ಇದ್ದಕ್ಕಿದ್ದಂತೆ ಮಂಜು ರವರಿಗೆ ಬಂಪರ್ ಆಫರ್, ವಾಪಾಸ್ ಬಿಗ್ ಬಾಸ್ ಗೆ ಹೋಗಲು ಸಂಭಾವನೆ ಹೆಚ್ಚಳ ಎಷ್ಟು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಗ್ ಬಾಸ್ ಮನೆಗೆ ಎಲ್ಲ ಸ್ಪರ್ದಿಗಳು ಹೊಸ ಆಲೋಚನೆಗಳೊಂದಿಗೆ ಮರಳಿ ಹೋಗುತ್ತಿದ್ದಾರೆ, ಆದರೆ ಇದೇ ಸಮಯದಲ್ಲಿ ಇಷ್ಟು ದಿವಸ ತಮ್ಮ ಕುರಿತು ಜನರು ಏನು ಎಂದು ಕೊಳ್ಳುತ್ತಿದ್ದಾರೆ ಹಾಗೂ ಜನರಿಗೆ ತಮ್ಮ ಆಟದ ಕುರಿತು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುದನ್ನು ಸ್ಪರ್ದಿಗಳು ಅರ್ಥ ಮಾಡಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಇನ್ನು ಮುಂದೆ ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದು ಬಹಳ ಲೆಕ್ಕಾಚಾರಗಳ ಮೂಲಕ ನಡೆಯುತ್ತದೆ ಎಂದರೆ ತಪ್ಪಾಗಲಾರದು.

ಇನ್ನು ಇದೇ ಸಮಯದಲ್ಲಿ ಕಡಿಮೆ ಜನಪ್ರಿಯತೆಯ ನಡುವೆ ಮನೆಯ ಒಳಗಡೆ ಹೋಗಿ ಬಿಗ್ ಬಾಸ್ ಮನೆಯಲ್ಲಿ ಟಾಪ್ ಸ್ಪರ್ದಿಯಾಗಿ ಮಿಂಚುತ್ತಿದ್ದ ಮಂಜು ರವರು, ಈ ಬಾರಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡು ಹೋಗುತ್ತಿದ್ದಾರೆ ಎಂಬುದನ್ನು ನಿಮಗೆ ವಿವರಣೆ ನೀಡುವ ಅಗತ್ಯತೆ ಇಲ್ಲ ಎನಿಸುತ್ತದೆ. ಅದೇ ಕಾರಣಕ್ಕಾಗಿ ಇಷ್ಟು ದಿವಸ ಮಂಜು ಪಾವ್ಗಡಾರವರಿಗೆ ನೀಡುತ್ತಿದ್ದ ಸಂಭಾವನೆ ವಿಚಾರದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ ಎಂದು ಕಿರುತೆರೆಯ ಮೂಲಕಗಳಿಂದ ತಿಳಿದು ಬಂದಿದೆ.

ಹೌದು ಸ್ನೇಹಿತರೇ, ಮಂಜು ಪಾವಗಡ ರವರು ಇಷ್ಟು ದಿವಸ ವಾರಕ್ಕೆ 35 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನಾಗಿ ತೆಗೆದುಕೊಳ್ಳುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಆದರೆ ಇವರ ಜನಪ್ರಿಯತೆ ಹೆಚ್ಚಾಗಿರುವ ಕಾರಣ ವಾಹಿನಿಯ ಕಡೆಯಿಂದ ಮಂಜು ಪಾವಗಡ ರವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು ಮಂಜು ಪಾವಗಡ ರವರಿಗೆ ಇನ್ನು ಹೆಚ್ಚುವರಿ 20 ಸಾವಿರ ರೂಪಾಯಿಗಳನ್ನು ನಿರ್ಧಾರ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಹೌದು ಸ್ನೇಹಿತರೇ, ಒಟ್ಟಾರೆಯಾಗಿ ಇದೀಗ ಮಂಜು ಪಾವಗಡ ರವರು ವಾರಕ್ಕೆ 55 ಸಾವಿರ ರೂಪಾಯಿ ಗಳನ್ನು ಸಂಭಾವನೆಯನ್ನಾಗಿ ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ.

Leave a Reply

Your email address will not be published. Required fields are marked *