Neer Dose Karnataka
Take a fresh look at your lifestyle.

ಸದ್ಯದಲ್ಲಿಯೇ ಬರಲಿದೆ ಕಾದಂಬರಿ 2 ಧಾರಾವಾಹಿ, ನಾಯಕಿಯಾಗಿ ಜೀ ಕನ್ನಡ ವಾಹಿನಿಯ ಖ್ಯಾತ ನಟಿ. ಯಾರಂತೆ ಗೊತ್ತಾ??

96

ನಮಸ್ಕಾರ ಸ್ನೇಹಿತರೇ ಒಂದಾನೊಂದು ಕಾಲದಲ್ಲಿ ಸಾಕಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದ್ದ ಧಾರಾವಾಹಿಗಳಲ್ಲಿ ಕಾದಂಬರಿ ಧಾರವಾಹಿ ಕೂಡ ಒಂದು. ಹೌದು ಕಾದಂಬರಿ ಧಾರಾವಾಹಿ ಆಗುವ ಸಮಯವಾದರೆ ಸಾಕು ಇಡೀ ಕುಟುಂಬವೇ ಟಿವಿ ಮುಂದೆ ಕುಳಿತಿರುತ್ತಿತ್ತು. ಅಷ್ಟರಮಟ್ಟಿಗೆ ಧಾರಾವಾಹಿ ಪ್ರಖ್ಯಾತಿ ಪಡೆದಿತ್ತು. ಇನ್ನು ಈ ದಾರಾವಾಹಿ ಮೇಲೆ ಹಲವಾರು ನೆಟ್ಟಿಗರು ಟ್ರೋಲ್ ಕೂಡ ಮಾಡಿದ್ದುಂಟು. ಹೌದು ಹಲವಾರು ವರ್ಷಗಳ ಕಾಲ ಪ್ರಸಾರವಾದ ಈ ಧಾರವಾಹಿ ಜನರ ನೆಚ್ಚಿನ ಧಾರಾವಾಹಿಯಾಗಿ ರೂಪುಗೊಂಡಿತ್ತು.

ಇನ್ನು ಈ ಧಾರವಾಹಿಯ ಮೂಲಕ ಹಲವಾರು ಕಲಾವಿದರು ಇಂದು ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಪ್ರಮುಖ್ಯತೆಯನ್ನು ಪಡೆದಿದ್ದಾರೆ. ಹೌದು ಕಾದಂಬರಿ ಧಾರಾವಾಹಿ ಹಲವಾರು ಕಲಾವಿದರಿಗೆ ಮುಂದಿನ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಕಾದಂಬರಿ ಧಾರವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ ಕೆಲವೇ ಕೆಲವು ವೀಕ್ಷಕರು ಮಾತ್ರ ಕಿರುತೆರೆ ವೀಕ್ಷಿಸುತ್ತಿದ್ದರು. ಅಂತಹ ಸಮಯದಲ್ಲಿ ಈ ಧಾರಾವಾಹಿ ಸಾಕಷ್ಟು ಯಶಸ್ಸನ್ನು ಪಡೆದಿತ್ತು. ಕನ್ನಡದಲ್ಲಿ ಸಾವಿರಾರು ಎಪಿಸೋಡುಗಳನ್ನು ಪ್ರಸಾರ ಮಾಡಿದ ಧಾರವಾಹಿ ಅಂದಿನ ದಿನಗಳಲ್ಲಿ ಇತಿಹಾಸವನ್ನು ಸೃಷ್ಟಿಸಿತ್ತು.

ಇನ್ನು ಈ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಬಂದ ಶ್ವೇತ ಚಂಗಪ್ಪ ಅವರು ಇಂದು ಕನ್ನಡ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಹೌದು ಇದೀಗ ಶ್ವೇತ ಚಂಗಪ್ಪ ಅವರು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ ಸೃಜನ್ ಲೋಕೇಶ್ ನಿರೂಪಣೆಯ ಮಜಾ ಟಾಕೀಸ್ ರಾಣಿ ಎಂಬ ಪಾತ್ರದಲ್ಲಿ ಅವರು ನಟಿಸಿದ್ದರು. ಈ ಪಾತ್ರದ ಮೂಲಕ ಅವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಅದೇ ರೀತಿ ಸಾಕಷ್ಟು ಕಲಾವಿದರು ಕಾದಂಬರಿ ಧಾರಾವಾಹಿ ಮೂಲಕ ತಮ್ಮ ಜೀವನದ ಮಾರ್ಗವನ್ನು ಕಂಡುಕೊಂಡರು.

ಇಂದಿಗೂ ಕೂಡ ಕಿರುತೆರೆಯಲ್ಲಿ ಪ್ರಸಾರ ಮಾಡಿದರೆ ಕಾದಂಬರಿ ಧಾರಾವಾಹಿ ಒಳ್ಳೆಯ ಟಿ ಆರ್ ಪಿ ಪಡೆದುಕೊಳ್ಳುವುದು ಗ್ಯಾರಂಟಿ. ಇನ್ನು ಕೆಲವರು ಹಳೆಯ ಧಾರಾವಾಹಿ ಯಾಕೆ ಎಂದು ಪ್ರಶ್ನೆಯನ್ನು ಕೂಡ ಮಾಡಬಹುದು. ಆದರೆ ಇದೀಗ ಹೊಸ ಧಾರವಾಹಿಯೊಂದು ಪ್ರಸಾರವಾಗಲಿದೆ. ಹೌದು ಈ ಹಿಂದೆ ಪ್ರಸಾರವಾಗಿದ್ದ ಕಾದಂಬರಿ ಧಾರವಾಹಿಯಂತೆ ಕಾದಂಬರಿ 2 ಧಾರವಾಹಿ ಪ್ರಸಾರವಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಈ ಧಾರಾವಾಹಿಯ ಕಥೆ ಬಗ್ಗೆ ತಿಳಿದು ಬಂದಿಲ್ಲ. ಇನ್ನು ಕೆಲವರು ಹೇಳುವ ಪ್ರಕಾರ ಕಾದಂಬರಿ 2 ಹಳೆಯ ಕಾದಂಬರಿ ಧಾರಾವಾಹಿ ಮುಂದುವರೆದ ಭಾಗ ಎಂದು ಹೇಳುತ್ತಿದ್ದಾರೆ.

ಇನ್ನು ಈ ಹೊಸ ಧಾರವಾಹಿ ಜೀ ಕನ್ನಡ ವಾಹಿನಿಯ ಖ್ಯಾತ ನಟಿಯೊಬ್ಬರು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹೌದು ಅವರು ಮತ್ತ್ಯಾರು ಅಲ್ಲ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾರು ಧಾರಾವಾಹಿಯ ಜನನಿ ಎಂಬ ಪಾತ್ರದಲ್ಲಿ ನಟಿಸಿರುವ ಪವಿತ್ರ. ಹೌದು ಇದೀಗಾಗಲೇ ಪರ್ವ ದರವಹಿಯ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ನಟಿ ಪವಿತ್ರ ಅವರು ಇದೀಗ ಕಾದಂಬರಿ 2 ಧಾರಾವಾಹಿಯ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಕೆಲವು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.