Neer Dose Karnataka
Take a fresh look at your lifestyle.

ತನ್ನ ಮನೆಯಲ್ಲಿ ಬರೋಬ್ಬರಿ 17 ವರ್ಷದಿಂದ ಕೆಲಸ ಮಾಡುತ್ತಿದ್ದವಳಿಗೆ ಈ ನಟಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂತೋಷ ಅಥವಾ ಮನ ತೃಪ್ತಿ ಎಂದರೆ ಬೇರೆಯವರ ಕಷ್ಟಕ್ಕೆ ಸಹಾಯವಾಗುವುದು ಅಥವಾ ಬೇರೆಯವರಿಗಾಗಿ ಏನಾದರೂ ಮಾಡಿಕೊಡುವುದು. ಆದರೆ ಈ ಸ್ವಾರ್ಥವೇ ತುಂಬಿರುವ ಜಗತ್ತಿನಲ್ಲಿ ಬೇರೆಯವರಿಗಾಗಿ ಸಹಾಯ ಮಾಡುವ ಜನರು ಸಿಗುವುದೇ ಅಪರೂಪ. ಇಂದು ನಾವು ಹೇಳುವ ಕಥೆಯ ನಿಮ್ಮ ಮನವನ್ನು ಕರಗಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಸ್ನೇಹಿತರೇ ನಾವು ಹೇಳಲು ಹೊರಟಿರುವುದು ಸುಂದರ ಮನಸ್ಸುಳ್ಳ ನಟಿಯೊಬ್ಬರ ಕುರಿತಂತೆ. ಫಿಲಿಪ್ಪೈನ್ಸ್ ದೇಶದ ರೋಮನ ಎಂಬ ನಟಿಯೊಬ್ಬರ ಮನೆಯಲ್ಲಿ 17 ವರ್ಷಗಳಿಂದ ವಿಲ್ಮಾ ಎಂಬಾಕೆ ಕೆಲಸ ಮಾಡಿಕೊಂಡಿದ್ದರು. ನಟಿ ಹಾಗೂ ಅವರ ಪತಿ ಇಬ್ಬರಿಗೂ ಕೂಡ 17 ವರ್ಷಗಳಿಂದ ರುಚಿಯಾದ ಅಡುಗೆಯನ್ನು ಮಾಡಿ ಬಡಿಸುತ್ತಿದ್ದರು. ಆದರೆ ವಿಲ್ಮಾ ರವರಿಗೆ ಸ್ವಂತ ಮನೆ ಇರಲಿಲ್ಲ ಹಾಗೂ ಹೊಸ ಮನೆಯನ್ನು ಕಟ್ಟಿಕೊಳ್ಳುವ ಅಥವಾ ಖರೀದಿಸುವ ಶಕ್ತಿ ಕೂಡ ಇರಲಿಲ್ಲ. ದೈನಂದಿನ ಜೀವನದ ಖರ್ಚುವೆಚ್ಚವನ್ನು ನೋಡಿಕೊಳ್ಳಲು ಸಹ ರೋಮನರ್ ಅವರ ಬಳಿ ಕೆಲಸ ಮಾಡಿಕೊಳ್ಳುವ ಅವಶ್ಯಕತೆ ವಿಲ್ಮಾ ರವರಿಗೆ ಇತ್ತು. ಇದನ್ನು ತಿಳಿದಂತಹ ನಟಿ ರೋಮನ ಅವರವರು ತಮ್ಮ ಪತಿಯೊಂದಿಗೆ ಸೇರಿ ಏನು ಮಾಡಿದರು ಗೊತ್ತ ಸ್ನೇಹಿತರೆ.

ಹೌದು ಸ್ನೇಹಿತರೆ ರೋಮನ್ ಅವರವರು ತಮ್ಮ ಪತಿಯೊಂದಿಗೆ ಸೇರಿ ವಿಲ್ಮಾ ರವರಿಗೆ ಹೊಸ ಮನೆಯೊಂದನ್ನು ಖರೀದಿಸುವ ಕುರಿತಂತೆ ಯೋಚಿಸಿದರು. ಹಾಗೂ ಒಳ್ಳೆಯ ಜಾಗದಲ್ಲಿ ಮನೆಯೊಂದನ್ನು ಖರೀದಿಸಿ ನಂತರ ವಿಲ್ಮಾ ರವರಿಗೆ ಕರೆ ಮಾಡಿ ನಾವಿಲ್ಲಿ ನಮಗಾಗಿ ಒಂದು ಮನೆಯನ್ನು ಖರೀದಿಸಿದ್ದೇವೆ ನೀನು ಬಂದು ಒಮ್ಮೆ ನೋಡು ಹೇಗಿದೆ ಎಂದು ಹೇಳು ಎಂಬುದಾಗಿ ಕರೆ ಮಾಡಿದರು. ಆಗ ಹೊಸ ಮನೆಗೆ ಬಂದಂತಹ ವಿಲ್ಮಾ ಬಾಗಿಲು ತೆಗೆದು ಒಳಗೆ ಹೋದಾಗ ಅವರಿಗೆ ಆಶ್ಚರ್ಯವೊಂದು ಕಾದಿತ್ತು. ಹೌದು ಸ್ನೇಹಿತರೆ ವಿಲ್ಮಾ ರವರು ಬಾಗಿಲು ತೆರೆದು ಒಳಗೆ ಹೋದಾಗ ಅಲ್ಲಿ ಫಲಕ ಒಂದರಲ್ಲಿ ಈ ಮನೆ ನಿಮಗಾಗಿ ಎಂದು ಬರೆದಿತ್ತು. ಅದನ್ನು ನೋಡಿ ವಿಲ್ಮಾ ರವರು ಒಂದು ಕ್ಷಣ ಭಾವುಕರಾಗಿ ಬಿಟ್ಟರು. ಇದರಲ್ಲಿ ನಾವು ಎರಡು ವಿಷಯಗಳನ್ನು ತಿಳಿಯಬಹುದು ಸ್ನೇಹಿತರೆ‌. ಒಂದು ರೋಮನ ರವರ ಒಳ್ಳೆಯ ಗುಣ ಹಾಗೂ ಇನ್ನೊಂದು ವಿಲ್ಮಾ ರವರಿಗೆ 17 ವರ್ಷದ ಪರಿಶ್ರಮಕ್ಕೆ ಸಿಕ್ಕಂತಹ ಯೋಗ್ಯವಾದ ಪ್ರತಿಫಲ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Comments are closed.