Neer Dose Karnataka
Take a fresh look at your lifestyle.

ರಾಜಾರಾಣಿ ವೇದಿಕೆ ಮೇಲೆ ಕಣ್ಣೀರಿಟ್ಟ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಹಾಗೂ ದಂಪತಿಗಳು ಕಾರಣ ಏನು ಗೊತ್ತಾ??

23

ನಮಸ್ಕಾರ ಸ್ನೇಹಿತರೇ ನಿಮಗೆ ಬಿಗ್ ಬಾಸ್ ಕನ್ನಡ ಸೀಸನ್ 7ರ ಬಗ್ಗೆ ಗೊತ್ತಿದ್ದರೆ ಅದರಲ್ಲಿ ಭಾಗವಹಿಸಿದ ಸಮೀರ್ ಆಚಾರ್ಯ ಖಂಡಿತವಾಗಿ ನಿಮಗೆ ಗೊತ್ತಿರುತ್ತದೆ. ಸಮೀರ್ ಆಚಾರ್ಯರವರು ಉತ್ತರ ಕರ್ನಾಟಕದ ಸಾಮಾನ್ಯ ಅಭ್ಯರ್ಥಿಯಾಗಿದ್ದರು. ಇವರು ಬಿಗ್ ಬಾಸ್ ಮನೆಯಲ್ಲಿ 99 ದಿನಗಳ ಕಾಲ ಇದ್ದು ನಂತರ ಎಲಿಮಿನೇಟ್ ಆಗಿ ಹೊರಬಂದಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7 ರಲ್ಲಿ ಟಾಪ್ 6 ಅಭ್ಯರ್ಥಿಗಳಲ್ಲಿ ಆರನೇ ಅಭ್ಯರ್ಥಿಯಾಗಿ ಸಮೀರಾಚಾರ್ಯ ರವರು ಕಾಣಿಸಿಕೊಂಡಿದ್ದರು.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇವರು ಜನಪ್ರಿಯರಾಗಲು ಇನ್ನೊಂದು ಕಾರಣವೆಂದರೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಚಂದನ್ ಶೆಟ್ಟಿ ಅವರ ಜೊತೆಗೂಡಿ ತಮ್ಮ ಹೆಂಡತಿ ಶ್ರಾವಣಿಗೆ, ಶ್ರಾವಣಿ ಶ್ರಾವಣಿ ಎಂಬ ಹಾಡೊಂದನ್ನು ರಚಿಸಿ ಹಾಡಿದರು. ಇದು ಆ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಸುದ್ದಿಯನ್ನು ಮಾಡಿತ್ತು. ಇನ್ನು ಸಮೀರ್ ಆಚಾರ್ಯ ರವರು ಬಿಗ್ ಬಾಸ್ ಮುಗಿದ ನಂತರ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರನ್ನು ನೋಡಲು ಮೈಸೂರಿಗೆ ಬಂದು ಆಮೇಲೆ ದಾರಿಕಾಣದೆ ಪೊಲೀಸರ ನೆರವಿನಿಂದ ಅವರನ್ನು ಭೇಟಿಯಾಗಿದ್ದು ಬಹಳಷ್ಟು ಸುದ್ದಿಯಾಗಿತ್ತು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಡೆಸಿಕೊಡುತ್ತಿದ್ದ ಅಂತಹ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುರಾಣಕ್ಕೆ ಸಂಬಂಧಿಸಿದಂತಹ ಪ್ರಶ್ನೆಗೆ ತಪ್ಪು ಉತ್ತರ ನೀಡಿ ಟ್ರೋಲ್ ಪೇಜ್ ಗಳಿಂದ ಸಾಕಷ್ಟು ಟ್ರೋಲ್ ಆಗಿದ್ದರು. ಆದರೂ ಕೂಡ ಯಾವುದನ್ನು ಅವರು ಮನಸ್ಸಿಗೆ ತೆಗೆದುಕೊಳ್ಳದೆ ಎಲ್ಲವನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದರು.

ಇನ್ನು ಇತ್ತೀಚಿಗಷ್ಟೇ ಪ್ರಸಾರ ವಾದಂತಹ ರಾಜ ರಾಣಿ ರಿಯಾಲಿಟಿ ಶೋನಲ್ಲಿ ಸಮೀರಾಚಾರ್ಯ ತಮ್ಮ ಪತ್ನಿಯೊಂದಿಗೆ ಭಾಗವಹಿಸಿದ್ದರು. ಈ ಸಮಯದಲ್ಲಿ ಸಮೀರ್ ಆಚಾರ್ಯ ಹಾಗೂ ಅವರ ಪತ್ನಿ ಶ್ರಾವಣಿ ಮಗುವಿನ ವಿಷಯ ಕೇಳಿದಾಗ ಸಾಕಷ್ಟು ದುಃಖಿತರಾಗಿದ್ದಾರೆ. ಹೌದು ಸ್ನೇಹಿತರೆ ರಾಜ ರಾಣಿ ರಿಯಾಲಿಟಿ ಶೋನಲ್ಲಿ ಗೊಂಬೆ ಮಗುವಿಗೆ ಮುದ್ದಿಸುವ ಟಾಸ್ಕ್ ಒಂದಿತ್ತು. ಆಗ ಸಮೀರಾಚಾರ್ಯ ರವರ ಪತ್ನಿ ಶ್ರಾವಣಿ ಅವರು ಮೂರು ವರ್ಷಗಳ ಹಿಂದೆ ಕಳೆದುಕೊಂಡಿದ್ದ ತಮ್ಮ ಮಗುವನ್ನು ನೆನಪಿಸಿಕೊಂಡು ನನಗೆ ಗೊಂಬೆ ಮಗು ಬೇಡ ನನ್ನ ನಿಜವಾದ ಮಗು ಬೇಕು ಎಂಬುದಾಗಿ ಅಂಗಲಾಚಿ ಕೊಂಡಿದ್ದು ಎಲ್ಲರ ಮನಸ್ಸು ಹಿಂಡುವಂತಿತ್ತು. ಎಷ್ಟಾದರೂ ತಾಯಿ ಮನಸ್ಸು ಅಲ್ಲವೇ ಸ್ನೇಹಿತರೆ ಮಗುವಿನ ಹಂಬಲದಲ್ಲಿ ಎಂದಿಗೂ ಕೂಡ ದುಃಖದಲ್ಲೇ ಇರುತ್ತದೆ. ಮಗುವನ್ನು ಕಳೆದುಕೊಂಡಿರುವ ದುಃಖವನ್ನು ಮರೆಸುವ ಶಕ್ತಿ ಸಮೀರಾಚಾರ್ಯ ಹಾಗೂ ಶ್ರಾವಣಿ ದಂಪತಿ ಯವರಿಗೆ ನೀಡಲಿ ಎಂದು ಹಾರೈಸೋಣ.

Leave A Reply

Your email address will not be published.