Neer Dose Karnataka
Take a fresh look at your lifestyle.

ಕೊನೆಗೂ ಫಿಕ್ಸ್ ಆಯಿತು ಕೆಜಿಎಫ್ ಎರಡನೇ ಭಾಗದ ರಿಲೀಸ್ ಡೇಟ್?? ಇಡೀ ಭಾರತದಲ್ಲಿ ರಿಲೀಸ್ ಆಗುವುದು ಯಾವಾಗ ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಕೆಜಿಎಫ್ ಎಂದರೆ ತಪ್ಪಾಗಲಾರದು. ಮೊದಲು ಕನ್ನಡ ಚಿತ್ರರಂಗದ ಎಂದರೆ ದಕ್ಷಿಣ ಭಾರತದ ಕೆಲ ಚಿತ್ರರಂಗಗಳ ಪ್ರೇಕ್ಷಕರು ಹಾಗೂ ಗಣ್ಯರಿಗೆ ಮಾತ್ರ ತಿಳಿದಿತ್ತು ಎಂಬುದು ನಿಮಗೆ ಗೊತ್ತಿದೆ. ಆದರೆ ಕೆಜಿಎಫ್ ಬಿಡುಗಡೆಯಾದ ನಂತರ ಕನ್ನಡ ಚಿತ್ರರಂಗದ ಗುಣಗಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ನಡೆಯುತ್ತಿದೆ.

ಇಲ್ಲಿ ಕೇವಲ ಕೆಜಿಎಫ್ ಚಿತ್ರದ ಯಶಸ್ಸಿನ ಶ್ರೇಯ ಒಬ್ಬ ವ್ಯಕ್ತಿಗೆ ಹೋದರೆ ಅದು ತಪ್ಪಾಗುತ್ತದೆ. ಹೊಂಬಾಳೆ ಫಿಲಂಸ್ ನ ನಿರ್ಮಾಪಕರಾದ ವಿಜಯ್ ಕಿರಗಂದೂರು ರವರ ಧೈರ್ಯ ನಿರ್ದೇಶಕ ಪ್ರಶಾಂತ್ ನೀಲ್ ರವರ ದೂರದೃಷ್ಟಿ ನೋಟ ಹಾಗೂ ಅವರ ಕಥೆ ಹೆಣೆಯುವ ವಿವಿಧ ಶೈಲಿಯ ಪರಿಣತಿ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ಕನ್ನಡ ಚಿತ್ರರಂಗವನ್ನು ದೇಶದ ತುತ್ತತುದಿಯಲ್ಲಿ ಆಗಸದಲ್ಲಿ ಹಾರಾಡುವಂತೆ ಮಾಡುವ ಮಹತ್ವಾಕಾಂಕ್ಷೆ ಈ ಚಿತ್ರದ ಯಶಸ್ಸಿಗೆ ಕಾರಣವಾಗಿದೆ. ಕೆಜಿಎಫ್ ಚಿತ್ರದ ಬಿಡುಗಡೆ ಕೂಡ ಹೇಳಿಕೊಳ್ಳುವಷ್ಟು ಸರಳವಾಗಿರಲಿಲ್ಲ.

ಬಾಲಿವುಡ್ ನ ಖ್ಯಾತ ನಟ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ಶಾರುಖಾನ್ ರವರ ಜೀರೋ ಚಿತ್ರದ ಎದುರಾಗಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1, ಬಾಕ್ಸಾಫೀಸಿನಲ್ಲಿ ಬಾಲಿವುಡ್ನಲ್ಲಿ ಜೀರೋ ಚಿತ್ರವನ್ನೇ ಹಿಂದಕ್ಕೆ ಯಶಸ್ಸಿನ ಮುಡಿಗೇರಿಸಿಕೊಂಡಿತು. ಇದರಿಂದ ಪ್ರಾರಂಭವಾದ ಕೆಜಿಎಫ್ ಚಾಪ್ಟರ್ 1 ನ ಯಶಸ್ಸಿನ ಓಟ, ಕೇವಲ ಬಾಲಿವುಡ್ಡಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಮಲಯಾಳಂ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಯಶಸ್ಸನ್ನು ಕಂಡುಕೊಂಡ ಚಿತ್ರವಾಗಿ ಕೆಜಿಎಫ್ ಚಾಪ್ಟರ್ 1 ತನ್ನ ಹೆಸರನ್ನು ಪಡೆದುಕೊಂಡಿದೆ. ಈಗ ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಪ್ರೇಕ್ಷಕರು ಕೂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರದ ನಿರೀಕ್ಷೆಯಲ್ಲಿ ಕಾತರರಾಗಿದ್ದಾರೆ.

ಚಿತ್ರತಂಡ ಈಗಾಗಲೇ ಜುಲೈ 16ಕ್ಕೆ ಬಿಡುಗಡೆಯಾಗುವ ಕುರಿತಂತೆ ಅಧಿಕೃತ ಘೋಷಣೆಯನ್ನು ಹೊರಡಿಸಿದ್ದರು ಆದರೆ ಈಗಿರುವ ನಿಯಮಗಳಿಂದಾಗಿ ಚಿತ್ರಮಂದಿರಗಳು 100% ಓಪನ್ ಆಗದಿದ್ದರೆ ಈ ದೊಡ್ಡ ಬಜೆಟ್ ನ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದು ಖಂಡಿತವಾಗಿಯೂ ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಕ್ರಮೇಣವಾಗಿ ಲಾಕ್ಡೌನ್ ನಿಯಮಗಳನ್ನು ಒಂದೊಂದಾಗಿ ಕಡಿತಗೊಳಿಸುತ್ತ ಬರುತ್ತಿದ್ದಾರೆ.

ಆದರೆ ಇಂದಿಗೂ ಕೂಡ ಚಿತ್ರಮಂದಿರಗಳನ್ನು ಯಾವಾಗ 100% ಪ್ರಾರಂಭ ಮಾಡುತ್ತಾರೆ ಎಂಬುದು ಇಂದಿಗೂ ಕೂಡ ತಿಳಿದುಬಂದಿಲ್ಲ. ಹಾಗಾಗಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕಾದು ಕುಳಿತಿರುವ ಸಿನಿಪ್ರೇಕ್ಷಕರಿಗೆ ಕೆಜಿಎಫ್ ಚಾಪ್ಟರ್ 2 ಯಾವಾಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬಹುದು ಎಂಬ ಹೊಸ ಬಿಡುಗಡೆ ದಿನಾಂಕ ಇಂದಿಗೂ ಕೂಡ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನಾಂಕ ಸಾಕಷ್ಟು ಸುದ್ದಿ ಮಾಡುತ್ತಿದೆ.

ಹೌದು ಸ್ನೇಹಿತರೆ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಪ್ರಶಾಂತ್ ನಿರ್ದೇಶನದಲ್ಲಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಖ್ಯಪಾತ್ರದ ನಟನೆಯಲ್ಲಿ ಮೂಡಿ ಬಂದಿರುವ ಚಿತ್ರ ಇದೇ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರ ವಿಮರ್ಶಕರು ಅಂದಾಜು ಹಾಕುತ್ತಿದ್ದಾರೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2 ಟೀಸರ್ ಜಾಗತಿಕವಾಗಿ ಹಲವಾರು ದಾಖಲೆಗಳನ್ನು ಮುರಿದಿದ್ದು ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೇಲೆ ಇರೋಬರೋ ಹಳೆ ಬಾಕ್ಸಾಫೀಸ್ ರೆಕಾರ್ಡ್ ಹೇಳ ಹೆಸರಿಲ್ಲದೆ ಕಾಣೆಯಾಗುವುದು ಗ್ಯಾರಂಟಿ. ನೀವು ಕೂಡ ಕೆಜಿಎಫ್ ಚಾಪ್ಟರ್ 2ಕ್ಕೆ ಕಾಯುತ್ತಿದ್ದರೆ, ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.

Comments are closed.