Neer Dose Karnataka
Take a fresh look at your lifestyle.

ಮಿಲನ ಧಾರವಾಹಿ ನಟಿ ವಿನುತಾ, ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಗೊತ್ತಾ?? ಎಷ್ಟು ಬದಲಾಗಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಧಾರವಾಹಿಗಳು ಈಗ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಸದ್ದನ್ನು ಮಾಡುತ್ತಿವೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ನಿರ್ಮಿಸುವ ಸಿನಿಮಾಗಳಷ್ಟೆ ಮನರಂಜನೆಯನ್ನು ಈಗ ದಾರವಾಹಿಗಳು ನೀಡುತ್ತಿವೆ. ಕಿರುತೆರೆ ಲೋಕದಲ್ಲಂತೂ ಧಾರವಾಹಿಯನ್ನು ಮೀರಿಸುವ ಬೇರೆ ಪ್ರೋಗ್ರಾಂಗಳೇ ಇಲ್ಲದಂತಾಗಿದೆ. ಆದರೆ ಕೆಲ ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಆಗ ದಾರವಾಹಿಗಳು ಕೆಲ ವೀಕ್ಷಕ ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆಗಿನ ಕಾಲದಲ್ಲಿ ಜನರ ಮನಗೆದ್ದ ಬೆರಳೆಣಿಕೆಯಷ್ಟು ಧಾರವಾಹಿಗಳಲ್ಲಿ ನಾವು ಹೇಳುತ್ತಿರುವ ಧಾರವಾಹಿ ಕೂಡ ಹೌದು.

ಈ ದಾರವಾಹಿ ಯಾವುದು ಹಾಗೂ ಧಾರವಾಹಿಯಿಂದ ಪ್ರಸಿದ್ಧಿಯನ್ನು ಪಡೆದ ನಟಿ ಯಾರು ಎಂಬುದರ ಬಗ್ಗೆ ವಿವರವಾಗಿ ಹೇಳುತ್ತೇನೆ. ಹೌದು ಕೆಲ ವರ್ಷಗಳ ಹಿಂದಷ್ಟೇ ಸುವರ್ಣವಾಹಿನಿಯಲ್ಲಿ ಮಿಲನ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಮಿಲನ ಧಾರಾವಾಹಿಯಲ್ಲಿ ಪ್ರಾರ್ಥನ ಎಂಬ ಪಾತ್ರವು ಬಹಳ ಜನಪ್ರಿಯತೆ ಗಳಿಸಿತ್ತು. ಈ ಪಾತ್ರ ಅತ್ಯಂತ ಜನಪ್ರಿಯತೆ ಗಳಿಸಿ ಕೊಳ್ಳಲು ಮುಖ್ಯ ಕಾರಣ ಎಂದರೆ ಆ ಪಾತ್ರವನ್ನು ನಟಿಸಿದ್ದ ಆ ನಟಿ ಯಿಂದಾಗಿ ಆಗೊರ ನಟನೆಯಿಂದಾಗಿ ಆ ಪಾತ್ರಕ್ಕೆ ವೀಕ್ಷಕರಲ್ಲಿ ಅತ್ಯಂತ ಹೆಚ್ಚು ಜನ ಪ್ರಿಯತೆ ಬರಲು ಪ್ರಾರಂಭವಾಗಿತ್ತು. ಹೌದು ಈ ಪ್ರಾರ್ಥನಾ ಪಾತ್ರವನ್ನು ನಟಿಸಿದ ವಿನುತಾ ಎಂಬಾಕೆ ಪ್ರೇಕ್ಷಕರ ನೆಚ್ಚಿನ ನಟಿಯಾಗಿದ್ದರು.

ವಿನುತಾ ರವರು ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಬೇಕೆಂಬ ಅದಮ್ಯ ಆಸೆಯನ್ನು ಹೊಂದಿದ್ದರು. ಆದರೆ ಇದಕ್ಕೆ ಅವರ ಮನೆಯವರು ಅಷ್ಟೊಂದು ಮನಸ್ಸು ಕೊಟ್ಟಿರಲಿಲ್ಲ. ಏಕೆಂದರೆ ಅವರಿಗೆ ತಮ್ಮ ಮಗಳು ಈ ಬಣ್ಣದ ಲೋಕದಲ್ಲಿ ಕೆಲಸ ಮಾಡೋದು ಇಷ್ಟ ಇರಲಿಲ್ಲ. ಆದರೂ ಸಹ ವಿನುತ ರವರು ಮನೆಯವರ ಕೆಲಸ ಷರತ್ತುಗಳಿಗೆ ಒಪ್ಪಿ ಆಡಿಶನ್ ಕೊಡಲು ಪ್ರಾರಂಭ ಮಾಡಿದರು. ಆದರೆ ಅವರಿಗೆ ಗ್ಲಾಮರಸ್ ಹಾಗೂ ವಿಲನ್ ರೋಲ್ ಗಳಲ್ಲಿ ನಟನೆ ಮಾಡಲು ಇಷ್ಟ ಇಲ್ಲ. ಪ್ರತಿಯೊಂದು ಆಡಿಷನ್ ಗೆ ಹೋದಾಗಲೂ ಗ್ಲಾಮರಸ್ಸಾಗಿ ವಿಲನ್ ರೋಲ್ ಗಳ ಬೇಡಿಕೆ ಇವರಿಗೆ ಇರುತ್ತಿತ್ತು.

ಆದರೂ ಸಹ ಅವರು ನಾನು ಮಾಡುವುದಾದರೆ ಸೈಲೆಂಟ್ ಕ್ಯಾರೆಕ್ಟರ್ ಮಾತ್ರ ನನಗೆ ಗ್ಲಾಮರಸ್ ಪಾತ್ರಗಳನ್ನು ಮಾಡಲು ಆಗುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಿದ್ದರು. ನಂತರ ವಿನುತ ರವರ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪವಾಗಲು ಪ್ರಾರಂಭ ವಾಯಿತು. ಆಗ ತಂದೆ ಒಂದು ಮಾತನ್ನು ಹೇಳಿದರು ನೀನು ಚಿತ್ರದಲ್ಲಿ ಅಥವಾ ಧಾರವಾಹಿಗಳಲ್ಲಿ ನಟಿಸುವುದು ಆದರೆ ನಿನ್ನ ಗಂಡನನ್ನು ಕೇಳಿ ಅವರ ಒಪ್ಪಿಗೆ ಪಡೆದ ನಂತರವಷ್ಟೇ ನೀನು ಮುಂದುವರೆಯಬಹುದು ಎಂದರು. ಮದುವೆಯಾದ ಮೇಲೆ ಗಂಡನಿಗೆ ಈ ಕುರಿತಂತೆ ಹೇಳಿದಾಗ ಅವರು ಕೂಡ ಒಪ್ಪಿಗೆ ನೀಡಿದರು. ನಂತರವೇ ನಡೆದಿದ್ದು ಆಶ್ಚರ್ಯಕರ ಘಟನೆ.

ಹೌದು ವಿನುತಾ ರವರು ಪ್ರತಿ ಆಡಿಶನ್ ಹೋದಾಗಲೂ ಗ್ಲಾಮರಸ್ ಪಾತ್ರಗಳು ಬೇಡಿಕೆ ಇಡುತ್ತಿದ್ದ ಸಂದರ್ಶನಕಾರರು ಇದು ಇದರಲ್ಲಿ ನಿರಾಶೆ ಮೂಡಿಸಿತ್ತು. ಒಮ್ಮೆ ಯಾವಾಗ ಮಿಲನ ಧಾರವಾಹಿಯಲ್ಲಿ ಪ್ರಾರ್ಥನಾ ಪಾತ್ರಕ್ಕೆ ಆಚಾರ-ವಿಚಾರ ಹಾಗೂ ಸಂಪ್ರದಾಯಗಳ ನಟಿಯ ಅವಶ್ಯಕತೆ ಇದೆ ಎಂದು ತಿಳಿದಾಗ ಹಿಂದು ಮುಂದು ನೋಡದೆ ವಿನುತಾ ರವರು ಅಡಿಷನಲ್ಲಿ ಭಾಗವಹಿಸಿ ಪಾತ್ರ ಪಡೆಯಲು ಯಶಸ್ವಿಯಾದರು. ಮುಂದೆ ನಿಮಗೆ ತಿಳಿದೇ ಇದೆ ಪ್ರಾರ್ಥನಾ ಪಾತ್ರದ ಮೂಲಕ ವೀಕ್ಷಕರ ಮನಗೆದ್ದ ವಿನೋದ ರವರು ಕೆಲವೇ ಸಮಯದಲ್ಲಿ ಆ ಧಾರವಾಹಿಯನ್ನು ಕೂಡ ಬಿಟ್ಟರು.

ನಂತರ ಕೆಲಸ ಸಿನಿಮಾ ಅವಕಾಶಗಳು ಬಂದರೂ ಉಡುಗೆ-ತೊಡುಗೆ ಹಾಗೂ ಗ್ಲಾಮರಸ್ ನಟನೆಯ ಬೇಡಿಕೆ ತಿಳಿದಾಗ ಸುತಾರಾಂ ಒಪ್ಪದೆ ಹಿಂದೆಸರಿದರು. ನಟನಾ ವೃತ್ತಿಯಲ್ಲಿ ಅವರು ಇದ್ದಿದ್ದು ಕೆಲವೇ ವರ್ಷಗಳಾದರೂ ಸಹ ಇಂದಿಗೂ ಕೂಡ ಪ್ರೇಕ್ಷಕರ ಮನದಲ್ಲಿ ನೆಲೆಸಿದ್ದಾರೆ ನಟಿ ವಿನುತಾ ರವರು. ವಿನುತಾ ರವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Comments are closed.