Neer Dose Karnataka
Take a fresh look at your lifestyle.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಒಲವಿನ ಉಡುಗೊರೆ ಚಿತ್ರದ ನಟಿ ಈಗ ಏನಾಗಿದ್ದಾರೆ ಗೊತ್ತಾ??

43

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ಕೆಲವು ಚಿತ್ರಗಳಲ್ಲಿ ನಟಿಸಿದ್ದರು ಸಹ ಅವರ ನಟನಾ ಶೈಲಿಯ ಮೂಲಕ ಪ್ರೇಕ್ಷಕರ ಮನಸ್ಸನ್ನು ದೀರ್ಘಕಾಲದವರೆಗೆ ಸೆಳೆದು ಹಿಡಿದಿಟ್ಟುಕೊಳ್ಳುವಂತ ಸಾಮರ್ಥ್ಯ ಇದೆ. ಅಂತಹ ಕೆಲವೇ ಕೆಲವು ಬೆರಳೆಣಿಕೆಯಷ್ಟು ನಟಿಯರಲ್ಲಿ ಇಂದು ನಾವು ಹೇಳುತ್ತಿರುವ ನಟಿ ಕೂಡ ಒಬ್ಬರು. ಇವರು 80 ಹಾಗು 90ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ಬನ್ನಿ ನಾವು ಹೇಳುತ್ತೇವೆ.

ಹೌದು ಸ್ನೇಹಿತರೆ ನಾವು ಎಂದು ಹೇಳಲು ಹೊರಟಿರುವುದು 80 ಹಾಗೂ 90 ರ ದಶಕದಲ್ಲಿ ದಕ್ಷಿಣ ಭಾರತದ ಬಹು ಬೇಡಿಕೆಯ ಖ್ಯಾತ ನಟಿಯಾಗಿ ಪ್ರಖ್ಯಾತರಾಗಿದ್ದ ಮಂಜುಳಾ ಶರ್ಮಾ ರವರ ಬಗ್ಗೆ ಹೇಳಲು ಹೊರಟಿದ್ದೇವೆ. ಇವರು ತಮ್ಮ ಮುಗ್ಧ ನೋಟ ಹಾಗೂ ನೈಜ ನಟನೆಯ ಮೂಲಕ ಸ್ವಾಭಾವಿಕವಾಗಿ ಎಲ್ಲಾ ಪ್ರೇಕ್ಷಕರನ್ನು ಗೆದ್ದಂತಹ ನಟಿ. ಎಂಬತ್ತರ ದಶಕದಲ್ಲಿ ಬಹುಬೇಡಿಕೆ ಯನ್ನು ಹೊಂದಿದ್ದ ಈ ನಟಿ ಕನ್ನಡ ತಮಿಳು ತೆಲುಗು ಮಲಯಾಳಂ ಚಿತ್ರಗಳಲ್ಲಿ ಕೂಡ ಬಹುಬೇಡಿಕೆಯ ನಟಿಯಾಗಿ ನಟಿಸಿ ಪ್ರಖ್ಯಾತಿಯನ್ನು ಹೊಂದಿದವರು.

ಮಂಜುಳಾ ಶರ್ಮಾರವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದುದ್ದು ಸಾಂಸಾರಿಕ ಚಿತ್ರಗಳಲ್ಲಿ. ಅದಕ್ಕಾಗಿ ಅವರನ್ನು ಕೌಟುಂಬಿಕ ಪ್ರೇಕ್ಷಕರು ಮನೆಮಂದಿಯಲ್ಲಾ ಕುಳಿತು ಅವರ ನಟನೆಯನ್ನು ವೀಕ್ಷಿಸಿ ಮೆಚ್ಚುತ್ತಿದ್ದರು. ಇನ್ನು ಮೂಲತಹ ಮಂಜುಳಾ ಶರ್ಮಾ ರವರು ತಮಿಳಿನವರ ಆಗಿದ್ದು ತಮಿಳಿನಲ್ಲಿ ಮೊದಲ ಖ್ಯಾತಿ ಪಡೆದು ನಂತರ 1983 ರಲ್ಲಿ ತೆರೆಕಂಡ ಮುತ್ತೈದೆ ಭಾಗ್ಯ ಚಿತ್ರದಲ್ಲಿ ಸಹ ನಟಿಯಾಗಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದನಂತರ ಹೊಸ ಇತಿಹಾಸ ಎಂಬ ಕನ್ನಡ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಡೆಸಿದರು.

ಇನ್ನು ಕನ್ನಡ ಚಿತ್ರರಂಗದಲ್ಲಿ ಇವರಿಗೆ ಯಶಸ್ಸನ್ನು ತಂದುಕೊಟ್ಟಂತಹ ಚಿತ್ರವೆಂದರೆ ಅದು ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ ಒಲವಿನ ಉಡುಗೊರೆ ಚಿತ್ರ. ರಾಜೇಂದ್ರಬಾಬು ನಿರ್ದೇಶನದಲ್ಲಿ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ನಾಯಕತ್ವದಲ್ಲಿ ಮೂಡಿ ಬಂದಂತಹ ಈ ಚಿತ್ರ ಮಂಜುಳಾ ಶರ್ಮ ರವರಿಗೆ ಮಾತ್ರವಲ್ಲದೆ ಇಡೀ ಚಿತ್ರತಂಡಕ್ಕೆ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿತು. ಮಂಜುಳಾ ಶರ್ಮಾ ರವರ ಒಲವಿನ ಉಡುಗೊರೆ ಚಿತ್ರದ ಪರ್ಫಾರ್ಮೆನ್ಸ್ ಅವರನ್ನು ಕನ್ನಡ ಚಿತ್ರರಂಗದ ಪ್ರೇಕ್ಷಕರತ್ತ ಇನ್ನಷ್ಟು ಹತ್ತಿರವಾಗುವಂತೆ ಮಾಡಿತು.

ಒಲವಿನ ಉಡುಗೊರೆ ನಟನೆ ನೋಡಿದ ಮೇಲೆ ಕನ್ನಡ ಪ್ರೇಕ್ಷಕರು ಸಹ ಮಂಜುಳಾ ಶರ್ಮಾ ರವರನ್ನು ಇಷ್ಟಪಡಲು ಪ್ರಾರಂಭಿಸಿದರು. ಇದಾದನಂತರ ನಮ್ಮೂರ ರಾಜ ಪದ್ಮವ್ಯೂಹ ಒಂದಾಗಿ ಬಾಳೋಣ ನನ್ನ ಭೂಮಿ ಪೋಲಿ ಕಿಟ್ಟಿ ರಾಷ್ಟ್ರಗೀತೆ ಸಮರಸಿಂಹ ಹಾಗೂ ಜೈಲರ್ ಜಗನ್ನಾಥ್ ಹೀಗೆ ಹತ್ತು ಚಿತ್ರಗಳಲ್ಲಿ ನಟಿ ಮಂಜುಳ ಶರ್ಮರವರು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಚಿತ್ರಗಳಲ್ಲಿ ಆದರೂ ನಟಿಸಿದ್ದ ನಾಯಕರುಗಳು ಎಲ್ಲಾ ಸೂಪರ್ ಸ್ಟಾರ್ ಗಳು. ಹೌದು ಮಂಜುಳಾ ಶರ್ಮಾ ರವರು ಸಾಹಸಸಿಂಹ ಡಾ ವಿಷ್ಣುವರ್ಧನ್ ಟೈಗರ್ ಪ್ರಭಾಕರ್ ಸಾಯಿಕುಮಾರ್ ಚರಣ್ ರಾಜ್ ಹಾಗೂ ಕಾಶಿನಾಥ್ ರಂತಹ ಸ್ಟಾರ್ ನಟರೊಂದಿಗೆ ನಟಿಸಿದರು.

ಮಂಜುಳಾ ಶರ್ಮಾರವರು ತಮ್ಮ ಸಿನಿ ಜೀವನದಲ್ಲಿ ಬಹಳಷ್ಟು ಸಾಧನೆ ಮಾಡಿದ್ದು 90ರ ದಶಕದ ನಂತರ ಪೋಷಕ ನಟಿಯಾಗಿ ಕೂಡ ಕಾಣಿಸಿಕೊಳ್ಳತೊಡಗಿದರು. ನೂರಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಮಂಜುಳ ಶರ್ಮರವರು ತಮ್ಮ ಸಿನಿ ಜೀವನದಲ್ಲಿ ಶ್ರೇಷ್ಠ ಸಿನಿಮಾ ಗಳನ್ನು ನೀಡಿದ್ದಾರೆ. ಬರೋಬ್ಬರಿ ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಮಂಜುಳಾ ಶರ್ಮರವರು ನಂತರ ಕ್ರಮೇಣವಾಗಿ ಚಿತ್ರರಂಗದಿಂದ ದೂರ ಆಗುತ್ತಾ ಬಂದರೂ.

ಅವರು ಕೊನೆಯಲ್ಲಿ ನಡೆಸಿದ್ದ ಪ್ರಮುಖ ಚಿತ್ರವೆಂದರೆ ಅದು ತೆಲುಗಿನ ಸ್ಟೈಲಿಸ್ಟ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪರುಗು ಚಿತ್ರ 2008 ರಲ್ಲಿ ಬಿಡುಗಡೆಯಾಗಿತ್ತು. ಇದಾದ ನಂತರ ನಟಿ ಮಂಜುಳಾ ಶರ್ಮಾ ರವರು ಸಂಪೂರ್ಣವಾಗಿ ಚಿತ್ರರಂಗದಿಂದ ವಿಮುಖರಾಗಿ ಹೋದರು. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.