Neer Dose Karnataka
Take a fresh look at your lifestyle.

ಕೇವಲ ಪಿಯುಸಿ ಓದಿದ ಹುಡುಗಿ ಇದೀಗ ಚಿಕ್ಕ ಆಲೋಚನೆಯಿಂದ ತಿಂಗಳಿಗೆ ಲಕ್ಷ ಲಕ್ಷ ದುಡೀತಿದ್ದಾರೆ ಹೇಗೆ ಗೊತ್ತೇ??

4

ನಮಸ್ಕಾರ ಸ್ನೇಹಿತರೇ ಅಂದಿನ ಕಾಲದಿಂದ ಇಂದಿನವರೆಗೂ ಮನೆಯಲ್ಲಿ ಗಂಡುಮಗ ದುಡಿಯಬೇಕು ಹೆಣ್ಣುಮಗಳು ಮನೆಯಲ್ಲೇ ಇರಬೇಕು ಎಂಬ ನಿಯಮಗಳು ಪಾರಂಪರಿಕವಾಗಿ ಬಂದಿತ್ತು. ಹೆಣ್ಣುಮಗಳು ತಾನಂದುಕೊಂಡಂತೆ ಆಗಿರೋದು ಹಳೆಯ ಕಾಲದಲ್ಲಿ ನೋಡಿದರೆ ತುಂಬಾ ಕಡಿಮೆ. ಒಂದು ಕಡೆ ಆ ಕುಟುಂಬದ ಆಚಾರ-ವಿಚಾರಗಳು ಅಡ್ಡಿಯಾದರೆ ಇನ್ನೊಂದು ಕಡೆ ಕುಟುಂಬದ ಬಡತನ ಹೆಣ್ಣುಮಗಳ ಅಭಿವೃದ್ಧಿಗೆ ಅಡ್ಡಿಯಾಗುತ್ತಿತ್ತು.

ದೇಶದಲ್ಲಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತುಗಳಿದ್ದರೂ ಅದನ್ನು ಪೂರೈಸಿದವರು ಎಣಿಕೆಯಷ್ಟು ಮಾತ್ರ ಎಂದು ಹೇಳಬಹುದು. ಹೆಣ್ಣು ಮನೆಯ ಕಣ್ಣು ಎಂದು ಆ ಕಣ್ಣಿಗೆ ನೀತಿ-ನಿಯಮಗಳನ್ನು ಬೇಲಿ ಹಾಕಿ ರೆಪ್ಪೆಯನ್ನು ಮುಚ್ಚುವಂತೆ ಮಾಡಿದ ಸಮಾಜ ಹೆಣ್ಣಿಗೆ ತಾನಂದುಕೊಂಡಂತೆ ಓದಿ ವಿದ್ಯಾಭ್ಯಾಸ ಮಾಡಿ ಉತ್ತಮ ಹುದ್ದೆಯಲ್ಲಿ ಕೂರಲು ಬಿಟ್ಟಿಲ್ಲ. ಆದರೆ ನಾವು ಇಂದು ಹೇಳಹೊರಟಿರುವ ಹೆಣ್ಣುಮಗಳೊಬ್ಬಳ ಕತೆ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ಈ ಹೆಣ್ಣುಮಗಳೊಬ್ಬಳು ಬಡತನದಿಂದ ಬೆಳೆದು ಬಂದು ಇಂದು ತಿಂಗಳಿಗೆ ಎಷ್ಟು ಹಣ ಸಂಪಾದನೆ ಮಾಡುತ್ತಿದ್ದಾಳೆ ಗೊತ್ತೆ ಹೇಳುತ್ತೇವೆ ಬನ್ನಿ.

ಹೌದು ನಾವು ಇಂದು ಈಗ ಹೇಳುತ್ತಿರುವ ಕಥೆಯಲ್ಲಿ ಬರುವ ಹೆಣ್ಣು ಮಗಳ ಕಥೆ ನಿಜವಾಗಿಯೂ ನಡೆದಿರುವುದು ಹಾಗೂ ನಡೆಯುತ್ತಿರುವುದು. ಈ ಹೆಣ್ಣುಮಗಳ ಹೆಸರು ನಂದಿನಿ ಎಂದು. ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ ಸೇರಿದಂತಹ ನಂದಿನಿ ಎಂಬ ಹುಡುಗಿ ಹುಟ್ಟಿದ್ದು ಬಡಕುಟುಂಬದಲ್ಲಿ. ತಂದೆ ದೇವಸ್ಥಾನದ ಅರ್ಚಕರಾಗಿದ್ದರು. ತಂದೆಗೆ ಮಗಳನ್ನು ಸಾಕಷ್ಟು ಓದಿಸುವ ಆಸೆ ಇತ್ತಾದರೂ ಅವರಿಗೆ ಆರ್ಥಿಕ ಪರಿಸ್ಥಿತಿ ಕೈಗೆ ಬಲ ನೀಡಲಿಲ್ಲ. ನಂದಿನಿ ಅವರು ಬಡತನ ದಲ್ಲಿ ಬೆಳೆದು ಅಂತು ಇಂತು ಸೆಕೆಂಡ್ ಪಿಯುಸಿ ಪಾಸಾದರು.

ಆದರೆ ಡಾಕ್ಟರ್ ಆಗಬೇಕೆಂಬ ಕನಸು ಹೊಂದಿದ್ದ ನಂದಿನಿಯವರ ಕನಸು ಬಡತನದ ಬೇಗಯಲ್ಲಿ ನಶಿಸಿ ಹೋಯಿತು. ನೀವು ಅಂದುಕೊಂಡಂತೆ ಓದು ಮುಗಿದ ಮೇಲೆ ಹೆಣ್ಣುಮಕ್ಕಳಿಗೆ ಇನ್ನೇನು ಮದುವೆ ತಾನೆ ಮಾಡಿಸುವುದು. ನಂದಿನಿಯವರ ಬಾಳಲ್ಲಿ ಕೂಡ ಇದೇ ನಡೆದಿದ್ದು. ನಂದಿನಿ ಅವರಿಗೆ ಕೂಡ ಮದುವೆ ಮಾಡಿಸಲಾಯಿತು. ಅವರು ಮದುವೆಯಾಗಿದ್ದ ಹುಡುಗ ಕೂಡ ದೇವಸ್ಥಾನದ ಅರ್ಚಕ. ದಿನ ಹೀಗೆ ಸಾಗಿತ್ತು. ಆದರೆ ಒಮ್ಮೆ ನಂದಿನಿಯವರ ಬದುಕಿನಲ್ಲಿ ದುಃಖದ ಛಾಯೆ ಮಡುಗಟ್ಟುವ ಸಂದರ್ಭ ಬಂದಿತ್ತು. ಹೌದು ನಂದಿನಿಯವರ ತಂದೆ ಹಠಾತ್ತಾಗಿ ಅನಾರೋಗ್ಯದ ಕಾರಣ ಇಹಲೋಕ ತ್ಯಜಿಸಿದರು. ಅತ್ತ ಅರ್ಚಕರಾಗಿದ್ದ ಗಂಡನ ದುಡಿಮೆ ಕೂಡ ಕಡಿಮೆಯಾಗಿತ್ತು.

ಇತ್ತ ನಂದಿನಿಯವರ ಹೆಗಲಮೇಲೆ ಇನ್ನೊಂದು ಜವಾಬ್ದಾರಿ ಬಿತ್ತು ಅದೇನೆಂದರೆ ತಮ್ಮ ತಂಗಿಯ ಜೀವನವನ್ನು ಒಂದೊಳ್ಳೆ ರೂಪಕ್ಕೆ ತೆಗೆದುಕೊಂಡು ಹೋಗುವುದು. ಹೌದು ಅಂದರೆ ತಂಗಿಯನ್ನು ಒಳ್ಳೆ ಮನೆತನಕ್ಕೆ ನೀಡಿ ಮದುವೆ ಮಾಡಿಸುವುದು. ಈಗ ಸ್ವತಹಾ ನಂದಿನಿ ಅವರೇ ಏನಾದರೂ ಮಾಡಬೇಕೆಂದು ತಮ್ಮ ಬುದ್ಧಿಗೆ ಚಾಲನೆ ನೀಡಿದರು. ಆಗ ಅವರಿಗೆ ಹೊಳೆದದ್ದು ಉಪಾಯ ಎಂದು ಅವರಿಗೆ ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿಯುವಂತೆ ಮಾಡುತ್ತಿದೆ. ಅದೇನೆಂದು ಹೇಳುತ್ತೇವೆ ಬನ್ನಿ.

ಹೌದು ನಂದಿನಿ ಅವರು ತಮ್ಮಲ್ಲಿದ್ದ ಚಿನ್ನದ ಒಡವೆಗಳನ್ನು ಮಾರಿ ಅದರಿಂದ ಕಾರನ್ನು ಖರೀದಿಸಿ ಅದನ್ನು ಉಬರ್ ಗೆ ಬಿಟ್ಟರು. ಅದರಿಂದ ಅವರಿಗೆ ತಿಂಗಳ ತಿಂಗಳ ಹಣ ಬರಲಾರಂಭಿಸಿತು. ಇಷ್ಟು ಮಾತ್ರವಲ್ಲದೆ ಉಬರ್ ನಿಂದಲೇ ಇನ್ನೂ ಒಂದು ಹಣಮಾಡುವ ವಿಚಾರ ವನ್ನು ಅವರು ಕೇಳಿ ತಿಳಿದುಕೊಂಡರು. ಅದೇನೆಂದರೆ ಒಂದು ವೇಳೆ ನಂದಿನಿ ಅವರು ಅವರಿಗೆ ಒಬ್ಬ ಡ್ರೈವರನ್ನು ಪರಿಚಯ ಮಾಡಿಕೊಟ್ಟರೆ ಡ್ರೈವರ್ ಒಂದು ಟ್ರಿಪ್ ಕಂಪ್ಲೀಟ್ ಮಾಡಿದರೆ ನಂದಿನಿ ಯವರಿಗೆ ₹3000 ದೊರಕುತ್ತಿತ್ತು.

ಇದರಿಂದ ಬುದ್ಧಿ ಚುರುಕು ಮಾಡಿದ ನಂದಿನಿ ಅವರು ಇಲ್ಲಿಯವರೆಗೆ ಉಬರ್ ಗೆ ಸುಮಾರು 2000 ಡ್ರೈವರುಗಳನ್ನು ಪರಿಚಯಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ನಂದಿನಿ ಅವರು ಒಂದು ಟ್ರಾವೆಲ್ ಏಜೆನ್ಸಿಯನ್ನು ಕೂಡ ಈಗ ನಡೆಸುತ್ತಿದ್ದಾರೆ. ಇವರ ಕೈ ಕೆಳಗಡೆ ಆರು ಜನ ಉದ್ಯೋಗ ಕಂಡುಕೊಂಡಿದ್ದಾರೆ. ಈಗ ತಿಂಗಳಿಗೆ ನಂದಿನಿ ಅವರು ಎರಡು ಲಕ್ಷಕ್ಕೂ ಅಧಿಕ ರೂಪಾಯಿಗಳನ್ನು ಸಂಪಾದಿಸುತ್ತಿದ್ದು ತಂಗಿಯನ್ನು ಒಂದೊಳ್ಳೆ ಕಡೆ ಮದುವೆ ಮಾಡಿಸಿ ಕೊಟ್ಟಿದ್ದಾರೆ ಹಾಗೂ ತಮ್ಮ ಮಗಳಿಗೆ ಒಂದೊಳ್ಳೆ ಕಡೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ ತಾವು ಅಂದುಕೊಂಡಿದ್ದ ಡಾಕ್ಟರ್ ಆಗುವ ಕನಸನ್ನು ತಮ್ಮ ಮಗಳ ಮೂಲಕ ನೆರವೇರಿಸುವ ಪ್ರಯತ್ನ ಪಡುತ್ತಿದ್ದಾರೆ. ನಂದಿನಿಯವರ ಚಲ ಬರಿತಾ ಜೀವನಕಥೆಯನ್ನು ಕೇಳಿದ್ರಲ್ಲ ನಿಮಗೆ ಏನನ್ನಿಸಿತು ಎಂಬ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ತಿಳಿಸಿ.

Leave A Reply

Your email address will not be published.