Neer Dose Karnataka
Take a fresh look at your lifestyle.

ಬಿಗ್ ಬಾಸ್ ಖ್ಯಾತ ಸ್ಪರ್ದಿ ಪ್ರಿಯಾಂಕಾ ರವರಿಗೆ ನಿಜ ಜೀವನದಲ್ಲಿ ಮದುವೆ ಆಗಿದ್ಯಾ?? ಇದೇನಿದು ಹೊಸ ಸುದ್ದಿ??

ನಮಸ್ಕಾರ ಸ್ನೇಹಿತರೇ, ಕನ್ನಡದ ನಟಿ ಬಿಗ್ ಬಾಸ್ ಮನೆಗೆ ಹೋದಮೇಲೆ ಫುಲ್ ಸದ್ದು ಮಾಡಲು ಆರಂಭಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಹೋದರೂ ಕೂಡ ದಿನೇ ದಿನೇ ಸದ್ದು ಮಾಡುವಲ್ಲಿ ಪ್ರಿಯಾಂಕಾ ತಿಮ್ಮೇಶ್ ರವರು ಯಶಸ್ವಿಯಾಗಿದ್ದಾರೆ. ಮೊದ ಮೊದಲಿಗೆ ಹೆಚ್ಚೇನೂ ಸಾದು ಮಾಡದೆ ಇದ್ದರೂ ಕೂಡ ದಿನೇ ದಿನೇ ನೇರ ಮಾತು ಹಾಗೂ ನೇರ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಅದರಲ್ಲಿ ಕೆಲವೊಂದು ವಿಚಾರದಲ್ಲಿ ಮನೆಯ ಮಂದಿ ಬಕೆಟ್ ಇಡಿಯುವ ಕೆಲವೊಂದು ಸ್ಪರ್ದಿಗಳಿಗೆ ನೇರವಾಗಿ ಪ್ರಶ್ನೆ ಹಾಕಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.

ಇಷ್ಟು ದಿವಸ ಕೆಲವೊಂದು ಸ್ಪರ್ದಿಗಳ ಜೊತೆ ಚೆನ್ನಾಗಿ ಇದ್ದರೇ ನಾವು ಸೇಫ್ ಅಂದುಕೊಂಡು ಲೆಕ್ಕಾಚಾರ ಹಾಕಿ ಬಕೆಟ್ ಹಿಡಿಯುತ್ತಿದ್ದ ಕೆಲವು ಸ್ಪರ್ದಿಗಳಿಗೆ ಪ್ರಿಯಾಂಕಾ ರವರು ಸರಿಯಾಗಿದೆ ಪ್ರಶ್ನೆ ಕೇಳಿ ಮಾತೆ ಹೊರಡದಂತೆ ಮಾಡಿದ್ದರು. ಈ ಟಾಸ್ಕ್ ನ ಬಳಿಕ ಪ್ರಿಯಾಂಕಾ ರವರನ್ನು ಎಲ್ಲರೂ ಮೆಚ್ಚಿಕೊಳ್ಳಲು ಆರಂಭ ಮಾಡಿದ್ದರು. ಆದರೆ ಅದ್ಯಾಕೋ ತಿಳಿದಿಲ್ಲ ಅದು ಅಷ್ಟಕ್ಕೇ ನಿಂತು ಹೋಯಿತು. ಇದೀಗ ಚಕ್ರವರ್ತಿ ರವರ ಜೊತೆ ಕೆಲವೊಂದು ವಿಚಾರಗಳಿಗೆ ಸದ್ದು ಮಾಡುತ್ತಿರುವ ಪ್ರಿಯಾಂಕಾ ರವರು ಎರಡನೇ ಇನ್ನಿಂಗ್ಸ್ ನಲ್ಲಿ ಕೂಡ ಮಿಂಚುತ್ತಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಪ್ರಿಯಾಂಕ್ ತಿಮ್ಮೇಶ್ ರವರ ಹೆಸರು ಶಮಂತ್ ರವರ ಜೊತೆ ಕೇಳಿ ಬರುವಂತೆ ಬಿಗ್ ಬಾಸ್ ಮನೆಯಲ್ಲಿ ಸನ್ನಿವೇಶಗಳು ಸೃಷ್ಟಿಯಾಗಿವೆ. ಚಕ್ರವರ್ತಿ ರವರು ಈ ಕುರಿತು ಪದೇ ಪದೇ ಹೇಳುತ್ತಿದ್ದು, ಆ ರೀತಿಯ ವಿಚಾರಗಳು ಯಾವುವು ಇಲ್ಲ ಎಂದು ಈಗಾಗಲೇ ಸ್ಪರ್ಸ್ಟ ಪಡಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಪ್ರಿಯಾಂಕಾ ತಿಮ್ಮೇಶ್ ರವರಿಗೆ ಮದುವೆಯಾಗಿದೆ ಎಂದು ಪೋಸ್ಟರ್ ಗಳನ್ನು ವಿಡಿಯೋ ಗಳನ್ನು ಹಾಕಿ ಹರಿದು ಬಿಡುತ್ತಿದ್ದಾರೆ. ಆದರೆ ಪ್ರಿಯಾಂಕಾ ತಿಮ್ಮೇಶ್ ರವರಿಗೆ ಮದುವೆಯಾಗಿಲ್ಲ ಎಂಬುದು ಸತ್ಯ. ಅಸಲಿಗೆ ಇಲ್ಲಿಯವರೆಗೂ ಇವರ ಬಾಯ್ ಫ್ರೆಂಡ್ ಇದ್ದಾರೆಯೇ ಇಲ್ಲವೋ ಎಂಬುದೇ ಯಾರಿಗೂ ತಿಳಿದಿಲ್ಲ. ಯಾರ ಹೆಸರಿನ ಜೊತೆಗೂ ಕೂಡ ಇವರ ಹೆಸರು ತಳುಕು ಹಾಕಿಕೊಂಡಿಲ್ಲ. ನೀವು ಒಂದು ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್ ಗಳನ್ನೂ ನೋಡಿದರೆ ದಯವಿಟ್ಟು ನಂಬಬೇಡಿ.

Comments are closed.