ಚಕ್ರವರ್ತಿ ರವರಿಗೆ ಬಿಗ್ ಶಾಕ್, ಪ್ರಿಯಾಂಕಾ ರವರಿಗೆ ಮದ್ಯದ ಬೆರಳು ತೋರಿಸಿದ್ದಕ್ಕಾಗಿ ಸಿಕ್ಕ ಪ್ರತಿಫಲ ಏನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿಯವರ ವರ್ತನೆ ಎಲ್ಲರಿಗೂ ಬೇಸರ ತರಿಸಿದೆ. ಅವರು ಅನಗತ್ಯವಾಗಿ ವಾದ ಮಾಡುವುದು, ಒಂದು ವಿಷಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಚರ್ಚೆ ಮಾಡುವುದು ಬಿಗ್ ಬಾಸ್ ಸ್ಪರ್ಧಿಗಳಿಗೆ ಮಾತ್ರವಲ್ಲದೆ, ಬಿಗ್ ಬಾಸ್ ವೀಕ್ಷಕರಿಗೂ ಕೂಡ ನೋವನ್ನುಂಟು ಮಾಡಿದೆ. ಇನ್ನು ಈ ವಾರಾಂತ್ಯದಲ್ಲಿ ಚಕ್ರವರ್ತಿ ಯವರನ್ನು ಮನೆಯಿಂದ ಹೊರ ಹಾಕುವಂತೆ ಜನರು ಆಗ್ರಹಿಸುತ್ತಿದ್ದಾರೆ. ಚಕ್ರವರ್ತಿ ಹಾಗೂ ಪ್ರಿಯಾಂಕ ತಿಮ್ಮೇಶ್ ಅವರ ಜಗಳದ ಬಗ್ಗೆ ನಿಮಗೆಲ್ಲ ಗೊತ್ತಿದ್ದದ್ದೆ. ಪ್ರಿಯಾಂಕ ಅವರನ್ನು ಫೇಕ್, ಮೋಸ ಎಂದೆಲ್ಲ ಚಕ್ರವರ್ತಿಯವರು ಕರೆದಿದ್ದು ಪ್ರಿಯಾಂಕ ಇದನ್ನ ವಿರೋಧಿಸಿದ್ದರು.

ವಾರಾಂತ್ಯದ ಕಿಚ್ಚ ಸುದೀಪ್ ಅವರ ಪಂಚಾಯ್ತಿಯಲ್ಲಿಯೂ ಕೂಡ ಇವರಿಬ್ಬರ ನಡುವಿನ ಗೊಂದಲಕ್ಕೆ ತೆರೆ ಬಿದ್ದಿರಲಿಲ್ಲ. ಚಕ್ರವರ್ತಿ ಒಂದು ಹೆಣ್ಣುಮಗುವಿನ ಬಳಿ ಹೀಗೆ ಜಗಳಾಡುವುದು ಸರಿ ಅಲ್ಲ ಅಂತ ಸಾಕಷ್ಟು ಜನರು ಸಿಟ್ಟಾಗಿದ್ದರು. ಈ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರಹೋಗಿದ್ದಾರೆ. ಅವರು ಹೋಗುವಾಗ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳಿಗೆ ನೀಡುವಂತೆ ವಿಶೇಷ ಅಧಿಕಾರವನ್ನು ಪ್ರಿಯಾಂಕ ಅವರಿಗೆ ನೀಡಿದ್ದರು. ಅದೇನೆಂದರೆ ಮುಂದಿನವಾರಕ್ಕೆ ನೇರ ನಮಿನೇಷನ್ ಗೆ ಒಬ್ಬರ ಹೆಸರನ್ನು ಸೂಚಿಸಬೇಕು. ಪ್ರಿಯಾಂಕಾ ಒಂದು ಕ್ಷಣವೂ ಯೋಚಿಸದೆ ಚಕ್ರವರ್ತಿ ಅವರ ಹೆಸರನ್ನು ಸೂಚಿಸಿದರು.

ಇದರಿಂದ ಸಿಟ್ಟಾದ ಚಕ್ರವರ್ತಿಯವರು ತಮ್ಮ ಬೆರಳನ್ನು ತೋರಿಸಿದರು. ಮತ್ತೆ ಮತ್ತೆ ಈ ರೀತಿ ಮಾಡಿದ್ದು ಒಂದು ಅಸಹ್ಯ ವರ್ತನೆಯಾಗಿದೆ. ಇದರಿಂದಾಗಿ ಕನ್ನಡ ಜನತೆ ಚಕ್ರವರ್ತಿಯವರನ್ನು ಮನೆಯಿಂದ ಹೊರಹಾಕುವಂತೆ ಕಮೆಂಟ್ ಮಾಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಪರಮೇಶ್ವರ್ ಗುಂಡ್ಕಲ್ ಅವರನ್ನ ಟ್ಯಾಗ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಬಿಗ್ ಬಾಸ್ ತಂಡ ಇದಕ್ಕೆ ಹೇಗೆ ಪ್ರತಿಕ್ರಿಯಿಸುವುದೋ ಕಾದುನೋಡಬೇಕು. ಈ ಮೂಲಕ ಈ ವಾರ ಚಕ್ರವರ್ತಿ ರವರು ಮನೆಯಿಂದ ಹೊರ ಬರುವುದು ಖಚಿತವಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Leave a Reply

Your email address will not be published. Required fields are marked *