Neer Dose Karnataka
Take a fresh look at your lifestyle.

‘ಮಿಡಿದ ಹೃದಯಗಳು’ ಸಿನಿಮಾದಲ್ಲಿ ಅಂಬರೀಶ್ ಅವರ ಪತ್ನಿಯಾಗಿ ನಟಿಸಿದ ನಟಿ ನಿರೋಷ ಇದೀಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದರು ಕೂಡ ಅವರು ಅಭಿನಯಿಸಿದ ಸಿನಿಮಾಗಳು ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಅಂತಹ ನಟಿಯರಲ್ಲಿ ನಿರೋಷ ಕೂಡ ಒಬ್ಬರು. ಹೌದು ಮಿಡಿದ ಹೃದಯಗಳು ಎಂಬ ಸಿನಿಮಾದಲ್ಲಿ ಅಂಬರೀಶ್ ಅವರ ಮೊದಲ ಪತ್ನಿಯಾಗಿ ಅಭಿನಯಿಸಿದ್ದ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.

ಇನ್ನು ಇವರು ಶಶಿಕುಮಾರ್ ಅವರೊಂದಿಗೆ ‘ಇಬ್ಬರ ಹೆಂಡಿರ ಮುದ್ದಿನ ಪೊಲೀಸ್’ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರು ಜನೆವರಿ 30, 1971 ರಲ್ಲಿ ಶ್ರೀಲಂಕಾದ ಕೊಲಂಬೋದಲ್ಲಿ ಜನಿಸಿದರು. ಇನ್ನು ಇವರ ತಂದೆ ಕೂಡ ಖ್ಯಾತ ನಟರು. ಅಷ್ಟೇ ಅಲ್ಲದೆ ಇವರ ಅಕ್ಕ ತಮಿಳಿನ ಖ್ಯಾತ ನಟಿ ರಾಧಿಕಾ. ಹೀಗೆ ಚಿತ್ರರಂಗದ ಕುಟುಂಬದಲ್ಲಿ ಆಡಿ ಬೆಳೆದ ನಟಿ ನೀರೋಷ ಅವರು ಕೂಡ ನಟಿಯಾಗಿ ಗುರುತಿಸಿಕೊಂಡರು.

ನಂತರ ನಟಿಯಾಗುವ ಕನಸುಕಂಡ ನಿರೋಷ ಅವರು ಫೋಟೋ ಶೂಟ್ ಕೂಡ ಮಾಡಿಸಿಕೊಂಡರು. ಒಂದು ದಿನ ಅವರ ಅಕ್ಕ ರಾಧಿಕಾ ಅವರು ತಮಿಳಿನ ಖ್ಯಾತ ನಟ ಕಮಲಹಾಸನ್ ಅವರೊಂದಿಗೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾಗ ತಮ್ಮ ತಂಗಿಯ ಫೋಟೋಗಳನ್ನು ಕಮಲ್ ಹಾಸನ್ ಅವರಿಗೆ ತೋರಿಸಿದ್ದಾರೆ. ಆಗ ಕಮಲ್ ಹಾಸನ್ ಅವರು ಫೋಟೋಗಳನ್ನು ನೋಡಿ ಇವರು ತುಂಬಾ ಚೆನ್ನಾಗಿದ್ದಾರೆ. ಕಣ್ಣಿನಲ್ಲಿ ಏನೋ ಒಂದು ಅಟ್ರ್ಯಾಕ್ಟ್ ಮಾಡುವ ಲಕ್ಷಣ ಇದೆ ಎಂದು ಹೇಳಿ, ಅವರು ಯಾರು ಎಂದು ಕೇಳಿದ್ದರು.

ಆಗ ನಟಿ ರಾಧಿಕಾ ಅವರು ಅವಳು ನನ್ನ ತಂಗಿ ಎಂದು ಹೇಳಿದಾಗ ಕಮಲ್ ಹಾಸನ್ ಅಚ್ಚರಿಯಾಗಿದ್ದರು. ನಂತರ ಕಮಲ್ ಹಾಸನ್ ಅವರು ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ನಿರೋಷ ಅವರ ಫೋಟೋಗಳನ್ನು ತೋರಿಸಿದ್ದಾರೆ. ಹೀಗೆ ಕಮಲ್ ಹಾಸನ್ ಅವರಿಂದ ನಟಿ ನಿರೋಷ ಅವರು ಮಣಿರತ್ನಂ ನಿರ್ದೇಶನದ ಘರ್ಷಣಾ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಹೀಗೆ ಸಿನಿಮಾ ಲೋಕಕ್ಕೆ ಬಂದ ನಟಿ ನಿರೋಷ ಅವರು ನಂತರದಲ್ಲಿ ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು.

ಹೀಗೆ ಅಂದಿನ ದಿನಗಳಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಇವರು ಕೂಡ ಒಬ್ಬರಾದರು. ಇನ್ನು ಇಂದಿನ ದಿನಗಳಲ್ಲಿ ಇವರು ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಇಬ್ಬರು ತಮಿಳು ನಾಯಕ ನಟ ರಾಮ್ ಕೀ ಅವರನ್ನು ಮದುವೆಯಾಗಿದ್ದು ಸುಖ ಸಂಸಾರ ನಡೆಸುತ್ತಿದ್ದಾರೆ, ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯುವ ಇವರು, ಅವಕಾಶ ಸಿಕ್ಕಾಗ ಕಿರುತೆರೆಯಲ್ಲಿ ಕೂಡ ಮೋಡಿ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಬಹಳ ಉತ್ತಮ ಜನಪ್ರಿಯತೆಯನ್ನು ಹಿಂದಿಗೂ ಕೂಡ ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ಇವರು ಇದೇ ರೀತಿಯ ಬಣ್ಣದ ಲೋಕದಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸೋಣ.

Comments are closed.