ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯದಲ್ಲಿ ನೀವು ಗಮನಿಸಿದ ಐದು ಅಂಶಗಳು ಯಾವ್ಯಾವು ಗೊತ್ತೇ??

Sports

ನಮಸ್ಕಾರ ಸ್ನೇಹಿತರೇ ನಿನ್ನೆ ನಡೆದ ಭಾರತ-ಶ್ರೀಲಂಕಾ ಪಂದ್ಯ ಐದು ಹೊಸ ದಾಖಲೆಗೆ ಸಾಕ್ಷಿಯಾಯಿತು. ಸಂಪೂರ್ಣ ಹೊಸಬರೇ ತುಂಬಿದ್ದ ತಂಡ ಭರ್ಜರಿ ಜಯಗಳಿಸುವ ಮೂಲಕ ಭಾರತದ ಬೆಂಚ್ ಸ್ಟ್ರೆಂತ್ ಸಹ ಉತ್ತಮವಾಗಿದೆ ಅನ್ನುವುದನ್ನ ಸಾಕ್ಷೀಕರಿಸಿತು. ಬನ್ನಿ ನಿನ್ನೆಯ ಪಂದ್ಯದಲ್ಲಿ ಉಂಟಾದ ಟಾಪ್ – 5 ದಾಖಲೆಗಳು ಯಾವುವು ಎಂಬುದನ್ನ ತಿಳಿಯೋಣ.

ಟಾಪ್ – 5 : ಹತ್ತು ಸಾವಿರ ರನ್ ಪೂರೈಸಿದ ಶಿಖರ್ ಧವನ್ – ನಾಯಕನ ಆಟವಾಡಿದ ಶಿಖರ್ ಧವನ್ 86 ರನ್ ಗಳಿಸಿದರು. ಈ ಮೂಲಕ ಹತ್ತು ಸಾವಿರ್ ರನ್ ಪೂರೈಸಿದ ಆಟಗಾರನ ಸಾಲಿಗೆ ಸೇರಿದರು. ಇವರು ಅಂತರಾಷ್ಟ್ರೀಯ ಕ್ರಿಕೇಟ್ ನಲ್ಲಿ ಹತ್ತು ಸಾವಿರ ರನ್ ಪೂರೈಸಿದ ಆಟಗಾರರಾಗಿದ್ದಾರೆ. ಜೊತೆಗೆ ಶ್ರೀಲಂಕಾ ತಂಡದ ವಿರುದ್ದ ಸಾವಿರ ರನ್ ಪೂರೈಸಿದ ಬ್ಯಾಟ್ಸಮನ್ ಎಂಬ ಕೀರ್ತಿಗೆ ಒಳಗಾದರು.

ಟಾಪ್ 4 – ಏಕದಿನ ಪದಾರ್ಪಣೆಯ ಪಂದ್ಯದಲ್ಲೇ ಇಶಾನ್ ಕಿಶನ್ ಅರ್ಧ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿದರು. ಟಿ20 ಕ್ರಿಕೇಟ್ ನಲ್ಲೂ ಸಹ ಪದಾರ್ಪಣೆಯ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದರು. ತಾವೆದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟುವ ಮೂಲಕ ಸಹ ಹೊಸ ದಾಖಲೆ ನಿರ್ಮಿಸಿದರು.

ಟಾಪ್ 3 – ಚೊಚ್ಚಲ ಬಾರಿಗೆ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ ಅತಿ ಹಿರಿಯ ಆಟಗಾರ ಎಂಬ ದಾಖಲೆಯ ಸಾಧನೆ ಶಿಖರ್ ಧವನ್ ಮಾಡಿದ್ದಾರೆ. ಧವನ್ 35 ವರ್ಷ 225 ದಿನಗಳಲ್ಲಿ ಮೊದಲ ಬಾರಿಗೆ ಭಾರತದ ನಾಯಕರಾದರು. ಇದಕ್ಕೂ ಮುನ್ನ ಈ ಸಾಧನೆ ಮೊಹಿಂದರ್ ಅಮರನಾಥ್ ಅವರ ಹೆಸರಲ್ಲಿತ್ತು. ಇವರು 34 ವರ್ಷ 37 ದಿನಗಳಲ್ಲಿ ನಾಯಕನಾಗಿ ಆಯ್ಕೆಯಾಗಿದ್ದರು.

ಟಾಪ್ 2 – ಶ್ರೀಲಂಕಾ ತಂಡ ಬೃಹತ್ ಎಂಬಂತ 262 ರನ್ ಗಳಿಸಿದರೂ ಒಬ್ಬನೇ ಒಬ್ಬ ಬ್ಯಾಟ್ಸಮನ್ ಅರ್ಧ ಶತಕ ದಾಖಲಿಸಲಿಲ್ಲ. ಇನ್ನು ಒಂದೇ ಒಂದು ಅರ್ಧಶತಕದ ಜೊತೆಯಾಟ ನಡೆಯಲಿಲ್ಲ. ಈ ಹಿಂದೆ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಅದನ್ನ ಲಂಕಾ ತಂಡ ನಿನ್ನೆ ಅಳಿಸಿ ಹಾಕಿತು.

ಟಾಪ್ 1 – ನಿನ್ನೆ ಇಶಾನ್ ಕಿಶನ್ ರವರ 23 ನೇ ಜನ್ಮದಿನ. ಜನ್ಮದಿನದಂದೇ ಪದಾರ್ಪಣೆ ಮಾಡಿ, ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ ಗಟ್ಟಿ, ಮೊದಲ ಪಂದ್ಯದಲ್ಲೇ ಅರ್ಧಶತಕ ಭಾರಿಸಿದ ಆಟಗಾರ ಎಂಬ ದಾಖಲೆ ಇಶಾನ್ ಕಿಶನ್ ಹೆಸರಿಗೆ ಬಂದಿದೆ.

ಇವಿಷ್ಟು ನಿನ್ನೆಯ ಪಂದ್ಯದಲ್ಲಿ ಉಂಟಾದ ಟಾಪ್ 5 ದಾಖಲೆಗಳು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ತಿಳಿಸಿ.

Leave a Reply

Your email address will not be published. Required fields are marked *