Neer Dose Karnataka
Take a fresh look at your lifestyle.

ರೇಷನ್ ಅಕ್ಕಿಯಿಂದಲೇ ಮನೆಯಲ್ಲಿಯೇ ಹೋಟೆಲ್ ನಂತೆ ಗರಿ ಗರಿಯಾದ ಮಸಾಲಾ ದೋಸೆ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೂಪರ್ ಆಗಿರೋವಂಥ ಗರಿ ಗರಿಯಾದ ಮಸಾಲ ದೋಸೆಯನ್ನು ತಿನ್ನಬೇಕು ಅಂದ್ರೆ ಮನೆಯಲ್ಲಿ ಮಾಡಿಕೊಳ್ಳುವುದಕ್ಕಿಂತ ಹೋಟೆಲಿಗೆನೇ ಹೋಗಿ ಬಿಡುತ್ತೇವೆ, ಏಕೆಂದರೆ ಮನೆಯಲ್ಲಿ ಅಷ್ಟು ಸರಿಯಾಗಿ ಮಸಾಲ ದೋಸೆ ಮಾಡಲು ಬರುವುದಿಲ್ಲ ಎಂದುಕೊಳ್ಳುತ್ತೇವೆ. ಆದರೆ ಅತ್ಯಂತ ಸುಲಭವಾಗಿ ಮಸಾಲ ದೋಸೆಯನ್ನು ಮನೆಯಲ್ಲಿಯೇ ಹೇಗೆ ಮಾಡಬಹುದು ಅನ್ನೋದನ್ನ ನಾವಿವತ್ತು ಹೇಳಿಕೊಡ್ತಿದ್ದೇವೆ ಮುಂದೆ ಓದಿ.

ಮಸಾಲ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು: ರೇಷನ್ ಅಕ್ಕಿ – ಒಂದು ಕಪ್, ಉದ್ದಿನ ಬೇಳೆ -ಅರ್ಧ ಕಪ್, ಕಡ್ಲೆ ಬೇಳೆ ಒಂದು ಚಮಚ, ಮೆಂತ್ಯ – ಒಂದು ಚಮಚ, ಅವಲಕ್ಕಿ ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು ಹಾಗೂ ನೀರು.

ದೋಸೆ ಮಾಡುವ ವಿಧಾನ: ಒಂದು ಪಾತ್ರೆಗೆ ಒಂದು ಕಪ್ ರೇಷನ್ ಅಕ್ಕಿ, ಅರ್ಧ ಕಪ್ ಉದ್ದಿನ ಬೇಳೆ, ಒಂದು ಚಮಚ ಕಡ್ಲೆ ಬೇಳೆ, ಒಂದು ಚಮಚ ಮೆಂತ್ಯ ಹಾಕಿ. ಇದನ್ನು ನಾಕೈದು ಬಾರಿ ಚೆನ್ನಾಗಿ ತೊಳೆದು ನಂತರ ನೀರನ್ನು ಹಾಕಿ 4-5 ಗಂಟೆಗಳ ಕಾಲ ನೆನೆಸಿಡಿ. ನಂತರ ಇದನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬುವುದಕ್ಕೂ ಮೊದಲು 10 ನಿಮಿಷಗಳ ಕಾಲ ಅವಲಕ್ಕಿಯನ್ನು ನೆನೆಹಾಕಿ, ನೀರನ್ನು ಸೋಸಿ ರುಬ್ಬುವುದಕ್ಕೆ ಬಳಸಿಕೊಳ್ಳಿ. ಅವಲಕ್ಕಿ ಇಲ್ಲದಿದ್ದರೆ ಅನ್ನವನ್ನು ಕೂಡ ಬಳಸಬಹುದು.

ಈ ಎಲ್ಲವನ್ನು ಚೆನ್ನಾಗಿ ನುಣುಪಾಗಿ ರುಬ್ಬಿಕೊಂಡ ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಒಂದು ಪ್ಲೇಟ್ ಮುಚ್ಚಿ 8-10 ಗಂಟೆಗಳ ಕಾಲ ಹಾಗೆಯೇ ಬಿಡಿ. ರಾಟ್ರಿ ಪೂರ್ತಿ ಇಟ್ಟರೆ ಒಳ್ಳೆಯದು. ಇದು ಚೆನ್ನಾಗಿ ಉಬ್ಬಿ ಬಂದಿರುತ್ತದೆ. ಒಂದು ತವಾವನ್ನು ಚೆನ್ನಾಗಿ ಎಣ್ಣೆ ಸವರಿ ಬಿಸಿ ಮಾಡಿ. ತವಾ ಕಾದ ನಂತರ ತೆಳ್ಳಗೆ ದೋಸೆ ಹಿಟ್ಟನ್ನು ಹುಯ್ದು ದೋಸೆ ಮಾಡಿ. ಇದು ಸ್ವಲ್ಪ ಗರಿಗರಿ ಆದಾಗ ತೆಗೆಯಿರಿ. ದೋಸೆ ಹುಯ್ದು ಅದರಲ್ಲಿ ಖಾರದ ಚಟ್ನಿ ಹಾಗೂ ಆಲೂಗಡ್ಡೆ ಪಲ್ಯವನ್ನು ಸೇರಿಸಬಹುದು. ಹೀಗೆ ಮಾಡಿದರೆ ರುಚಿಕರವಾದ ಮಸಾಲಾ ದೋಸೆ ಮನೆಯಲ್ಲಿಯೇ ರೆಡಿಯಾಗುತ್ತದೆ.

Comments are closed.