Neer Dose Karnataka
Take a fresh look at your lifestyle.

ಯಾರು ಎಂದು ತಿಳಿಯದೇ ಇದ್ದರೂ ಜಯಂತಿ ಅಮ್ಮನವರ ಮನೆಗೆ ಹೋದಾಗ ಪದ್ಮಜಾ ರಾವ್ ರವರ ಮಾತಿಗೆ ಜಯಂತಿ ರವರು ಏನು ಮಾಡಿದ್ದರು ಗೊತ್ತಾ??

0

ನಮಸ್ಕಾರ ಸ್ನೇಹಿತರೇ ಅಭಿನಯ ಶಾರದೆ, ಬಹುಭಾಷಾ ತಾರೆ, ಕನ್ನಡದ ಅತ್ಯಂತ ಉತ್ತಮ ನಟಿ ಜಯಂತಿ ನಮ್ಮನ್ನ ಅಗಲಿದ್ದಾರೆ. ಜಯಂತಿಅಮ್ಮನನ್ನ ಕಳೆದುಕೊಂಡು ಚಂದನವನ ಇಂದು ಬರಿದಾಗಿದೆ. ಜಯಂತಿಯಮ್ಮ ನ ಒಡನಾಟ ಚಿತ್ರರಂಗದಲ್ಲಿ ಎಲ್ಲರೊಂದಿಗೆ ತುಂಬಾನೇ ಉತ್ತಮವಾಗಿತ್ತು. ಅವರಲ್ಲಿ ಸಹಾಯಯಾಚಿಸಿ ಹೋದ ಯಾವ ಕೈಯೂ ಬರಿದಾಗಿ ತಿರುಗಿ ಬಂದಿದ್ದಿಲ್ಲ. ಚಿತ್ರರಂಗದಲ್ಲಿ ಇರುವಷ್ಟು ದಿನ ತಮಗೆ ಎನಿಲ್ಲದಿದ್ದರೂ ಇತರರಿಗೆ ದಾನ ಮಾಡುವ ಮನಸ್ಥಿತಿ ಜಯಂತಿಅವರದ್ದಾಗಿತ್ತು.

ಜಯಂತಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದವರು. ಡಾ. ರಾಜಕುಮಾರ್ ಅವರೊಂದಿಗಂತೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಜಯಂತಿಯಮ್ಮ ನ ಬಗ್ಗೆ ಒಡನಾಡಿದ ಸಾಕಷ್ಟು ಜನ ಅವರೊಂದಿಗಿನ ಅನುಭವಗಳನ್ನು ಮಿಡಿಯಾ ಮುಂದೆ ಹಂಚಿಕೊಂಡಿದ್ದಾರೆ. ಅವರಲ್ಲಿ ನಟಿ ಪದ್ಮಜಾ ರಾವ್ ಕೂಡ ಒಬ್ಬರು.

ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕರೂ ಆಗಿರುವ ಪದ್ಮಜಾರಾವ್ ಜಯಂತಿಯಮ್ಮ ನಮ್ಮನ್ನು ಅಗಲಿದ್ದಕ್ಕೆ ಭಾವುಕರಾಗಿ ಮಾತನಾಡಿದರು. ಸುಮಾರು 15 ವರ್ಷಗಳ ಹಿಂದೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಬೆಂಕಿಯಲ್ಲಿ ಅರಳಿದ ಹೂವು’ ಧಾರವಾಹಿಯನ್ನು ಪದ್ಮಜಾ ರಾವ್ ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಆ ಸಮಯದಲ್ಲಿ ಮೊದಲ ಎಪಿಸೋಡ್ ಗೆ ಸೆಲಿಬ್ರೆಟಿ ಒಬ್ಬರನ್ನು ಕರೆದುಕೊಂಡು ಬರಬೇಕಿತ್ತು. ಆಗ ಪದ್ಮಜಾ ರಾವ್ ಆಯ್ಕೆ ಮಾಡಿಕೊಂಡಿದ್ದು ಜಯಂತಿಯವರನ್ನು. ಪದ್ಮಜಾರಾವ್ ನಟಿ ಜಯಂತಿಯವರ ಮನೆಗೆ ಹೋಗಿ ಒಂದು ಎಪಿಸೋಡ್ ನಲ್ಲಿ ನಟಿಸಲು ಕೇಳಿಕೊಂಡಾಗ ತಾವು ದೊಡ್ಡ ನಟಿ ಎಂಬ ಅಹಂಕಾರವಿಲ್ಲದೆ, ನಟಿಸಲು ಒಪ್ಪಿಕೊಂಡರು. ಅಲ್ಲದೆ ಕೇವಲ 5 ಸಾವಿರ ರೂಪಾಯಿಗಳನ್ನು ಪಡೆದು ತಮ್ಮದೇ ಕಾರಿನಲ್ಲಿ ಶ್ರೀ ರಂಗಪಟ್ಟಣಕ್ಕೆ ಬಂದಿದ್ದರು. ಈ ಒಂದು ಸಂದರ್ಭವನ್ನು ನೆನೆಪಿಸಿಕೊಂಡ ಪದ್ಮಜಾರಾವ್ ಅವತ್ತಿನ ಜಯಂತಿಯಮ್ಮನ ಸಹಾಯವನ್ನು ನಾನು ಯಾವತ್ತಿಗೂ ಮರೆಯಲ್ಲ, ಅವರಿಗೆ ನಾನು ಸದಾ ಚಿರಋಣಿ ಎಂದು ತಮ್ಮ ದುಃಖವನ್ನು ತೊಡಿಕೊಂಡರು.

Leave A Reply

Your email address will not be published.