Neer Dose Karnataka
Take a fresh look at your lifestyle.

ಕಿಚ್ಚ ಸುದೀಪ್ ರವರ ಮೊದಲ ಲವ್ ಯಾರು ಗೊತ್ತೇ?? ಕನ್ನಡ ನಂಬರ್ 1 ನಟಿಯ ಮೇಲೆ ಸುದೀಪ್ ರವರಿಗೆ ಲವ್ ಆಗಿತ್ತಂತೆ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ, ಮೇರು ನಟರಿಂದ ಹಿಡಿದು ಸಾಕಷ್ಟು ಯುವ ನಟ ನಟಿಯರನ್ನು ಹೊಂದಿರುವ ಶ್ರೀಮಂತ ಕ್ಷೇತ್ರ. ಈ ಕ್ಷೇತ್ರದಲ್ಲಿ ಸೋತವರು ಕೆಲವರಾದರೆ ಗೆದ್ದವರು ಹಲವರು. ಹಾಗೆಯೇ ಕನ್ನಡದ ನಟನೆಯ ಕಂಪನ್ನು ಇತರ ಭಾಷೆಗೂ ಹಬ್ಬಿಸಿದವರಿದ್ದಾರೆ. ಅದರ ಹೆಚ್ಚಿನ ಕ್ರೆಡಿಟ್ ನಟ ಕಿಚ್ಚ ಸುದೀಪ್ ಅವರಿಗೆ ಸಲ್ಲುತ್ತದೆ. ಕನ್ನಡ ನೆಲದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡವರು ಸುದೀಪ್. ತಮ್ಮ ಮೊದಲ ಚಿತ್ರದಿಂದ ಇವತ್ತಿನವರೆಗೆ ಸುದೀಪ್ ಅವರು ಸಾಕಷ್ಟು ಬೆಳೆದಿದ್ದಾರೆ, ಗುರುತಿಸಿಕೊಂಡಿದ್ದಾರೆ.

ಸುದೀಪ್ ಅವರ ಸ್ಟೈಲ್ ಗೆ ಫಿದಾ ಆಗದೇ ಇರೋರೆ ಇಲ್ಲ. ವಿದೇಶಗಳಲ್ಲಿಯೂ ಕೂಡ ಅಭಿಮಾನಿಗಳನ್ನು ಗಳಿಸಿಕೊಂಡ ಕೆಲವೇ ಕೆಲವು ನಟರಲ್ಲಿ ಕಿಚ್ಚ ಕೂಡ ಒಬ್ಬರು. ಹೀಗೆ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಂಡಿರುವ ಅಂತಹ ಸುದೀಪ್ ರವರ ಹಲವಾರು ವಿಚಾರಗಳ ಕುರಿತು ಯಾರಿಗೂ ತಿಳಿದಿಲ್ಲ. ಇನ್ನು ಕಿಚ್ಚ ಸುದೀಪ್ ರವರಿಗೆ ಸಾಕಷ್ಟು ಅಭಿಮಾನಿಗಳು ಇರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ ಆದರೆ ಹೆಣ್ಣುಮಕ್ಕಳು ಇವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಸುದೀಪ್ ರವರ ಮನ ಕದ್ದಿರುವ ಕನ್ನಡದ ಆಗಲೂ ಈಗಲೂ ಹಾಗೂ ಎಂದೆಂದಿಗೂ ಕೂಡ ಟಾಪ್ ನಟಿಯಾಗಿ ಕಾಣಿಸಿಕೊಳ್ಳುವ ಚೆಲುವೆ ಯಾರು ಗೊತ್ತಾ ಬನ್ನಿ ಈ ಕುರಿತು ಇಂದು ನಿಮಗೆ ಮಾಹಿತಿ ನೀಡುತ್ತೇವೆ.

ಶಿವಣ್ಣ ನಡೆಸಿಕೊಟ್ಟ ನಂಬರ್ ಒನ್ ಯಾರಿ ಕಾರ್ಯಕ್ರಮದಲ್ಲಿ ತಮ್ಮ ಕ್ರಶ್ ಬಗ್ಗೆ ಹೇಳಿ ಕೊಂಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಾಯಕಿಯಾದ ನಟಿ ಮಾಲಾಶ್ರೀ, ಸುದೀಪ್ ಅವರ ಮೊದಲ ಲವ್ ಅಂತೆ. ಹೌದು ಸ್ನೇಹಿತರೇ ಈ ಕುರಿತು ಶಿವರಾಜ್ ಕುಮಾರ್ ರವರು ಸುದೀಪ್ ರವರನ್ನು ಪ್ರಶ್ನೆ ಮಾಡಿದಾಗ ನಿಮ್ಮ ಮೊದಲ ಪ್ರೀತಿ ಎಲ್ಲಾಯಿತು ಎಂದರೆ ಕಿಚ್ಚ ಸುದೀಪ್ ರವರು ನಾಚುತ್ತಾ, ಚಿತ್ರರಂಗದಲ್ಲಿ ನನಗೆ ಮೊದಲು ಪ್ರೀತಿಯಾಗಿದ್ದು ನಟಿ ಮಾಲಾಶ್ರೀ ಅವರ ಮೇಲೆ, ಅವರ ಚಿತ್ರಗಳೆಂದರೆ ನನಗೆ ಅಚ್ಚುಮೆಚ್ಚು ಎಂದು ಹೇಳಿದ್ದಾರೆ. ಹೀಗೆ ಕನಸಿನ ರಾಣಿ ಎಂದು ಖ್ಯಾತಿ ಪಡೆದುಕೊಂಡಿರುವ ಮಾಲಾಶ್ರೀ ರವರು ಸುದೀಪ್ ರವರ ಕನಸಿನರಾಣಿ ಕೂಡ ಆಗಿದ್ದಾರೆ.

Comments are closed.