Neer Dose Karnataka
Take a fresh look at your lifestyle.

ಗಟ್ಟಿಮೇಳ ಆಧ್ಯ, ಅನ್ವಿತಾ ಸಾಗರ್ ರವರು ಏನೆಲ್ಲಾ ಮಾಡುತ್ತಾರೆ ಗೊತ್ತಾ?? ಇವರ ಒಟ್ಟು ಆಸ್ತಿಯೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯಲ್ಲಿ ಗಟ್ಟಿಮೇಳ ಧಾರಾವಾಹಿಯಲ್ಲಿ ಆಧ್ಯ ಪಾತ್ರದ ಮೂಲಕ ಬಾರಿ ಸದ್ದು ಮಾಡುತ್ತಿರುವ ಅನ್ವಿತಾ ಸಾಗರ್ ರವರ ಕುರಿತು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಅಥವಾ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೆಲವೇ ಕೆಲವು ನಟಿಯರಲ್ಲಿ ಅನ್ವಿತಾ ಸಾಗರ್ ರವರು ಕೂಡ ಒಬ್ಬರು ಎಂದರೆ ತಪ್ಪಾಗಲಾರದು. ಇವರು ಗಟ್ಟಿಮೇಲೆ ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟನೆ ಮಾಡುತ್ತಿದ್ದರೂ ಕೂಡ,

ಯಾವುದೇ ನಟಿಯರಿಗಿಂತ ಕಡಿಮೆ ಜನಪ್ರಿಯತೆ ಯನ್ನು ಪಡೆದುಕೊಂಡಿಲ್ಲ. ತಮ್ಮ ಅದ್ಬುತ ನಟನೆ ಹಾಗೂ ಎಕ್ಸ್ಪ್ರೆಶನ್ ಗಳ ಮೂಲಕ ಬಾರಿ ಅಭಿಮಾನಿಗಳನ್ನು ಗಳಿಸುವುದರಲ್ಲಿ ಅನ್ವಿತಾ ಸಾಗರ್ ರವರು ಯಶಸ್ವಿಯಾಗಿದ್ದಾರೆ. ನಟಿಸಿದ್ದು ಒಂದೇ ಧಾರಾವಾಹಿಯಾದರೂ ಕೂಡ ಪಡೆದ ಜನಪ್ರಿಯತೆಗೇನು ಕಡಿಮೆ ಇಲ್ಲ. ಹೀಗೆ ಇಷ್ಟೆಲ್ಲ ಸದ್ದು ಮಾಡುತ್ತಿರುವ ಅನ್ವಿತಾ ಸಾಗರ್ ರವರು ನಿಜಕ್ಕೂ ಯಾರು ಗೊತ್ತೇ??ಬನ್ನಿ ಈ ಕುರಿತು ಇಂದು ಅನ್ವಿತಾ ಸಾಗರ್ ರವರ ಕುರಿತು ಕೊಂಚ ಹೆಚ್ಚಿನ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ, ಅನ್ವಿತಾ ಸಾಗರ್ ರವರು ಮೂಲತಃ ತುಳು ನಾಡಿನ ಕಲಾವಿದೆ. ತುಳು ಸಿನಿಮಾ ರಂಗದಲ್ಲಿ ನಾಯಕಿ ನಟಿಯಾಗಿಯೂ ಕೂಡ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದಾರೆ. ನಯಾಗಿಯಾಗಿದ್ದ ಇವರು ಗಟ್ಟಿಮೇಳ ಧಾರಾವಾಹಿಗೆ ಆಡಿಷನ್ ನೀಡಿ ಆಯ್ಕೆ ಆದ ಬಳಿಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆ ಪಡೆದಿದ್ದಾರೆ. ಇನ್ನು ನಿರೂಪಕಿಯಾಗಿಯೂ ಕೂಡ ಕಾರ್ಯ ನಿರ್ವಹಣೆ ಮಾಡಿರುವ ಇವರು ಮೂಲತಃ ಶ್ರೀಮಂತ ಕುಟುಂಬದಿಂದ ಬಂದವರು. ತಮ್ಮದೇ ಆದ ಐಷಾರಾಮಿ ಕೆಫೆ ಕೂಡ ಇಟ್ಟುಕೊಂಡಿದ್ದಾರೆ ಅನ್ವಿತಾ ಸಾಗರ್. ಕಿರುತೆರೆಯಲ್ಲಿ ಪಾತ್ರ, ಕೆಫೆ, ನಾಯಕಿ ನಟಿಯಾಗಿ ಹೀಗೆ ವಿವಿಧ ರೀತಿಯಲ್ಲೂ ಕೂಡ ಅನ್ವಿತಾ ಸಾಗರ್ ರವರು ಯಶಸ್ಸು ಕಂಡಿದ್ದಾರೆ. ಹೀಗೆ ಇವರು ಜೀವನದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂಬುದು ನಮ್ಮೆಲ್ಲರ ಆಶಯ.

Comments are closed.