Neer Dose Karnataka
Take a fresh look at your lifestyle.

ಕವಿತಾ ಹಾಗೂ ಚಂದನ್, ಸಿಂಪಲ್ ಆಗಿ ಮದ್ವೆ ಏನೋ ಆಯಿತು?? ಈಗ ಹನಿಮೂನ್ ಎಲ್ಲಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗ ನಟ-ನಟಿಯರ ಮದುವೆ ಟ್ರೆಂಡ್ ಬಹಳ ಜೋರಾಗಿ ಸದ್ದು ಮಾಡುತ್ತಿದೆ. ಬಾಲಿವುಡ್ ನಿಂದ ಪ್ರಾರಂಭವಾಗಿ ಈಗ ಪದ್ಧತಿ ಸ್ಯಾಂಡಲ್ವುಡ್ ಗೂ ಕಾಲಿಟ್ಟಿದೆ. ಇತ್ತೀಚೆಗಷ್ಟೇ ಕನ್ನಡ ಕಿರುತೆರೆಯ ಪ್ರಸಿದ್ಧ ಜೋಡಿಗಳಾದ ಚಂದನ್ ಗೌಡ ಹಾಗೂ ಕವಿತ ಗೌಡ ವಿವಾಹ ಬಂಧನಕ್ಕೆ ಒಳಪಟ್ಟಿರುವುದು ನಾವು ನೋಡಿದ್ದೇವೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಎಂಬ ಧಾರವಾಹಿ ಮೂಲಕ ಪರಿಚಿತರಾದ ಈ ಜೋಡಿಗಳು ಮುಂದಿನ ದಿನಗಳಲ್ಲಿ ಕಿರುತೆರೆ ವೀಕ್ಷಕರ ಮನದಲ್ಲಿ ಅಚ್ಚಳಿಯದಂತೆ ಉಳಿದರು. ಈ ಮೂಲಕವೇ ಪ್ರೇಕ್ಷಕರಲ್ಲಿ ಒಂದು ವಿಷಯ ಕೂಡ ಮನವರಿಕೆಯಾಯಿತು ಅದು ಏನೆಂದರೆ ಕೇವಲ ಚಿತ್ರರಂಗದಲ್ಲಿರುವ ನಟರು ಮಾತ್ರವಲ್ಲದೆ ಕಿರುತೆರೆಯ ನಟ-ನಟಿಯರು ಕೂಡ ಮನರಂಜನೆ ಕ್ಷೇತ್ರದಲ್ಲಿ ಸೂಪರ್ ಸ್ಟಾರ್ ಆಗಬಹುದು ಎಂಬ ಸೂಚನೆ ನೀಡಿತು.

ಚಂದನ್ ಗೌಡ ಹಾಗೂ ಕವಿತಾ ಗೌಡರ ಜೋಡಿ ಎಷ್ಟು ಫೇಮಸ್ ಆಯಿತು ಎಂದರೆ ಅಂದಿನ ದಿನಗಳಲ್ಲಿ ಪ್ರೇಕ್ಷಕರು ಇವರು ಮದುವೆಯಾದರೆ ಎಷ್ಟು ಚೆಂದ ಎಂದು ಮಾತನಾಡುವಂತೆ ಆಗಿತ್ತು. ನಂತರದ ದಿನಗಳಲ್ಲಿ ಚಂದನ್ ಗೌಡ ತೆಲುಗು ಕಿರುತೆರೆಗಳಲ್ಲಿ ನಟಿಸಿ ಕೂಡ ಪ್ರಸಿದ್ಧಿಯನ್ನು ಪಡೆದರು. ಕೆಲದಿನಗಳಲ್ಲಿ ತೆಲುಗು ಕಿರುತೆರೆಯಿಂದ ರಜೆಯನ್ನು ಪಡೆದು ತಾನು ಮದುವೆಯಾಗುತ್ತೇನೆಂದು ಹೇಳಿ ಮತ್ತೆ ಬೆಂಗಳೂರಿಗೆ ವಾಪಸಾದರು. ನಿರೀಕ್ಷೆಯಂತೆ ಅವರು ಕವಿತಾ ಗೌಡರನ್ನು ಬಂದಕೂಡಲೇ ಎಂಗೇಜ್ಮೆಂಟ್ ಆದರು. ಮದುವೆಯನ್ನು ಅದ್ದೂರಿಯಾಗಿ ನಡೆಸುವ ಬಗ್ಗೆ ಯೋಜನೆ ಹಾಕಲಾಗಿದ್ದರೂ ಲಾಕ್ಡೌನ್ ಕಾರಣದಿಂದಾಗಿ ಅದ್ದೂರಿ ಮದುವೆ ಕನಸು ಕನಸಾಗಿ ಉಳಿಯಿತು.

ಇನ್ನು ಮದುವೆಯನ್ನು ಮುಂದಕ್ಕೆ ದೂಡುವುದು ಬೇಡವೆಂದು ತಮ್ಮ ಗುರುಹಿರಿಯರ ಸಮ್ಮುಖದಲ್ಲಿ ಕವಿತಾ ಗೌಡ ಹಾಗೂ ಚಂದನಗೌಡ ಮದುವೆಯಾದರು. ಮದುವೆಯಲ್ಲಿ ಭಾಗವಹಿಸಿದ್ದು ಕೇವಲ 40 ಜನರಷ್ಟೇ ಅದು ಕೂಡ ಖಾಸಾ ಸಂಬಂಧಿಗಳು ಮಾತ್ರ. ಈಗ ಮದುವೆಯಾದ ನಂತರ ಚಂದನ್ ಗೌಡ ಹಾಗೂ ಕವಿತಾ ಗೌಡ ಜೋಡಿಗಳು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳ ಸುರಿಮಳೆಯನ್ನೇ ಪೋಸ್ಟ್ ಮಾಡುತ್ತಿದ್ದು ಅವರಿಬ್ಬರ ಅಭಿಮಾನಿಗಳು ನೋಡಿ ಖುಷಿ ಪಡುತ್ತಿದ್ದಾರೆ. ಈಗ ಎದ್ದಿರುವ ಪ್ರಶ್ನೆಯೆಂದರೆ ಈ ಜೋಡಿಗಳು ಹನಿಮೂನ್ ಅನ್ನು ಎಲ್ಲಿ ಆಚರಿಸುತ್ತಾರೆ ಎಂದು.

ಕೆಲ ಮೂಲಗಳ ಪ್ರಕಾರ ಕವಿತಾ ಗೌಡ ಹಾಗೂ ಚಂದನ್ ಗೌಡ ಜೋಡಿ ಹನಿಮೂನ್ ಅನ್ನು ವಿದೇಶದಲ್ಲಿ ಆಚರಿಸುವ ಪ್ಲಾನನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಸ್ವಿಜರ್ಲ್ಯಾಂಡ್ ನ ಕಣಿವೆ ಹಾಗೂ ಹಸಿರು ಪ್ರದೇಶಗಳಿಗೆ ಹೋಗಲು ಇವರು ಯೋಜಿಸಿದ್ದಾರೆ ಎಂದು ಹೇಳಿದ್ದರೆ ಇನ್ನು ಕೆಲವು ಮೂಲಗಳು ಪೆರುವಿನ ಅಂತಹ ಅದ್ಭುತ ದೇಶಕ್ಕೆ ಇವರು ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಕೆಲವರು ಈಗ ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ತಾಣ ಮಾಲ್ಡೀವ್ಸ್ ಗೆ ಕವಿತಾ ಗೌಡ ಹಾಗೂ ಚಂದನ್ ಗೌಡ ಜೋಡಿ ನಂತರ ತೆರಳಬಹುದು ಎಂದು ಕೂಡ ಹೇಳುತ್ತಿದ್ದಾರೆ. ನಿಮಗೇನನ್ನಿಸುತ್ತಿದೆ ಚಂದನ್ ಗೌಡ ಹಾಗೂ ಕವಿತಾ ಗೌಡ ಜೋಡಿ ಹನಿಮೂನ್ಗೆ ಯಾವ ಪ್ಲೇಸ್ ಗೆ ಹೋಗಬಹುದು ಎಂದು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Comments are closed.