Neer Dose Karnataka
Take a fresh look at your lifestyle.

ಹಲವಾರು ಕಾರ್ಯಕ್ರಮಗಳಿಗೆ ನಟ ರವಿಚಂದ್ರನ್ ಅವರು ತಮ್ಮ ಪತ್ನಿಯನ್ನು ಕರೆದುಕೊಂಡು ಹೋಗುವುದಿಲ್ಲ! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಪ್ರೀತಿ ಪ್ರೇಮ ಎಂಬ ವಿಷಯವನ್ನು ಬಹಳ ಮಾತ್ರವಾಗಿ ಪ್ರತಿಬಿಂಬಿಸಿದ ಖ್ಯಾತಿ ರವಿಚಂದ್ರನ್ ಅವರಿಗೆ ಸಲ್ಲುತ್ತದೆ. ಹೌದು ಇವರು ಮಾಡಿರುವ ಹೆಚ್ಚಿನ ಸಿನಿಮಾಗಳು ಕೇವಲ ಪ್ರೀತಿ-ಪ್ರೇಮದ ಸಿನಿಮಾಗಳಾಗಿವೆ. ಹೀಗೆ ಅವರು ತಮ್ಮ ಚಿತ್ರಗಳ ಮೂಲಕ ಜನತೆಗೆ ಪ್ರೀತಿ-ಪ್ರೇಮದ ವಿಷಯವನ್ನು ಹಂಚಿದ್ದಾರೆ.

ಸುಮಾರು 90ರ ದಶಕದಲ್ಲಿ ವಿಷ್ಣುವರ್ಧನ್ ಹಾಗೂ ರಾಜಕುಮಾರ್ ಅವರ ಸಮಯದಲ್ಲಿ ಪ್ರೀತಿ-ಪ್ರೇಮ ಎನ್ನುತ್ತಾ ಚಿತ್ರರಂಗಕ್ಕೆ ಬಂದು ಯಶಸ್ಸನ್ನು ಪಡೆದವರು ನಮ್ಮ ಕನಸುಗಾರ ರವಿಚಂದ್ರನ್. ಹೌದು ನಿಜವಾದ ಪ್ರೀತಿ ಪ್ರೇಮದ ಅರ್ಥವನ್ನು ಪ್ರತಿಬಿಂಬಿಸುವ ಸಾಕಷ್ಟು ಸಿನಿಮಾಗಳನ್ನು ಇವರು ನಿರ್ಮಾಣ, ನಿರ್ದೇಶನ ಹಾಗೂ ತಾವೇ ಆ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಹೌದು ರವಿಚಂದ್ರನ್ ಅವರು ಪ್ರೇಮಲೋಕ, ಕನಸುಗಾರ, ನೀಲಕಂಠ, ಮಲ್ಲ, ಸಾಹುಕಾರ, ಏಕಾಂಗಿ ಹೀಗೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅಷ್ಟೇ ಅಲ್ಲದೆ ಭಾರತದ ಚಿತ್ರರಂಗವನ್ನು ಕನ್ನಡ ಚಿತ್ರರಂಗದತ್ತ ಮುಖ ಮಾಡಿ ನೋಡುವಂತೆ ಮಾಡಿದ್ದು ಕೂಡ ರವಿಚಂದ್ರನ್. ಪ್ರೀತಿ-ಪ್ರೇಮದ ಹಾನಿಗಳನ್ನು ಸಿನಿಮಾದ ಮೂಲಕ ಹೀಗೂ ತೋರಿಸಬಹುದು ಎಂಬುದನ್ನು ತಿಳಿಸಿಕೊಟ್ಟವರು ರವಿಚಂದ್ರನ್. ಹೀಗೆ ಸಿನಿಮಾದ ಮೂಲಕ ಪ್ರೀತಿ-ಪ್ರೇಮ ಹಚ್ಚಿದ ಇವರು ತಮ್ಮ ಕುಟುಂಬದಲ್ಲಿ ಕೂಡ ಪ್ರೀತಿ-ಪ್ರೇಮವನ್ನು ಹಂಚುತ್ತಾರೆ. ಹೌದು ಇವರು 1986 ರಲ್ಲಿ ಸುಮತಿ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇನ್ನು ವಿಶೇಷ ಎಂದರೆ ರವಿಚಂದ್ರನ್ ಅವರು ಮದುವೆಯಾಗಿದ್ದು ಫೆಬ್ರವರಿ 14 ಪ್ರೇಮಿಗಳ ದಿನದಂದು. ಅಂದಿನ ದಿನ ಎಲ್ಲ ಪ್ರೇಮಿಗಳಿಗೆ ವಿಶೇಷವಾದ ದಿನವಾದರೆ ರವಿಚಂದ್ರನ್ ಅವರಿಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಇನ್ನೂ ರವಿಚಂದ್ರನ್ ಹಾಗೂ ಸುಮತಿ ದಂಪತಿಗಳಿಗೆ ಮನೋರಂಜನ್, ವಿಕ್ರಂ ಹಾಗೂ ಗೀತಾಂಜಲಿ ಎಂಬ ಮೂವರು ಮಕ್ಕಳಿದ್ದಾರೆ. ಇನ್ನು ನಾವೆಲ್ಲ ನೋಡಿರುವ ಹಾಗೆ ರವಿಚಂದ್ರನ್ ಅವರು ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ಹೋದಾಗ,

ತಮ್ಮ ಪತ್ನಿಯನ್ನು ಕರೆದುಕೊಂಡು ಹೋಗುವುದಿಲ್ಲ. ಹೌದು ಯಾವುದೇ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಾಗಲಿ, ಖಾಸಗಿ ಕಾರ್ಯಕ್ರಮಗಳಾಗಲಿ ಹೀಗೆ ಯಾವುದೇ ಕಾರ್ಯಕ್ರಮಗಳಾಗಲಿ ರವಿಚಂದ್ರನ್ ಅವರೊಂದಿಗೆ ಅವರ ಪತ್ನಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಹೀಗೇಕೆ ಎಂದು ರವಿಚಂದ್ರನ್ ಅವರನ್ನು ಪ್ರಶ್ನೆ ಮಾಡಿದಾಗ, ಅವರು ನಾನು ಹೊರಗಡೆ ಹೋದಾಗ ಅಭಿಮಾನಿಗಳು ಸುತ್ತುವರಿದಿರುತ್ತಾರೆ. ಅಲ್ಲಿ ಸದ್ದುಗದ್ದಲ ಇರುತ್ತದೆ. ಇಂತಹ ಸಮಯದಲ್ಲಿ ನಾನು ನನ್ನ ಪತ್ನಿಯನ್ನು ಸರಿಯಾಗಿ ನೋಡಿಕೊಳ್ಳಲು ಆಗುವುದಿಲ್ಲ. ಅದಲ್ಲದೆ ಅವರಿಗೆ ಸದ್ದಗದ್ದಲಗಳು ಇಷ್ಟವಿಲ್ಲ ಎಂದು ಹೇಳುತ್ತಾರೆ. ಏನೇ ಆಗಲಿ ರವಿಚಂದ್ರನ್ ಅವರು ತಮ್ಮ ಪತ್ನಿ ಮಕ್ಕಳೊಂದಿಗೆ ಸುಖಜೀವನ ನಡೆಸುತ್ತಿದ್ದಾರೆ. ಇನ್ನು ಇವರ ಸಂಸಾರಿಕ ಜೀವನ ಇದೇ ರೀತಿ ಸುಖವಾಗಿರಲಿ ಎಂದು ನಾವು ಈ ಮೂಲಕ ಹಾರೈಸೋಣ.

Comments are closed.