Neer Dose Karnataka
Take a fresh look at your lifestyle.

ಟಾಪ್ ವಿಲ್ಲನ್ ಆರ್ಮುಗಂ ಜನಪ್ರಿಯತೆಯ ನಟ ರವಿಶಂಕರ್ ಮಗ ಹೇಗಿದ್ದಾನೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೆ ಬೇರೆ ಚಿತ್ರರಂಗದಿಂದ ಬಂದು ನೆಲೆ ಕಂಡುಕೊಂಡವರು ಕೇವಲ ನಟ-ನಟಿಯರು ಮಾತ್ರವಲ್ಲದೆ ಖಳನಾಯಕರು ಪೋಷಕ ನಟರು ಕೂಡ ಹೌದು. ಆದರೆ ಕೇವಲ ನಟನೆ ಮಾತ್ರವಲ್ಲದೆ ತಮ್ಮ ನಟನೆಯ ಮೂಲಕ ತಾವು ಪರಭಾಷಿಕರ ಎಂದು ವೀಕ್ಷಕರ ಮನಸ್ಸಿನಲ್ಲಿ ಮರೆಯುವಂತೆ ಮಾಡಿ ತಾವು ಸ್ವಂತ ಕನ್ನಡ ಮಣ್ಣಿನ ಮಗನ ಭಾವನೆ ಮೂಡಿಸಿದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅದರಲ್ಲಿ ಇನ್ನು ನಾವು ಹೇಳಹೊರಟಿರುವ ನಟ ಕೂಡ ಒಬ್ಬರು. ಇವರು ತಮ್ಮ ವೃತ್ತಿಜೀವನವನ್ನು ಡಬ್ಬಿಂಗ್ ಆರ್ಟಿಸ್ಟ್ ಆಗಿ ಪ್ರಾರಂಭಿಸಿ ನಂತರದ ದಿನಗಳಲ್ಲಿ ಕನ್ನಡಚಿತ್ರರಂಗದಲ್ಲಿ ಖ್ಯಾತ ಖಳ ನಾಯಕನಾಗಿ ರೂಪುಗೊಂಡಿದ್ದಾರೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಕೆಂಪೇಗೌಡ ಚಿತ್ರದ ಆರುಮುಗಂ ಖ್ಯಾತಿಯ ರವಿಶಂಕರ್ ಅವರ ಬಗ್ಗೆ. ಸ್ನೇಹಿತರೆ ರವಿಶಂಕರ್ ರವರ ತಂದೆ ಪಿಜೆ ಶರ್ಮ ತೆಲುಗು ಕನ್ನಡ ತಮಿಳು ಚಿತ್ರರಂಗದಲ್ಲಿ ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಕ್ತಗತವಾಗಿ ರವಿಶಂಕರ್ ಅವರಿಗೂ ಕೂಡ ಅದೇ ವಾಯ್ಸ್ ವರದಾನವಾಗಿ ಮೂಡಿಬಂದಿತ್ತು. ಮೊದಲಿಗೆ ಚಿತ್ರವೊಂದರ ಮೂಲಕ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಹೋದ ರವಿ ಶಂಕರ್ ರವರಿಗೆ ನಿರಾಶೆ ಕಾದಿತ್ತು.

ಆದ್ದರಿಂದ ಅವರು ತಮ್ಮ ಡಬ್ಬಿಂಗ್ ಆರ್ಟಿಸ್ಟ್ ವರ್ಕನ್ನು ಪೂರ್ಣಪ್ರಮಾಣದಲ್ಲಿ ನಿರ್ವಹಿಸಿದರು. ಇನ್ನೂ ಅವರು ಅರುಂಧತಿ ಚಿತ್ರಕ್ಕೆ ಸೋನು ಸೂದ್ ಅವರ ಪಾತ್ರಕ್ಕೆ ವಾಯ್ಸ್ ಓವರ್ ನೀಡಿದ್ದು ಕೇವಲ ತೆಲುಗು ಭಾಷಿಗರಿಗೆ ಮಾತ್ರವಲ್ಲದೆ ಪರಭಾಷಿಗರು ಕೂಡ ಮೆಚ್ಚುವಂತಿತ್ತು. ಅಂತಹ ಬೆಸ್ ಟೋನ್ ವಾಯ್ಸ್ ನಮ್ಮ ರವಿಶಂಕರ್ ಅವರದ್ದು. ಇವರ ಪ್ರತಿಭೆಯ ಅಂದಾಜು ಮಾಡಿದ ನಮ್ಮ ಕನ್ನಡದ ಹೆಮ್ಮೆಯ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವಿಶಂಕರ್ ಅವರಿಗೆ ಮೊದಲ ಬಾರಿಗೆ ಕೆಂಪೇಗೌಡ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದರು.

ಕಿಚ್ಚ ಸುದೀಪ್ ರವರು ನೀಡಿದ ಈ ಸುವರ್ಣಾವಕಾಶವನ್ನು ರವಿಶಂಕರ್ ಸದುಪಯೋಗಪಡಿಸಿಕೊಂಡು ಆರ್ಮುಗ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರು ನೆಚ್ಚಿನ ಖಳನಾಯಕನಾಗಿ ಮೂಡಿಬಂದರು. ಇದಕ್ಕಾಗಿ ಆರುಮುಗ ರವಿಶಂಕರ್ ಅವರು ಇಂದಿಗೂ ಕೂಡ ಕಿಚ್ಚ ಸುದೀಪ್ ಹಾಗೂ ಕೆಂಪೇಗೌಡ ಚಿತ್ರಕ್ಕೆ ಋಣಿಯಾಗಿದ್ದಾರೆ. ಕೆಂಪೇಗೌಡ ಚಿತ್ರದ ಯಶಸ್ಸಿನಲ್ಲಿ ಪ್ರಾರಂಭವಾದ ಕನ್ನಡ ಚಿತ್ರರಂಗದ ಸಿನಿಪಯಣ ಇಂದಿನವರೆಗೂ ಕೂಡ ರವಿ ಶಂಕರ್ ರವರಿಗೆ ಬಹುಬೇಡಿಕೆಯ ನಟ ಸ್ಥಾನವನ್ನು ಕನ್ನಡ ಚಿತ್ರರಂಗದಲ್ಲಿ ಮಾಡಿಕೊಟ್ಟಿದೆ.

ಇದು ಅವರ ಪ್ರತಿಭೆ ಹಾಗೂ ಧ್ವನಿಗಿದ್ದ ಬೇಡಿಕೆ ಎಂದೇ ಹೇಳಬಹುದು. ನಿಮಗೆ ತಿಳಿದಂತೆ ರವಿಶಂಕರ್ ಅವರು ತಮ್ಮ ಸಹೋದರರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಖಾಯಮ್ಮಾಗಿ ಉಳಿದುಕೊಂಡಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಅಯ್ಯಪ್ಪ ಪಿ ಶರ್ಮ ರವಿಶಂಕರ್ ತ್ರೀಮೂರ್ತಿಗಳು ಸಹೋದರರು. ಇನ್ನು ಇತ್ತೀಚಿನ ದಿನಗಳಲ್ಲಿ ಮೂಡಿಬರುತ್ತಿರುವ ಸುದ್ದಿಯ ಪ್ರಕಾರ ಆರ್ಮುಗ ರವಿಶಂಕರ್ ಅವರ ಮಗ ಕೂಡ ಕನ್ನಡ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ ಎಂಬ ಸುದ್ದಿಗಳು ಬಹಳಷ್ಟು ಕೇಳಿಬರುತ್ತಿವೆ. ಹೌದು ಈ ಕುರಿತಂತೆ ನಿಮಗೆ ಇನ್ನಷ್ಟು ವಿವರವಾದ ಮಾಹಿತಿಗಳನ್ನು ನಾವು ನೀಡುತ್ತೇವೆ ಬನ್ನಿ.

ಹೌದು ಸ್ನೇಹಿತರೆ ಆರ್ಮುಗ ಖ್ಯಾತಿಯ ರವಿಶಂಕರ್ ಅವರು ತಮ್ಮ ಮಗನನ್ನು ಕೂಡ ಕನ್ನಡ ಚಿತ್ರರಂಗದ ಮೂಲಕ ಪಾದಾರ್ಪಣೆ ಮಾಡಿಸಿ ಉತ್ತಮ ನಟನಾಗಿ ಮಾಡುವ ಕನಸನ್ನು ಕಂಡಿದ್ದಾರೆ. ಇದಕ್ಕಾಗಿ ಸಿನಿ ಶಿಕ್ಷಣದ ತರಬೇತಿ ಮಾಡಿಸಲು ಮಗನಾದ ಅದ್ವೈತ ಶಂಕರನನ್ನು ಮುಂಬೈಯ ಕಳಿಸಿ ಪರಿಪೂರ್ಣ ತರಬೇತಿ ಕೊಡಿಸಿದ್ದಾರೆ. ತಮ್ಮ ಮಗನ ಚಿತ್ರಕ್ಕೆ ತಾವೇ ನಿರ್ದೇಶನ ಮಾಡುವ ಹೊಣೆಯನ್ನು ಕೂಡ ಹೊತ್ತಿದ್ದಾರೆ ಅಂತೆ. ಇನ್ನು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ರವಿಶಂಕರ್ ಅವರು ಸಜ್ಜಾಗಿದ್ದಾರೆ. ತಂದೆ ರವಿಶಂಕರ್ ಅವರಂತೆ ಅವರ ಮಗ ಅದ್ವೈತ್ ಕೂಡ ಚಿತ್ರರಂಗದಲ್ಲಿ ಉನ್ನತ ಯಶಸ್ಸನ್ನು ಪಡೆಯಲಿ ಎಂಬುದು ನಮ್ಮ ಆಸೆ. ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಆರ್ಮುಗ ಖ್ಯಾತಿಯ ರವಿಶಂಕರ್ ಅವರ ಮಗ ಅದ್ವೈತ್ ರವಿಶಂಕರ್ ರವರಿಗೆ ಶುಭಾಶಯಗಳನ್ನು ಕೋರಬಹುದು.

Comments are closed.