Neer Dose Karnataka
Take a fresh look at your lifestyle.

ದಿನೇಶ್ ಕಾರ್ತಿಕ್ ವೈವಾಹಿಕ ಬಾಳಿನಲ್ಲಿ, ನಂಬಿಕೆ ದ್ರೋಹ ಮಾಡಿದ ಭಾರತೀಯ ಕ್ರಿಕೇಟರ್ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಸಿನಿಮಾ ಬಿಟ್ಟರೆ ಅತ್ಯಂತ ಹೆಚ್ಚಾಗಿ ಜನಪ್ರಿಯವಾಗಿರುವುದು ಎಂದರೆ ಅದು ಖಂಡಿತವಾಗಿಯೂ ಕ್ರಿಕೆಟ್. ಕ್ರಿಕೆಟ್ ನಲ್ಲಿ ಒಮ್ಮೆ ಯಶಸ್ವಿಯಾದರೆ ಕ್ರಿಕೆಟಿಗನಿಗೆ ಜೀವನಪರ್ಯಂತ ಐಷಾರಾಮಿ ಜೀವನದ ಭರವಸೆ ಖಂಡಿತ ಇರುತ್ತದೆ. ಆದರೆ ಅಷ್ಟೆಲ್ಲಾ ಕಷ್ಟಪಟ್ಟ ಮೇಲೂ ಕೂಡ ಕಾಯಂ ಸ್ಥಾನ ಸಿಗದಿದ್ದರೆ ಅದು ಖಂಡಿತವಾಗಿಯೂ ಕ್ರಿಕೆಟಿಗನ ದುರದೃಷ್ಟ ಎಂದೇ ಹೇಳಬಹುದು. ಇಂದು ನಾವು ಹೇಳಹೊರಟಿರುವ ಕ್ರಿಕೆಟಿಗನ ಜೀವನದಲ್ಲೂ ಕೂಡ ದುರದೃಷ್ಟ ತನ ತಾಂಡವವಾಡಿತ್ತು.

ಹೌದು ನಾವು ಮಾತನಾಡಲು ಹೊರಟಿರುವುದು ದಿನೇಶ್ ಕಾರ್ತಿಕ್ ಅವರ ಬಗ್ಗೆ. ಎಷ್ಟೆಲ್ಲಾ ಭರವಸೆಯ ಪ್ರದರ್ಶನ ನೀಡಿದರೂ ಸಹ ದಿನೇಶ್ ಕಾರ್ತಿಕ್ ರವರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ದಿನೇಶ್ ಕಾರ್ತಿಕ್ ಎಂದಾಗಲೆಲ್ಲ ನಮಗೆ ಬಾಂಗ್ಲಾದೇಶದ ವಿರುದ್ಧ ದಿನೇಶ್ ಕಾರ್ತಿಕ್ ರವರು ಕೊನೆಯಲ್ಲಿ ಸಿಕ್ಸ್ ಹೊಡೆದು ಭಾರತಕ್ಕೆ ಜಯಭೇರಿ ತಂದುಕೊಟ್ಟಂತಹ ಕ್ಷಣಗಳು ನೆನಪಾಗುತ್ತದೆ. ತಮಿಳುನಾಡು ರಣಜಿ ತಂಡದ ನಾಯಕನಾಗಿ ಕೂಡ ಸಾಕಷ್ಟು ಬಾರಿ ರಾಜ್ಯಕ್ಕೆ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದರು. ಇನ್ನು ಅವರ ವೈವಾಹಿಕ ಜೀವನದ ಬಗ್ಗೆ ಹೇಳುವುದಾದರೆ ಅವರು ತಮ್ಮ ಬಹುಕಾಲದ ಗೆಳತಿಯಾಗಿದ್ದ ನಿಖಿತಾ ಅವರನ್ನು ಮದುವೆಯಾಗಿದ್ದರು.

ನಂತರ ಒಮ್ಮೆ ನಿಖಿತಾ ರವರು ಗರ್ಭಿಣಿಯಾಗಿದ್ದಾಗ ಅವರ ಸಹ ಕ್ರಿಕೆಟಿಗ ಅವರ ಮಡದಿಯೊಂದಿಗೆ ಸ್ನೇಹಕ್ಕೂ ಮೀರಿದ ಸಂಬಂಧವನ್ನು ಹೊಂದಿರುವುದು ತಿಳಿದುಬರುತ್ತದೆ. ದಿನೇಶ್ ಕಾರ್ತಿಕ್ ರವರಿಗೆ ಮೋಸ ಮಾಡಿದಂತಹ ಕ್ರಿಕೆಟಿಗ ಯಾರು ಗೊತ್ತಾ ಸ್ನೇಹಿತರೆ. ಹೌದು ತಮಿಳುನಾಡು ತಂಡಕ್ಕೆ ಒಟ್ಟಿಗೆ ಆಡಿದ್ದಂತಹ ದಿನೇಶ್ ಕಾರ್ತಿಕ್ ರವರ ಸಹಆಟಗಾರ ಮುರಳಿ ವಿಜಯ್ ರವರೇ ದಿನೇಶ್ ಕಾರ್ತಿಕ್ ರವರಿಗೆ ಮೋಸ ಮಾಡಿದ್ದು. ನಂತರ ದಿನೇಶ್ ಕಾರ್ತಿಕ್ ರವರು ತಮ್ಮ ಮಡದಿ ನಿಖಿತಾ ರವರಿಗೆ ವಿವಾಹ ವಿಚ್ಛೇದನವನ್ನು ನೀಡಿದರು. ನಿಖಿತಾ ರವರು ಮುರಳಿ ವಿಜಯ್ ಅವರನ್ನು ಮರು ಮದುವೆಯಾದರು. ಇನ್ನು ಇತ್ತ ದಿನೇಶ್ ಕಾರ್ತಿಕ್ ರವರು ಕೂಡ ಚಾಂಪಿಯನ್ಸ್ ಟ್ರೋಫಿ ಮುಗಿದ ನಂತರ ಭಾರತದ ಖ್ಯಾತ ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ರವರನ್ನು ವಿವಾಹವಾಗುತ್ತಾರೆ. ಹೀಗೆ ವೈಯಕ್ತಿಕ ಜೀವನದಲ್ಲಿ ಹಾಗೂ ಕ್ರಿಕೆಟ್ನಲ್ಲಿ ಎರಡರಲ್ಲೂ ಕೂಡ ದಿನೇಶ್ ಕಾರ್ತಿಕ್ ರವರು ಸಾಕಷ್ಟು ನಿರಾಶೆಯನ್ನು ಅನುಭವಿಸಿದ್ದಾರೆ.

Comments are closed.