Neer Dose Karnataka
Take a fresh look at your lifestyle.

ಧಾರಾವಾಹಿಯಿಂದ ಹೊರ ಬಂದ ಟಾಪ್ ಧಾರವಾಹಿ ಗಟ್ಟಿಮೇಳ ಖ್ಯಾತಿಯ ನಟಿ. ಕಾರಣವೇನಂತೆ ಗೊತ್ತಾ??

4

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಧಾರಾವಾಹಿಗಳಲ್ಲಿ ಸ್ಥಾನ ಪಡೆಯುವುದು ಹಾಗೂ ಆ ಸ್ಥಾನದಲ್ಲಿ ಯಶಸ್ವಿಯಾಗುವುದು ಸುಲಭದ ಮಾತಲ್ಲ. ಅದರಲ್ಲಿಯೂ ಸೈಡ್ ರೋಲ್ ಗಳಿಗೆ ಬೇಕಾದರೆ ಕೊಂಚ ಅವಕಾಶಗಳು ಸುಲಭವಾಗಿ ಸಿಕ್ಕಿ ಬಿಡುತ್ತವೆ, ಆದರೆ ಯಾವುದೇ ಧಾರಾವಾಹಿಯಲ್ಲಿ ಆಗಲಿ ಪ್ರಮುಖ ಪಾತ್ರದಲ್ಲಿ ಅವಕಾಶ ಪಡೆಯುವುದು ಸುಲಭದ ಮಾತಲ್ಲ. ಹೀಗಿರುವಾಗ ಇದೀಗ ಟಾಪ್ ಧಾರಾವಾಹಿಯೊಂದರಲ್ಲಿ ನಟಿಯು ಅವಕಾಶ ಕೈ ಬಿಟ್ಟು ಹೊರ ಬಂದಿದ್ದಾರೆ.

ಹೌದು ಸ್ನೇಹಿತರೇಗಟ್ಟಿಮೇಳ ಧಾರಾವಾಹಿಯ ಮೂಲಕ ಇಡೀ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಆರತಿ ಎಂಬ ಪಾತ್ರದಲ್ಲಿ ಗುರುತಿಸಿಕೊಂಡ ಅಷ್ವಿನಿ ರವರು ಇದೀಗ ತಮಗೆ ಒದಗಿ ಬಂದಿದ್ದ ನಾಯಕಿ ನಟಿಯ ಸ್ಥಾನ ನೀಡಿರುವ ನಾಗಭೈರವಿ ಧಾರಾವಾಹಿಯಿಂದ ಹೊರ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಹೌದು ಸ್ನೇಹಿತರೇ, ಈ ನಿರ್ಧಾರದ ಹಿಂದೆ ಒಂದು ಉತ್ತಮ ಕಾರಣವೂ ಕೂಡ ಇದೆ.

ಗಟ್ಟಿಮೇಳ ಧಾರಾವಾಹಿಯಲ್ಲಿ ಜನ ಪ್ರಿಯತೆ ಪಡೆದುಕೊಂಡರೂ ಕೂಡ ಅಲ್ಲಿ ನಾಯಕ ನಟಿಯ ಸಹೋದರಿಯ ಪಾತ್ರದಲ್ಲಿ ಕಾಣಿಸಿದ್ದಾರೆ. ಆದರೆ ನಾಗಭೈರವಿ ಧಾರಾವಾಹಿ ಯಲ್ಲಿ ಇವರು ನಾಯಕ ನಟಿಯಾಗಿ ಮಿಂಚುತಿದ್ದರು. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿಯೂ ಕೂಡ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಸಾಹಸ ದೃಶ್ಯಗಳಲ್ಲಿ ಅದ್ಭುತ ನಟನೆಯ ಮೂಲಕ ಅಶ್ವಿನಿ ರವರು ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಕೋರೋಣ ಕಾರಣ ಹೈದರಬಾದ್ ಗೆ ಪ್ರತಿ ಬಾರಿಯೂ ತೆರಳುವುದು ಸೂಕ್ತವಲ್ಲ ಎಂದು ಹೇಳಿ ನಾಗಭೈರವಿ ಧಾರಾವಾಹಿಯಿಂದ ಹೊರ ಬರುವ ನಿರ್ಧಾರ ಮಾಡಿದ್ದಾರೆ.

Leave A Reply

Your email address will not be published.