Neer Dose Karnataka
Take a fresh look at your lifestyle.

ಕನ್ನಡ ನಟ ಯಶ್ ರವರು ಖರೀದಿಸಿರುವ ಹೊಸ ದುಬಾರಿ ಮನೆಯಲ್ಲಿ ಏನೇನಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಇಂದು ಭಾರತದಾದ್ಯಂತ ಪರಭಾಷಿಗರು ಕೂಡ ಗೌರವ ನೀಡುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಖಂಡಿತವಾಗಿಯೂ ಕೆಜಿಎಫ್ ಚಾಪ್ಟರ್ 1‌. ಹೌದು ಸ್ನೇಹಿತರೆ ಈ ಒಂದು ಚಿತ್ರ ಕನ್ನಡ ಚಿತ್ರರಂಗವನ್ನು ಯಾವ ಮಟ್ಟಿಗೆ ಬದಲಾವಣೆ ಮಾಡಿದೆಯೆಂದರೆ ಕಂಪ್ಲೀಟ್ ನೆಕ್ಸ್ಟ್ ಲೇವೆಲ್ ಗೆ ಹೋಗುವಂತೆ ಆಗಿದೆ.

ಈ ಚಿತ್ರದ ಮೂಲಕ ನಮ್ಮ ರಾಕಿಂಗ್ ಸ್ಟಾರ್ ಯಶ್ ರವರು ಈಗಾಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೇಶದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನು ರಾಕಿಂಗ್ ಸ್ಟಾರ್ ಯಶ್ ರವರು ಕೇವಲ ರಾತ್ರೋರಾತ್ರಿ ಸ್ಟಾರ್ ಆದವರಲ್ಲ. ಅವರು ಯಶಸ್ಸಿಗಾಗಿ ಅದೆಷ್ಟು ವರ್ಷಗಳ ಪರಿಶ್ರಮ ಹಾಗೂ ಅವಮಾನಗಳನ್ನು ಸಹಿಸಿಕೊಂಡು ಇಂದು ಜಗ ಮೆಚ್ಚುವ ಸ್ಟಾರ್ ಆಗಿ ಬೆಳೆದಿದ್ದಾರೆ. ಇನ್ನು ಇತ್ತೀಚಿಗಷ್ಟೇ ಇವರು ತಮ್ಮ ತಂದೆ ತಾಯಿ ಗಾಗಿ ಹಾಸನದಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ.

ಹೌದು ಸ್ನೇಹಿತರ ತಮ್ಮ ತವರೂರಾದ ಹಾಸನದಲ್ಲಿ ರಾಕಿಂಗ್ ಸ್ಟಾರ್ ಯಶ್ ರವರು ಮನೆಯೊಂದನ್ನು ಖರೀದಿಸಿದ್ದು, ಇದನ್ನು ತಂದೆ-ತಾಯಿ ಗಾಗಿಯೇ ಬಹಳಷ್ಟು ವಿನ್ಯಾಸದಿಂದ ತಯಾರಿಸಿ ನೀಡಿದ್ದಾರೆ. ಈ ಮನೆ ಸಕಲ ಸೌಲತ್ತುಗಳನ್ನು ಆಧುನಿಕ ತಂತ್ರಜ್ಞಾನವನ್ನು ಕೂಡ ಹೊಂದಿದ್ದು ಮನೆ ಕಾಂಪೌಂಡ್ ನಿಂದ ಕೂಡಿದ್ದು ಮನೆಯಂಗಳದಲ್ಲಿ ಗಾರ್ಡನ್ ಕೂಡ ಇದೆ. ಇನ್ನು ಯಶ್ ರವರು ಕೃಷಿ ಕುರಿತಂತೆ ಸಾಕಷ್ಟು ಒಲವನ್ನು ಹೊಂದಿರುವುದರಿಂದ ಹಲವಾರು ಎಕರೆ ಜಮೀನನ್ನು ಖರೀದಿಸಿ ಕೃಷಿ ಮಾಡುವ ತಯಾರಿಕೆಯಲ್ಲಿ ಕೂಡ ಯಶ್ ರವರು ಸಿದ್ದರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗವನ್ನು ಇನ್ನಷ್ಟು ಎತ್ತರಕ್ಕೆ ಯಶ್ ರವರು ಕೊಂಡೊಯ್ಯಲಿ ಎಂದು ಆಶಿಸೋಣ ಸ್ನೇಹಿತರೆ.

Comments are closed.