ಪ್ರಿಯಾಂಕ ಚೋಪ್ರಾ ರವರ ಜನ್ಮದಿನಕ್ಕೆ ಅವರ ಪತಿ ಕೊಟ್ಟಂತಹ ದುಬಾರಿ ಬೆಲೆಯ ಗಿಫ್ಟ್ ಏನು ಗೊತ್ತಾ?? ಬೆಲೆ ಎಷ್ಟು ಗೊತ್ತೇ???

Entertainment

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಯ ಮೂಲಕ ಬಾಲಿವುಡ್ ಚಿತ್ರರಂಗವನ್ನೇ ಮೀರಿ ಹಾಲಿವುಡ್ ಗೆ ಹಾರಿರುವ ಕೆಲವೇ ನಟಿಯರಲ್ಲಿ ಅಗ್ರಗಣ್ಯರು ಕಾಣಿಸಿಕೊಳ್ಳುವುದು ನಮ್ಮ ಬಾಲಿವುಡ್ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ. ಹೌದು ಸ್ನೇಹಿತರೆ ಪ್ರಿಯಾಂಕ ಚೋಪ್ರಾ ಅವರು ಮೊದಲಿಗೆ ಕ್ವಾಂಟಿಕೋ ಡಿ ಸೀರಿಸ್ ನಲ್ಲಿ ನಟಿಸುವ ಮೂಲಕ ಹಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಆನಂತರ ಹಾಲಿವುಡ್ ಚಿತ್ರರಂಗದ ಸಂಪೂರ್ಣ ಪರಿಚಯ ನಟಿ ಪ್ರಿಯಾಂಕ ಚೋಪ್ರಾ ಅವರಿಗೆ ಆಗಿತ್ತು. ನಂತರ ಪ್ರಪಂಚದಾದ್ಯಂತ ದ ರಾಕ್ ಎಂದೇ ಖ್ಯಾತರಾಗಿರುವ ವಿಶ್ವ ವಿಖ್ಯಾತ ನಟ ಡ್ವೇಯ್ನ್ ಜಾನ್ಸನ್ ರವರೊಂದಿಗೆ ಬೇವಾಚ್ ಎಂಬ ಹಾಲಿವುಡ್ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದರು. ಇದಾದ ಕೆಲವೇ ವರ್ಷಗಳಲ್ಲಿ ಅಮೇರಿಕಾದ ಗಾಯಕ ಹಾಗೂ ನಟರಾಗಿರುವ ನಿಕ್ ಜೋನಸ್ ರವರನ್ನು ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾದರು.

ವಯಸ್ಸಿನಲ್ಲಿ ಪ್ರಿಯಾಂಕಾ ಚೋಪ್ರಾ ರವರು ನಿಕ್ ಜೋನಸ್ ಗಿಂತ ಹತ್ತು ವರ್ಷ ದೊಡ್ಡವರಾಗಿದ್ದರು ಸಹ ಇವರ ಪ್ರೀತಿಗೆ ಇವರ ವಯಸ್ಸು ಅಡ್ಡಿಯಾಗಿಲ್ಲ. ನೆನ್ನೆಯಷ್ಟೇ ಪ್ರಿಯಾಂಕ ಚೋಪ್ರಾ ಅವರು 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಚಿತ್ರೀಕರಣದ ನಿಮಿತ್ತವಾಗಿ ಪ್ರಿಯಾಂಕ ರವರು ಲಂಡನ್ನಲ್ಲಿ ಬ್ಯುಸಿಯಾಗಿದ್ದರು. ಈ ಕಾರಣಕ್ಕೆ ತಮ್ಮ ಪತ್ನಿಯಾದ ಪ್ರಿಯಾಂಕಾ ಚೋಪ್ರಾ ಅವರವರಿಗೆ ನಿಕ್ ಜೋನಸ್ ರವರು ಅತ್ಯಂತ ದುಬಾರಿ ಬೆಲೆ ಉಳ್ಳ ವೈನ್ ಅನ್ನು ಗಿಫ್ಟ್ ಮಾಡಿದ್ದಾರೆ. ಹೌದು ಸ್ನೇಹಿತರೆ ಈ ವೈನ್ ನ ಹೆಸರು ಚಾಟ್ಯೂ ಮೌಟನ್ ರೋಥ್ ಚಿಲ್ಡ್ 1982 ಎಂದು. ಇದರ ಬೆಲೆ ಬರೋಬ್ಬರಿ 10 ರಿಂದ 13 ಲಕ್ಷ ರೂಪಾಯಿ. ಇದರೊಂದಿಗೆ ಭಾವನಾತ್ಮಕವಾಗಿ ತಮ್ಮ ಪತ್ನಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಕೂಡ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *