Neer Dose Karnataka
Take a fresh look at your lifestyle.

ಬಿಗ್ ಬಾಸ್ ನಲ್ಲಿರುವ ದಿವ್ಯ ಸುರೇಶ ನಿಜಕ್ಕೂ ಯಾರು ಗೊತ್ತೇ?? ಖುದ್ದು ಮಾತನಾಡಿ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗ ಬಿಗ್ ಬಾಸ್ ಕಿರುತೆರೆಯಲ್ಲಿ ಸಾಕಷ್ಟು ರಂಗೇರಿದ ಕಾರ್ಯಕ್ರಮವಾಗಿ ರೂಪಗೊಂಡಿದೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ನಿರೀಕ್ಷೆಗೂ ಮೀರಿ ಪ್ರೇಕ್ಷಕರಿಗೆ ಮನರಂಜನೆ ಮಹಾಪೂರವನ್ನೇ ಒದಗಿಸುತ್ತಿದೆ. ಮನೆಯಲ್ಲಿರುವ ಪ್ರತಿಯೊಬ್ಬ ಸ್ಪರ್ಧೆಯೂ ಕೂಡ ವೈಯಕ್ತಿಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಒಂದು ಕಡೆ ಪ್ರಶಾಂತ್ ನಂಬರ್ಗೆ ಹಾಗೂ ಚಕ್ರವರ್ತಿ ಚಂದ್ರಚೂಡ್ ಅವರು ತಮ್ಮ ಮಾತಿನ ವೈಖರಿಯಿಂದ ಅಭಿಮಾನಿಗಳನ್ನು ಪಡೆದುಕೊಂಡರು. ಇನ್ನು ಅರವಿಂದ ಕೆಪಿ ಹಾಗೂ ದಿವ್ಯ ಉರುಡುಗ ಪ್ರೇಮ ಪಕ್ಷಿಗಳಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನು ಇತ್ತ ಶುಭಪುಂಜ ತಮ್ಮ ಪ್ರಬುದ್ಧ ನಡವಳಿಕೆಯಿಂದಾಗಿ ಪ್ರೇಕ್ಷಕರ ಮನಸ್ಸಲ್ಲಿ ವಿಶೇಷ ಅಭಿಮಾನ ಮೂಡುವಂತೆ ಮಾಡಿದ್ದಾರೆ. ಇನ್ನು ಇತ್ತ ಆ ದಿವ್ಯ ಸುರೇಶ್ ಅವರು ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇನ್ನು ದಿವ್ಯ ಸುರೇಶ್ ರವರ ಕುರಿತಂತೆ ಕೆಲ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ.

ಹೌದು ಸ್ನೇಹಿತರೆ ದಿವ್ಯ ಸುರೇಶ ಹಾಗೂ ಜೋಶ್ ಚಿತ್ರದ ಖ್ಯಾತಿಯ ನಟ ರಾಕೇಶ್ ಅಡಿಗರವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ನಟ ರಾಕೇಶ್ ಅಡಿಗ ಹೌದು ನಾವು ಈ ಹಿಂದೆ 3-4 ವರ್ಷ ಜೊತೆಗೆ ಒಟ್ಟಿಗೆ ಇದ್ದೆವು. ಈಗ ನಾವು ಜೊತೆಯಾಗಿ ಇಲ್ಲ, ಆದರೆ ಈಗ ದಿವ್ಯ ರವರಿಗೆ ಒಂದು ದೊಡ್ಡ ವೇದಿಕೆ ಸಿಕ್ಕಿದೆ ಅವಳು ಅವಳದ್ದೇ ದಾರಿಯಲ್ಲಿ ಸಾಧನೆ ಮಾಡ್ತಾ ಇದ್ದಾಳೆ. ಈ ಕುರಿತಂತೆ ಇನ್ನಷ್ಟು ಸುದ್ದಿ ಪ್ರಚಾರ ಮಾಡಿ ಅದರಿಂದ ದಿವ್ಯಾ ಸುರೇಶ್ ಅವರಿಗೆ ಬೇಸರವಾಗುವ ಮಾಡುವುದು ಒಳ್ಳೆಯದಲ್ಲ ಇದನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ಹೇಳಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.