Neer Dose Karnataka
Take a fresh look at your lifestyle.

ಸಲ್ಮಾನ್ ಖಾನ್ 55 ವರ್ಷವಾಗಿ ಮದುವೆಯಾಗದೇ ಇದ್ದರೂ ಸಂತೋಷವಾಗಿರುವುದು ಹೇಗೆ ಗೊತ್ತೇ?? ಕೊನೆಗೂ ಸಿಕ್ಕಿತು ಸಂತೋಷದ ಕಾರಣ.

ನಮಸ್ಕಾರ ಸ್ನೇಹಿತರೇ ಬಾಲಿವುಡ್ ನ ಬಗ್ಗೆ ಗೊತ್ತಿರೋರಿಗೆ ಬಾಲಿವುಡ್ ಅಂದಾಕ್ಷಣ ಮೊದಲು ಬರೋ ಹೆಸರು ಅದು ಸಲ್ಮಾನ್ ಖಾನ್. ಸಲ್ಮಾನ್ ಖಾನ್ ಬಾಲಿವುಡ್ ನ ಬಾಕ್ಸ್ ಆಫೀಸ್ ನ ಅನಭಿಷಕ್ತ ದೊರೆ ಎಂದೇ ಹೇಳಬಹುದು. ಸಲ್ಮಾನ್ ಖಾನ್ ಬಾಲಿವುಡ್ ನ ಮಾಸ್ ನಟರಲ್ಲಿ ನಂ1. ಇತ್ತೀಚಿಗಷ್ಟೇ ತಮ್ಮ ಹೊಸ ಚಿತ್ರ ರಾಧೆಯನ್ನು ಲಾಕ್ ಡೌನ್ ನಡುವೆ ಬಿಡುಗಡೆ ಮಾಡಿದ್ದರು.

ಹಾಗೂ ಅದರಿಂದ ಬಂದಂತಹ ಹಣವನ್ನು ಈ ದಿನಗಳಲ್ಲಿ ಕಷ್ಟ ಪಡುತ್ತಿರುವ ಜನರ ಬದುಕನ್ನು ಉಳಿಸಲು ವಿನಿಯೋಗಿಸಲಾಯಿತು. ಇದು ಸಲ್ಮಾನ್ ಖಾನ್ ಎಂದರೆ. ಸಲ್ಮಾನ್ ಖಾನ್ ರನ್ನು ಮೀಡಿಯಾ ಗಳು ಹೇಗೆ ತೋರಿಸದರೂ ಅವರು ತಮ್ಮ ಒಳ್ಳೆಯ ಮನಸ್ಸಿನಿಂದ ಇಂದಿಗೂ ಜನರಿಂದ ಭಾಯ್ ಎಂದು ಗುರುತಿಸಿಕೊಳ್ಳುತ್ತಾರೆ. ಆಂದ ಹಾಗೇ ಸಲ್ಮಾನ್ ಖಾನ್ ರವರಿಗೆ ವಯಸ್ಸು 55 ಆದರೂ ಸಹ ಇನ್ನೂ ಮದುವೆಯಾಗಿಲ್ಲ ಆದರೂ ಅವರು ಜೀವನದಲ್ಲಿ ಖುಷಿಯಿಂದ ಇದ್ದಾರೆ. ಅದಕ್ಕೆ ಕಾರಣಗಳನ್ನು ನೋಡೋಣ ಬನ್ನಿ.

ಸಲ್ಮಾನ್ ಖಾನ್ ಎಂದರೆ ವಿವಾದಗಳ ಸರಮಾಲೆ ಎನ್ನಬಹುದು. ಆದರೂ ಸಲ್ಮಾನ್ ಖಾನ್ ಎಷ್ಟೇ ವಿವಾದ ಬಂದರೂ ಹೋದರೂ ಕಿವಿಗೊಡದೆ ತಮ್ಮ ಕರಿಯರ್ ಕುರಿತಂತೆ ಗಮನ ಹರಿಸಿದರು. ಅದಕ್ಕೆ ಇಂದು ಬಾಲಿವುಡ್ ನಲ್ಲಿ ಟಾಪ್ ಸ್ಟಾರ್ ಆಗಿ ದೃಢವಾಗಿ ನಿಂತಿದ್ದಾರೆ. ಮಾಧ್ಯಮದವರು ಇವರಿಗೆ ಭಾಯಿಜಾನ್ ಮದುವೆ ಯಾವಾಗ ಎಂದು ಪದೇ ಪದೇ ಕೇಳಿ ತಲೆ ತಿಂದರೂ ಇವರು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಸಿನಿಮಾ ಸಂಸ್ಥೆಯನ್ನು ಇನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನೊಂದು ಇವರ ಬಿಗ್ಗೆಸ್ಟ್ ಶಕ್ತಿ ಎಂದರೆ ಪರಿವಾರ. ಇವರು ಬೇಕೆಂದರೆ ನೂರಾರು ಕೋಟಿಯ ಐಶರಾಮಿ ಕಟ್ಟಿಕೊಂಡು ಒಬ್ಬರೇ ಇರೋವಷ್ಟು ತಾಕತ್ತಿದೆ ಆದರೆ ಇಂದಿಗೂ ತಮ್ಮ ದೊಡ್ಡ ಫ್ಯಾಮಿಲಿಯ ಜೊತೆಗೆ ಇಂದಿಗೂ ಮುಂಬೈನ ಬಾಂದ್ರಾ ದ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ತನ್ನ ದೊಡ್ಡ ಕುಟುಂಬದೊಂದಿಗೆ ಜೊತೆಯಲ್ಲಿ ನೆಲೆಸುತ್ತಾರೆ. ಸಲ್ಮಾನ್ ಖಾನ್ ರವರ ತಂದೆ ಸಲೀಂ ಖಾನ್ ರವರಿಗೆ ಇಬ್ಬರು ಮಡದಿಯರು. ಸಲ್ಮಾನ್ ಖಾನ್ ಎಂದಿಗೂ ತನ್ನ ಸಹೋದರರಿಗೆ ಆಗಲೀ ತನ್ನ ತಂದೆಯ ಇನ್ನೊಬ್ಬ ಹೆಂಡತಿಗಾಗಲಿ ಮಲತಾಯಿರ ಧೋರಣೆ ತೋರಿಲ್ಲ‌.

ಇಬ್ಬರೂ ತನ್ನ ತಾಯಂದಿರು ಎಲ್ಲರೂ ತನ್ನ ಸ್ವಂತ ಸಹೋದರರು ಎಂದೇ ಇಲ್ಲಿಯವರೆಗೂ ಜೀವಿಸಿರೋದು ಅದಕ್ಕಾಗಿಯೇ ಸಲ್ಮಾನ್ ಖಾನ್ ರವರನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ಅವರ ಫ್ಯಾಮಿಲಿ ಅವರನ್ನು ಬಿಟ್ಟು ಕೊಟ್ಟಿಲ್ಲ. ಇನ್ನು ಸಲ್ಮಾನ್ ಖಾನ್ ರವರ ದಾನ ಹಾಗೂ ಮಾನವೀಯ ಗುಣ. ಈ ಹಿಂದೆ ಹಿರಿಯರೊಬ್ಬರು ಮಾತೊಂದನ್ನು ಹೇಳಿದ್ದಾರೆ. ದಾನ ಮಾಡಿ ನೋಡು ಅದರಿಂದ ಸಿಗೋ ಮಜಾನೇ ಬೇರೆ ಎಂದು. ಸಲ್ಮಾನ್ ಖಾನ್ ರವರು ಮೊದಲಿನಿಂದಲೂ ಇಂದಿನವರೆಗೂ ಸಹ ತಮ್ಮ ಬೀಯಿಂಗ್ ಹ್ಯೂಮನ್ ಟೃಸ್ಟ್ ನ ಮೂಲಕ ಅದೆಷ್ಟೋ ಹಸಿದ ಜೀವಗಳ ಹಸಿವನ್ನು ತಣಿಸಿದ್ದಾರೆ‌. ಆರೋಗ್ಯ ಸಮಸ್ಯೆ ಇರೋವವರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡಿಸಿದ್ದಾರೆ. ಇಂದಿಗೂ ಬೇರೆಯವರ ಜೀವನ ಉದ್ಧಾರ ಮಾಡಲು ಸಹಾಯ ಮಾಡುವ ಮೂಲಕ ತಮ್ಮ ಜೀವನದ ಸಾರ್ಥಕತೆಯನ್ನು ಕಾಣುತ್ತಿದ್ದಾರೆ.

ಸಲ್ಮಾನ್ ಖಾನ್ ರವರ ಕುರಿತಂತೆ ವರದಿಗಳು ಎಷ್ಟೇ ಬ್ಯಾಡ್ ಇಮೇಜ್ ಸೃಷ್ಟಿಸಿದರೂ ಸಲ್ಮಾನ್ ಖಾನ್ ನೆಗೆಟಿವಿಟಿಯನ್ನು ಮರೆತು ತಮ್ಮನ್ನು ಪ್ರೀತಿಸುವವರಿಗೇ ಕೇವಲ ಪಾಸಿಟಿವಿಟಿಯನ್ನು ಹಂಚುತ್ತಾರೆ. ತಮ್ಮ ಆದಾಯದ 60 ಪ್ರತಿಶತ ಹಣವನ್ನು ತಮ್ಮ ಟೃಸ್ಟ್ ನ ಮೂಲಕ ಜನಸೇವೆಯನ್ನು ಮಾಡೋ ಸಲ್ಮಾನ್ ಖಾನ್ ಎಷ್ಟು ಒಳ್ಳೆರವರು ಎಂದು ನೀವೆ ಅರ್ಥ ಮಾಡಿಕೊಳ್ಳಿ. ಇನ್ನು ಸಲ್ಮಾನ್ ಖಾನ್ ರವರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯವನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

Comments are closed.