Neer Dose Karnataka
Take a fresh look at your lifestyle.

ಮದುವೆಯ ಬಗ್ಗೆ ಕೊನೆಗೂ ತುಟಿ ಬಿಚ್ಚಿದ ರಮ್ಯಾ, ಇನ್ಸ್ಟಾಗ್ರಾಮ್ ರಲ್ಲಿ ನೀಡಿದ ಉತ್ತರವೇನು ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ ವುಡ್ ಕ್ವೀನ್ ಅಂತನೇ ಖ್ಯಾತರಾಗಿರೋ ನಟಿ ರಮ್ಯಾ ಅವರಿಗೆ, ಅವರು ಚಿತ್ರರಂಗದಿದ ದೂರ ಉಳಿದರೂ ಕೂಡ ಅಭಿಮಾನಿಗಳಿಗೇನೂ ಕೊರತೆಯಿಲ್ಲ. ಅವರು ಯಾವಾಗ ಟಿ ವಿ ಪರದೆಯ ಮೇಲೆ ಬರುತ್ತಾರೋ ಎಂದು ಕಾಯುವವರೇ ಹೆಚ್ಚು. ಚಿತ್ರರಂಗವನ್ನು ಬಿಟ್ಟ ನಟಿ ರಮ್ಯಾ ರಾಜಕೀಯಕ್ಕೆ ಧುಮುಕಿದರು. ಆದರೆ ಸಿನಿಮಾದಷ್ಟು ರಾಜಕೀಯದಲ್ಲಿ ಯಶಸ್ಸು ಕಾಣದ ರಮ್ಯ ಒಂದಷ್ಟು ಸಮಯ ಎಲ್ಲಿದ್ದಾರೆ ಎಂಬುದೇ ಜನರಿಗೆ ಗೊತ್ತಾಗದ ಹಾಗೆ ಕಣ್ಮರೆಯಾಗಿದ್ದರು.

ಈಗಲೂ ಅವರಿರುವ ಸ್ಥಳ ಗೊತ್ತಾಗದೇ ಇದ್ದರೂ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪೋಸ್ಟ್ ಗಳನ್ನ್ ಹಾಕುವುದು ಅವರ ಬಗ್ಗೆ ಜನರಿಗೆ ಒಂದಿಷ್ಟು ಮಾಹಿತಿಯನ್ನು ನೀಡುತ್ತದೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲೂ ರಮ್ಯಾ ಕಾಣಿಸಿಕೊಂಡಿದ್ದು ಕಮ್ಮಿಯೇ. ಆದರೆ ಇನ್ಸ್ಟಾಗಾಮ್ ನಲ್ಲಿ ಲೈವ್ ಬರುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ತಾನು ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಬರುವುದಾಗಿ ರಮ್ಯಾ ಮೊದಲೇ ತಿಳಿಸಿದ್ದರು. ಇದಕ್ಕಾಗಿ ನೆಟ್ಟಿಗರು ಕಾಯ್ದು ಕುಳಿತಿದ್ದರು. ಆದರೆ ಇದು ಕ್ಯಾಜುವಲ್ ಮಾತುಕತೆಗಳಷ್ಟೇ ವಿಶೇಷವಾದದ್ದೇನು ಇಲ್ಲ ಎಂದು ನಟಿ ರಮ್ಯಾ ಪ್ರೇಕ್ಷಕರ ಆಸೆಗೆ ತುಸು ತಣ್ಣೀರೆರೆಚಿದ್ದರು!

ಇನ್ಸ್ಟಾ ಲೈವ್ ನಲ್ಲಿ ಬಂದ ರಮ್ಯಾ ಜನರು ಕೇಳಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇನ್ಸ್ಟಾದಲ್ಲಿ ಜನರು ಕೇಳಿರುವ ಪ್ರಶ್ನೆ ಹಾಗೂ ಅದಕ್ಕೆ ರಮ್ಯ ಅವರ ಉತ್ತರ ಹೀಗಿದೆ. “ರಮ್ಯಾಅವರೇ, ಮತ್ತೆ ಚಿತ್ರರಂಗಕ್ಕೆ ಯಾವಾಗ ಬರುತ್ತೀರಿ” ಎಂಬ ಪ್ರಶ್ನೆಗೆ ಸಧ್ಯಕ್ಕೆ ಇಲ್ಲ ಎಂಬ ಹಾರಿಕೆಯ ಉತ್ತರ ನೀಡಿದ್ದಾರೆ. “ನಿಮ್ಮ ಸೌಂದರ್ಯದ ಗುಟ್ಟೇನು?” ಎಂಬ ಇನ್ನೊಂದು ಪ್ರಶ್ನೆಗೆ “ನಾನೇನು ಅಷ್ಟು ಸುಂದರಿ ಎಂದುಕೊಂಡಿಲ್ಲ. ನಾನು ಎವರೇಜ್ ಗರ್ಲ್, ಶೂಟಿಂಗ್ ಇದ್ದಾಗ ಡಯಟ್, ವ್ಯಾಯಾಮ ಎಲ್ಲವನ್ನು ಮಾಡುತ್ತಿದ್ದೆ. ಈಗ ಅದ್ಯಾವುದು ರೆಗ್ಯೂಲರ್ ಆಗಿ ಮಾಡಿವುದಿಲ್ಲ. ಬೇಕಾದ್ದು ತಿನ್ನುತ್ತೇನೆ, ಸಮಯವಿದ್ದಾಗ ವ್ಯಾಯಾಮ ಮಾಡುತ್ತೇನೆ ಎಂದರು.

ರಮ್ಯಾ ಅವರ ಇಷ್ಟವಾದ ಆಹಾರಗಳೆಂದರೆ “ಕೇಕ್, ಮಶ್ರೂಮ್, ಜೋಳದ ರೊಟ್ಟಿ ಎಣ್ಣೆಗಾಯಿ, ಐಸ್ ಕ್ರೀಮ್ ಗಳಂತೆ. “ಯಾರದ್ದಾದರೂ ಮದುವೆಗೆ ಹೋಗಿ ಉಡುಗೊರೆ ಕೊಟ್ಟಿದ್ದೀರಾ”? ಎಂದು ಕೇಳಿದ ಪ್ರಶ್ನೆಗೆ “ನಾನು ಯಾರ ಮದುವೆಗೂ ಹೋಗಲ್ಲ, ಹಾಗಾಗಿ ನನ್ನ ಮದುವೆಗೆ ಯಾರೂ ಬರೋದಿಲ್ಲ ನೋಡು ಅಂತ ಅಮ್ಮ ಯಾವತ್ತು ಹೇಳುತ್ತಿರುತ್ತಾರೆ” ಎಂದು ರಮ್ಯ ತಮಾಷೆಯ ಉತ್ತರ ನೀಡಿದರು. ಇನ್ನು ನಟಿ ರಮ್ಯ ಅವರಿಗೆ ಬೆಂಗಳೂರಿನಲ್ಲಿ ಇಷ್ಟವಾದ ಸ್ಥಳ ಬಸವನಗುಡಿ, ಗಾಂಧಿನಗರವಾದರೆ, ಇಷ್ಟವಾದ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರಂತೆ. ಹೀಗೆ ಚಿಕ್ಕದಾಗಿ ಚೊಕ್ಕದಾಗಿ ಮಾತನಾಡಿರುವ ರಮ್ಯ ಮತ್ತೆ ಚಿತ್ರರಂಗಕ್ಕೆ ಬರುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ಧಿ ಕೊಡುತ್ತಾರಾ ಎಂಬುದೇ ಯಕ್ಷಪ್ರಶ್ನೆ!

Leave A Reply

Your email address will not be published.