹಳ್ಳಿ ಪಾಂಡವರು, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ ಸೇರಿದಂತೆ ಸುಮಾರು 120ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ಇವರು ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ 12 ಸಿನಿಮಾಗಳಲ್ಲಿ ಇವರೇ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ನಂತರ ಅವರು ಸಿನಿಮಾರಂಗದಿಂದ ಸ್ವಲ್ಪ ಕಾಲ ದೂರ ಉಳಿದರು. ಆದರೆ 2005ರಲ್ಲಿ ಮಿಠಾಯಿ ಮನೆ ಎಂಬ ಕಿರುತೆರೆಯ ಧಾರಾವಾಹಿಯನ್ನು ನಿರ್ದೇಶಿಸುವುದರ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಬಂದರು. ಆದರೆ ಇದೀಗ ಮತ್ತೆ ಅವರು ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ. ಇನ್ನು ಇವರು ಕೇವಲ ಸಿನಿಮಾ ನಟಿಯಾಗಿರದೇ ವಿಧಾನಪರಿಷತ್ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ. ಅಂದಿನ ಸಮಯದಲ್ಲಿ ಅವರು ಉತ್ತರ ಕರ್ನಾಟಕದ ಸುಮಾರು 20 ಹಳ್ಳಿಗಳನ್ನು ದತ್ತು ಪಡೆದು ಅವುಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡರು.

ಹೀಗೆ ಅವರು ಸಾಮಾಜಿಕ ಕಾರ್ಯದಲ್ಲಿ ಕೂಡ ಜನಪ್ರಿಯತೆ ಪಡೆದರು. ಇನ್ನು ನಟಿ ಆರತಿ ಅವರ ಮೊಮ್ಮಗಳು ಕೂಡ ಖ್ಯಾತ ನಟಿಯಂತೆ. ಹಾಗಾದರೆ ಅವರು ಯಾರು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ. ಹೌದು ಕನ್ನಡದ ಖ್ಯಾತ ನಟಿ ಆರತಿಯವರ ಮೊಮ್ಮಗಳ ಹೆಸರು ಸಾಂಘವಿ. ಇವರು ಕೂಡ ನಟಿಯಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹೌದು ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಹಲವಾರು ಸಿನಿಮಾಗಳಲ್ಲಿ ನಟಿಯಾಗಿ ಹಾಗೂ ಪೋಷಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ಮೊದಲು ತಮ್ಮ ಅಜ್ಜಿ ಆರತಿ ಅವರ ಹೆಸರನ್ನು ಬಳಸದೆ ಬಣ್ಣದ ಲೋಕಕ್ಕೆ ಬಂದವರು. ನಂತರ ಬಣ್ಣದ ಲೋಕದಲ್ಲಿ ಒಂದು ಸ್ಥಾನ ಪಡೆದುಕೊಂಡ ನಂತರ ಅವರು ಸತ್ಯವನ್ನು ಹಂಚಿಕೊಂಡರು. ಇನ್ನು ಇವರು ಕನ್ನಡ ಚಿತ್ರರಂಗಕ್ಕೆ ಯಾವಾಗ ಪಾದರ್ಪಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.