Neer Dose Karnataka
Take a fresh look at your lifestyle.

ಯಪ್ಪಾ, ಸನ್ನಿ ಗೆ ಹೋಗಬೇಕಾಗಿದ್ದ ಗ್ಲಾಮರಸ್ ಪಾತ್ರವನ್ನು ನಾನೇ ಮಾಡುತ್ತೇನೆ ಎಂದು ಶಾಕ್ ನೀಡಿದ ಟಾಪ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸನ್ನಿ ಲಿಯೋನ್ ರವರು, ಭಾರತದ ಬಹುತೇಕ ಚಿತ್ರ ರಂಗಗಳಲ್ಲಿ ಈಗಾಗಲೇ ಒಂದಲ್ಲ ಒಂದು ಪಾತ್ರದಲ್ಲಿ ಅಥವಾ ಕನಿಷ್ಠ ಪಕ್ಷ ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಇವರ ಹಿಂದಿನ ಜೀವನವನ್ನು ಬಹುತೇಕ ಮರೆಸುವಂತೆ ಭಾರರತದ ಚಿತ್ರ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೆಲವೊಂದು ಮಾನವೀಯತೆ ಮೆರೆಯುವಂತಹ ಕೆಲಸಗಳನ್ನು ಕೂಡ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.

ಆದರೆ ಈಗಲೂ ಕೂಡ ಸನ್ನಿ ರವರಿಗೆ ವಯಸ್ಕ ಪಾತ್ರಗಳೇ ಹೆಚ್ಚಾಗಿ ಸಿಗುತ್ತವೆ ಇಲ್ಲವಾದಲ್ಲಿ ಐಟಂ ಸಾಂಗ್ ಗಳಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಗುತ್ತದೆ. ಈಗಲೂ ಕೂಡ ಅದೇ ರೀತಿಯ ಅವಕಾಶವೊಂದು ಸನ್ನಿ ರವರನ್ನು ಅರಸಿಕೊಂಡು ಬಂದಿತ್ತು, ಆದರೆ ಸನ್ನಿ ರವರು ಪಾತ್ರದ ಕುರಿತು ಒಪ್ಪಿಗೆ ಸೂಚಿಸಿದರು ಕೂಡ ಕೊನೆಯ ಕ್ಷಣದಲ್ಲಿ ಸನ್ನಿ ರವರಿಗೆ ನೀಡಬೇಕಾಗಿದ್ದ ಪಾತ್ರವನ್ನು ದಕ್ಷಿಣ ಭಾರತದ ಟಾಪ್ ನಟಿ ಪಡೆದುಕೊಂಡಿದ್ದಾರೆ. ಈ ಮೂಲಕ ಟಾಪ್ ನಟಿ ಇದೀಗ ವಯಸ್ಕ ಕಾಮಿಡಿ ಇರುವ ಪಾತ್ರದಲ್ಲಿ ನಟನೆ ಮಾಡುವುದು ಖಚಿತವಾಗಿದೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಗ್ಲಾಮರಸ್ ಪಾತ್ರ ಮಾತ್ರ ಸನ್ನಿ ರವರಿಗೆ ನೀಡಲಾಗುತ್ತದೆ, ಆದರೆ ಈ ಗ್ಲಾಮರಸ್ ಪಾತ್ರವನ್ನು ಅದೇಗೆ ಟಾಪ್ ನಟಿ ಮಾಡುತ್ತಾರೆ ಎಂದು ಕೊಂಡಿದ್ದೀರಾ?? ನಿಮ್ಮ ಆಲೋಚನೆ ಸರಿ ಇದೆ, ಆದರೆ ಟಾಪ್ ನಟಿಯಾಗಿದ್ದರು ಕೂಡ ವಯಸ್ಕ ಪಾತ್ರದಲ್ಲಿ ನಟನೆ ಮಾಡಲು ದಕ್ಷಿಣ ಭಾರತದ ಟಾಪ್ ನಟಿಯಾಗಿರುವ ಕಾಜಲ್ ಅಗರ್ವಾಲ್ ರವರು ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಹಾಗೂ ಇದೆ ಸಮಯದಲ್ಲಿ ನಿರ್ಮಾಪಕರು ಕೂಡ ತಮಿಳಿನ ಚಿತ್ರವಾಗಿರುವ ಕಾರಣ ಕಾಜಲ್ ಅಗರ್ವಾಲ್ ರವರಿಗೆ ಅವಕಾಶ ನೀಡುವುದು ಉತ್ತಮ, ಯಾಕೆಂದರೆ ಇವರದ್ದು ಚಿರ ಪರಿಚಿತ ಮುಖ ಎಂದು ಕಾಜಲ್ ಅಗರ್ವಾಲ್ ರವರಿಗೆ ಪಾತ್ರವನ್ನು ಫೈನಲ್ ಮಾಡಿದ್ದಾರೆ.

Comments are closed.