Neer Dose Karnataka
Take a fresh look at your lifestyle.

ಟೀಚರ್ 100 ರೂಪಾಯಿ ಸಿಕ್ಕರೆ ಏನು ಮಾಡುತ್ತೀಯಾ ಎಂದಾಗ ಬಾಲಕನ ಉತ್ತರ ಕೇಳಿ ಕಣ್ಣೀರು ಹಾಕಿದ ಟೀಚರ್, ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಾವಿಂದು ಏನೇ ಕಲಿಸಿದ್ದರು ಏನೇ ದೊಡ್ಡ ಸ್ಥಾನದಲ್ಲಿದ್ದರೂ ಅಥವಾ ಏನೇ ಬುದ್ಧಿವಂತಿಗೆ ಏನು ಕೊಡುತ್ತಿದ್ದರೂ ಸಹ ಅದರ ನಾಂದಿ ಹಾಡಿದ್ದು ಮಾತ್ರ ನಮ್ಮ ಶಿಕ್ಷಣ ಸಂಸ್ಥೆ ಎಂಬುದು ನಾವು ನೆನಪಿಡಬೇಕು. ನಮಗೆ ಚಿಕ್ಕವಯಸ್ಸಿನಲ್ಲಿ ಗುರುಗಳು ಹೇಳಿದ ಪಾಠ ಹಾಗೂ ನೀತಿ ಪಾಠಗಳ ಹಿಂದಿನ ಜೀವನಕ್ಕೆ ಬುನಾದಿಯಾಗಿ ನಿಂತಿವೆ. ಸ್ನೇಹಿತರಿಂದ ನಾವು ಒಂದು ನಿಜ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮ ಮುಂದಿಡಲು ಹೊರಟಿದ್ದೇವೆ. ಈ ಕಥೆ ಕೇಳಿ ನಿಮ್ಮ ಕಣ್ಣಲ್ಲಿ ಕೂಡ ನೀರು ಬಂದರೂ ಬರಬಹುದು ಕೊನೆವರೆಗೂ ತಪ್ಪದೇ ಓದಿ.

ಹೌದು ಒಮ್ಮೆ ಒಬ್ಬ ಟೀಚರ್ ತಮ್ಮ ತರಗತಿಯಲ್ಲಿ ಬಂದು ಮಕ್ಕಳಿಗೆ ನನ್ನ ಬಳಿ 100 ರೂಪಾಯಿ ಇದೆ ಇದನ್ನು ನಾವು ನಿಮಗೆ ನೀಡಿದರೆ ನೀವು ಏನು ಮಾಡುತ್ತೀರಿ ಎಂದು ಕೇಳಿದಾಗ ಒಬ್ಬ ಹುಡುಗ ನಾನು ಇದರಿಂದ ನನ್ನ ಅಮ್ಮನಿಗೆ ಕನ್ನಡಕವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಟೀಚರ್ ಕನ್ನಡಕವನ್ನು ನಿಮ್ಮ ಅಮ್ಮನಿಗೆ ನಿಮ್ಮ ತಂದೆ ಕೊಡಿಸುತ್ತಾರೆ ಇದರಿಂದ ನೀನು ಏನು ತೆಗೆದುಕೊಳ್ಳುತ್ತೀಯಾ ಎಂದು ಮತ್ತೆ ಮರುಪ್ರಶ್ನೆ ಹಾಕಿದರು. ಅದಕ್ಕೆ ಆ ವಿದ್ಯಾರ್ಥಿ ನೀಡಿದ ಉತ್ತರ ಟೀಚರ್ಗೆ ಕೂಡ ಕಣ್ಣಲ್ಲಿ ನೀರು ಹರಿಸುವಂತೆ ಮಾಡಿತು.

ಹೌದು ಹುಡುಗ ಟೀಚರ್ ನನಗೆ ತಂದೆ ಇಲ್ಲ ನನ್ನ ತಾಯಿಯೇ ನನಗೆ ಬಟ್ಟೆಯನ್ನು ಹೊಲಿಯೋ ಕೆಲಸದ ಮೂಲಕ ನನ್ನ ಶಿಕ್ಷಣ ಹಾಗೂ ಶಾಲೆಗಳು ಊಟದ ಖರ್ಚು ವೆಚ್ಚವನ್ನು ಅವರೇ ನೋಡಿ ಕೊಳ್ಳುತ್ತಾರೆ. ಅವರಿಗಾಗಿ ಅವರು ಏನನ್ನು ತೆಗೆದು ಕೊಳ್ಳುವುದಿಲ್ಲ ಎಲ್ಲಾ ನನಗಾಗಿ ಕರ್ಚು ಮಾಡುತ್ತಾರೆ. ಅದಕ್ಕಾಗಿ ನೀವು ಕೊಡುವ ನೂರು ರೂಪಾಯಿಗಳನ್ನು ಅಮ್ಮನ ಕನ್ನಡಕವನ್ನು ತರಲು ಉಪಯೋಗಿಸುತ್ತೇನೆ ಎಂದನು. ಇದಕ್ಕೆ ಮನ ಕರಗಿದ ಟೀಚರ್ ನಿಜವಾಗಿಯೂ ಆ ನೂರು ರೂಪಾಯಿಯನ್ನು ಆ ಹುಡುಗನಿಗೆ ನೀಡಿ ನೀನು ನನ್ನ ಜೀವನದಲ್ಲಿ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಅಲ್ಲದೆ ನೀನು ದೊಡ್ಡ ವ್ಯಕ್ತಿಯಾಗಿ ಅಧಿಕಾರಿಯಾಗಿ ಬಂದನಂತರ ನನಗೆ ಈ ನೂರು ರೂಪಾಯಿಯನ್ನು ಮತ್ತೊಮ್ಮೆ ಹಿಂದಿರುಗಿಸಬೇಕು ಎಂದು ಹೇಳಿದರು. ಸ್ನೇಹಿತರೆ ಬಡಮಕ್ಕಳಿಗೆ ಅವರು ಶೈಕ್ಷಣಿಕ ವರ್ಗದಲ್ಲಿ ಇರುವಾಗ ಯಾರಾದರೂ ಅವರಿಗೆ ಪ್ರೋತ್ಸಾಹ ನೀಡಿದರೆ ಅವರು ಖಂಡಿತವಾಗಿಯೂ ಓದುವುದರಲ್ಲಿ 100% ಪ್ರಯತ್ನವನ್ನು ಹಾಕುತ್ತಾರೆ ಎಂಬುದು ಇಲ್ಲಿ ಮತ್ತೊಮ್ಮೆ ಸಾಬೀತಾಯಿತು. ಅದಾದ 20 ವರ್ಷಗಳ ನಂತರ ಅದೇ ಶಾಲೆಯ ಮುಂದೆ ಕಾರೊಂದು ಬಂದಿಳಿಯಿತು.

ಆ ಕಾರಿನಿಂದ ಬಂದಿದ್ದ ವ್ಯಕ್ತಿ ಸೀದಾ ಟೀಚರ್ ನ ಬಳಿಗೆ ಹೋಗಿ ನೂರು ರೂಪಾಯಿಯನ್ನು ನೀಡಿ ಮೇಡಂ ನೋಡಿ ನೀವು ಹೇಳಿದಂತೆ ದೊಡ್ಡ ವ್ಯಕ್ತಿಯಾಗಿ ಬಂದು ನಿಮ್ಮ ನೂರು ರೂಪಾಯಿ ನೀಡುತ್ತಿದ್ದೇನೆ ಎಂದು ಹೇಳಿದರು. ಇದನ್ನು ನೋಡಿದ ಟೀಚರ್ಗೆ ನಾನು ಕಲಿಸಿದ ಹುಡುಗ ಇಂದು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ತನ್ನನ್ನು ತಾನು ರೂಪಿಸಿಕೊಂಡಿದ್ದಾರೆ ಎಂದು ತಿಳಿದಾಕ್ಷಣ ಬಹಳ ಗರ್ವ ಹಾಗೂ ಹೆಮ್ಮೆಯಾಯಿತು. ಸ್ನೇಹಿತರೆ ಇದು ನಿಜವಾದ ಜೀವನದಲ್ಲಿ ನಡೆದ ಘಟನೆ ಆ ವ್ಯಕ್ತಿ ಯಾರು ಗೊತ್ತೆ ನಿಮಗೆ ಹೇಳುತ್ತೇನೆ ಬನ್ನಿ.

ಹೌದು ನೂರು ರೂಪಾಯಿಯ ಸ್ಪೂರ್ತಿಯಿಂದ ಜೀವನದಲ್ಲಿ ಕಷ್ಟಪಟ್ಟು ಶಿಕ್ಷಣವನ್ನು ಕಲಿತು ಐಎಎಸ್ ಅಧಿಕಾರಿಯಾಗಿ ಇಂದು ದೇಶದಲ್ಲಿ ದಕ್ಷ ಅಧಿಕಾರಿಗಳಲ್ಲಿ ಒಬ್ಬರಾಗಿರುವ ತುಕಾರಾಮ್ ರವರ ಕಥೆಯಿದು. ಈ ಕಥೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ middle-class ವರ್ಗದ ಜನರಿಗೆ ಖಂಡಿತವಾಗಿಯೂ ಸ್ಪೂರ್ತಿಯಾದೀತು ಎಂಬುದು ನಮ್ಮ ಭಾವನೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ ಹಾಗೂ ಈಗತೆ ಬಗ್ಗೆ ನಿಮಗೇನನಿಸುತ್ತದೆ ನಮಗೆ ತಿಳಿಸಿ.

Comments are closed.