Neer Dose Karnataka
Take a fresh look at your lifestyle.

ಕೊನೆಗೂ ಕಾಲಿಯಾಯಿತು ಸುಶಾಂತ್ ಇದ್ದ ಮನೆ, ಹೊಸ ಬಾಡಿಗೆ ಎಷ್ಟು ಗೊತ್ತಾ?? ಸುಶಾಂತ್ ಎಷ್ಟು ಪಾವತಿ ಮಾಡುತ್ತಿದ್ದರು ಗೊತ್ತೇ??

1

ನಮಸ್ಕಾರ ಸ್ನೇಹಿತರೇ ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್ ನ ಮಲ್ಟಿ ಟ್ಯಾಲೆಂಟೆಡ್ ನಟ. ಬಿಹಾರದಿಂದ ಮುಂಬೈ ಮಾಯಾ ಲೋಕಕ್ಕೆ ಬಂದು ಬದುಕು ಕಟ್ಟಿಕೊಂಡವರು. ಐಐಟಿ ಯಲ್ಲಿ ಸ್ಥಾನ ಸಿಕ್ಕಿದ್ದರೂ ಸಿನಿಮಾ ಎಂಬ ಮಾಯೆ ಸುಶಾಂತ್ ರನ್ನ ಹಿಡಿದಿಟ್ಟು ಬಾಲಿವುಡ್ ನ ಸ್ಟಾರ್ ಮಾಡಿತ್ತು. ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ನಂತರ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ನಂತರ ಸಿನಿಮಾದಲ್ಲಿ ಸಹನಟನಾಗಿ, ಮುಂದೆ ನಾಯಕ ನಟನಾಗಿ ಬಾಲಿವುಡ್ ನಲ್ಲಿ ಸುಶಾಂತ್ ಬೆಳೆದು ಬಂದ ರೀತಿ ನಿಜಕ್ಕೂ ಅದ್ಭುತ. ಯಾವ ಗಾಡ್ ಫಾದರ್ ಇಲ್ಲದೇ ಸುಶಾಂತ್ ಸಿಂಗ್ ರಜಪೂತ್ ತಮ್ಮದೇ ಬ್ರಾಂಡ್ ಸೃಷ್ಠಿಸಿ ಕೊಂಡಿದ್ದರು.

ಯಾವ ಪಾತ್ರವಾದರೂ ಪರಕಾಯ ಪ್ರವೇಶ ಮಾಡುತ್ತಿದ್ದ ಸುಶಾಂತ್, ಎಂ.ಎಸ್ ಧೋನಿ, ತಾಷ್ಕೆಂಟ್ ಫೈಲ್ಸ್, ಚಿಚೋರೆ, ಪಿಕೆ ಹೀಗೆ ಹಲವು ಸಿನಿಮಾಗಳ ಮೂಲಕ ಜನರ ಮನ ಗೆದ್ದಿದ್ದರು. ಜೊತೆಗೆ ಈ ಮಧ್ಯೆ ಸುಶಾಂತ್ ಸಮುದ್ರಕ್ಕೆ ಮುಖ ಮಾಡಿದ್ದ ಎರಡು ಅಪಾರ್ಟಮೆಂಟ್ ಮಹಡಿಗಳನ್ನ ಬಾಡಿಗೆಗೆ ಪಡೆದು ಕೊಂಡಿದ್ದರು‌.

ಕಳೆದ ವರ್ಷ ಸುಶಾಂತ್ ಸಿಂಗ್ ರಜಪೂತ್ ಇಹಲೋಕ ತ್ಯಜಿಸಿದ ಕಾರಣ, ನಂತರ ನಡೆದ ಘಟನೆಗಳೆಲ್ಲ ಆದ ಮೇಲೆ ಸದ್ಯ ಈಗ ಮನೆ ಬೇರೆಯವರಿಗೆ ಬಾಡಿಗೆಗೆ ಲಭ್ಯವಿದೆ ಎಂಬುದು ತಿಳಿದು ಬಂದಿದೆ, ಆದರೆ ಈ ಮನೆಯ ಬಾಡಿಗೆಯ ಹಣ ಇದೀಗ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಲು ಆರಂಭಿಸಿದೆ. ಹೌದು ಸ್ನೇಹಿತರೇ ಆ ಮನೆಯ ಬಾಡಿಗೆ ಕೇಳಿದರೇ ನೀವು ಒಂದು ಕ್ಷಣ ಹೌಹಾರಿ ಬಿಡುತ್ತಿರಿ. ಹೌದು ಈ ಮನೆಗೆ ಬಾಡಿಗೆ ಈಗ ತಿಂಗಳಿಗೆ 4 ಲಕ್ಷ ರೂಪಾಯಿ ನಿಗದಿ ಪಡಿಸಿದ್ದಾರೆ. ಸುಶಾಂತ್ ಸಿಂಗ್ ಇದೇ ಮನೆಗೆ 4.3 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.