ಜೂನಿಯರ್ ಚಿರು ಜನಿಸಿದ 9 ತಿಂಗಳ ಬಳಿಕ ಗುಡ್ ನ್ಯೂಸ್ ಕೊಟ್ಟ ಮೇಘನಾ ರಾಜ್ ಸರ್ಜಾ – ಗುಡ್ ನ್ಯೂಸ್ ಏನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಚಂದನವನದ ಸುಂದರ ನಟಿ ಮೇಘನಾ ರಾಜ್ ಸರ್ಜಾ ಬದುಕೇ ಒಂದು ರೀತಿಯ ಬೆಂಕಿಯಲ್ಲಿ ಅರಳಿದ ಹೂವಿನ ಥರ. ಚಿಕ್ಕ ವಯಸ್ಸಿನಲ್ಲಿಯೇ, ಯಾವ ಹೆಣ್ಣು ಮಕ್ಕಳು ಸಹ ಅನುಭವಿಸಬಾರದಂತಹ ಕಷ್ಟಗಳ ಸರಮಾಲೆಗಳನ್ನೆ ಎದುರಿಸಿದರು. ಪ್ರೀತಿಸಿ ಮದುವೆಯಾಗಿದ್ದ ಪತಿ ನಟ ಚಿರಂಜೀವಿ ಸರ್ಜಾರ ಅಕಾಲಿಕ ಅಗಲಿಕೆ ಅವರ ಬದುಕನ್ನ ಕತ್ತಲಿಗೆ ಮುಳುಗಿಸಿತ್ತು. ಆದರೇ ಪುನಃ ಅವರ ಬದುಕಿನಲ್ಲಿ ಸುರ್ಯೋದಯವಾಗಿದ್ದು ಮಾತ್ರ ಜೂನಿಯರ್ ಚಿರು ಜನಿಸಿದ ಬಳಿಕ. ಈ ಮಧ್ಯೆ ಜೂನಿಯರ್ ಚಿರು ಜನಿಸಿದ ಒಂಬತ್ತು ತಿಂಗಳ ಬಳಿಕ ನಟಿ ಮೇಘನಾ ರಾಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಬನ್ನಿ ಆ ನ್ಯೂಸ್ ಯಾವುದು ಎಂದು ತಿಳಿಯೋಣ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲಿಯೂ ಸಹ ಬಿಡುವಿಲ್ಲದೇ ಒಂದರ ಹಿಂದೆ ಒಂದಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದ ನಟಿ ಮೇಘನಾ ರಾಜ್‌. ನಟ ಚಿರಂಜೀವಿ ಸರ್ಜಾ ಜೊತೆ ಸಪ್ತಪದಿ ತುಳಿದ ಬಳಿಕವೂ ಸಹ ಸಿನಿಮಾಗಳಲ್ಲಿ ನಟಿಸುತ್ತಿದ್ದ ಮೇಘನಾ, ಗರ್ಭಿಣಿಯಾದ ನಂತರ ಸಿನಿಮಾಗಳನ್ನ ಒಪ್ಪಿಕೊಳ್ಳುವುದನ್ನ ಕಡಿಮೆ ಮಾಡಿದರು. ಈ ನಡುವೆ ತಾಯ್ತನ, ಹಾಗೂ ಚಿರಂಜೀವಿ ಅಗಲಿದ ಕಾರಣಕ್ಕೆ ಇನ್ಮುಂದೆ ಮೇಘನಾ ಬಣ್ಣ ಹಚ್ಚುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೇ ಸದ್ಯ ಆ ಊಹಾಪೋಹಗಳೆಲ್ಲವೂ ಸುಳ್ಳಾಗಿವೆ.

ಜೂನಿಯರ್ ಚಿರುಗೆ ಮೊನ್ನೆಯಷ್ಟೇ 9 ತಿಂಗಳು ತುಂಬಿವೆ. ಒಂದು ವರ್ಷದ ಬಳಿಕ ನಾನು ಕ್ಯಾಮೆರಾ ಎದುರಿಸುವ ಮೂಲಕ ಈ ಕ್ಷಣವನ್ನು ನಾನು ಸೆಲೆಬ್ರೇಟ್ ಮಾಡುತ್ತಿದ್ದೇನೆ ಎಂದು ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಯಾವುದೋ ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಡೈಲಾಗ್ ಓದುತ್ತಿರುವ ಫೋಟೋವೊಂದನ್ನ ಅಪಲೋಡ್ ಮಾಡಿದ್ದಾರೆ. ಇದಕ್ಕೆ ಮೇಘನಾ ರಾಜ್ ಅಭಿಮಾನಿಗಳು ಭರಪೂರ ಸಂತೋಶ ವ್ಯಕ್ತಪಡಿಸಿದ್ದು, ಯಾವ ಸಿನಿಮಾ ಅದು, ಅದರಲ್ಲಿ ನಿಮ್ಮ ಪಾತ್ರವೇನು ಎಂಬಿತ್ಯಾದಿ ತರೇಹವಾರಿ ಪ್ರಶ್ನೆಗಳನ್ನ ಕೇಳಿದ್ದಾರೆ.

ಕೆಲವು ಮೂಲಗಳ ಪ್ರಕಾರ ಇದು ಸಿನಿಮಾ ಅಥವಾ ಧಾರವಾಹಿಯ ಶೂಟಿಂಗ್ ಸೆಟ್ ಅಲ್ಲ. ಬಹುಷಃ ಮೇಘನಾ ಯಾವುದೋ ಬ್ರಾಂಡ್ ಜೊತೆ ಒಪ್ಪಂದ ಮಾಡಿಕೊಂಡಿರಬೇಕು. ಹಾಗಾಗಿ ಆ ಬ್ರಾಂಡ್ ನ ಜಾಹೀರಾತು ಚಿತ್ರೀಕರಣದಲ್ಲಿ ಭಾಗವಹಿಸಿರಬಹುದು ಎಂಬ ಅನುಮಾನಗಳನ್ನು ಸಹ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಮೇಘನಾ ರಾಜ್ ರ ಕೆಟ್ಟ ದಿನಗಳೆಲ್ಲಾ ಶಾಶ್ವತವಾಗಿ ಮುಗಿದು ಹೋಗಿ ಮತ್ತೇ ಅವರ ನಗು ಮೊಗ, ಸಿಹಿ ನಟನೆಯನ್ನ ಕರ್ನಾಟಕ ಜನತೆ ತುಂಬಿಕೊಳ್ಳಲಿ ಎಂಬುದೇ ಹಲವು ಅಭಿಮಾನಿಗಳ ಫುಲ್ ಟೈಂ ಪ್ರಾರ್ಥನೆಯಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *