ಇದ್ದಕ್ಕಿದ್ದ ಹಾಗೆ ಮಂಜು ದಿವ್ಯ ರವರನ್ನು ಮನೆಗೆ ಕರೆದ ಕಿಚ್ಚ, ನೀಡಿದ ದೊಡ್ಡ ಗಿಫ್ಟ್ ಏನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ತೆರೆಬಿದ್ದಿದ್ದು ಮಂಜು ಪಾವಗಡ ರವರು ಈಗಾಗಲೇ ವಿನ್ನಾಗಿರುವುದು ಎಲ್ಲರಿಗೂ ಗೊತ್ತಾಗಿದೆ. ಹೌದು ಸ್ನೇಹಿತರೆ ಬಿಗ್ಬಾಸ್ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಮತಗಳನ್ನು ಗೆಲ್ಲುವ ಮೂಲಕ ಬಿಗ್ಬಾಸ್ ಪಟ್ಟವನ್ನು ಗೆದ್ದುಕೊಂಡಿದ್ದಾರೆ ಮಜಾಭಾರತ ಖ್ಯಾತಿಯ ಮಂಜು ಪಾವಗಡ ರವರು. ಬರೋಬ್ಬರಿ 45 ಲಕ್ಷ ಮತಗಳ ಪಡೆಯುವ ಮೂಲಕ 53 ಲಕ್ಷ ಬಹುಮಾನವನ್ನು ಪಡೆದುಕೊಂಡಿದ್ದಾರೆ ಮಂಜು ಪಾವಗಡ ರವರು.

ಇನ್ನು ಇವರಿಗೆ ಚಂದನವನ ದಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕರುನಾಡ ಚಕ್ರವರ್ತಿ ಶಿವಣ್ಣನವರು ಈಗಾಗಲೇ ವೀಡಿಯೋ ಮೂಲಕ ಕೂಡ ಮಂಜು ಪಾವಗಡ ಅವರಿಗೆ ಅಭಿನಂದನೆಗಳನ್ನು ಕೋರಿದರು. ಮಾತ್ರವಲ್ಲದೆ ಮನೆಗೆ ಕರೆಸಿಕೊಂಡು ಸಿಹಿಯನ್ನು ಕೂಡ ತಿನ್ನಿಸಿದ್ದರು. ಇನ್ನು ಈಗ ಮಂಜು ಪಾವಗಡ ರವರಿಗೆ ಮಾತ್ರವಲ್ಲದೆ ಅವರ ಸ್ನೇಹಿತೆ ಯಾಗಿರುವ ದಿವ್ಯ ಸುರೇಶ್ ರವರಿಗೆ ಕೂಡ ಕಿಚ್ಚ ಸುದೀಪ್ ಅವರು ಸ್ಪೆಷಲ್ ಗಿಫ್ಟ್ ಒಂದನ್ನು ನೀಡಿದ್ದಾರೆ.

ಹೌದು ಸ್ನೇಹಿತರೆ ಬಿಗ್ ಬಾಸ್ ನಲ್ಲಿ ಆತ್ಮೀಯ ಸ್ನೇಹಿತರಾಗಿರುವ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಇಬ್ಬರನ್ನು ಕೂಡ ಮನೆಗೆ ಕರೆಸಿಕೊಂಡು ಕಿಚ್ಚ ಸುದೀಪ್ ರವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಊಟವನ್ನು ಮಾಡಿಸಿದ್ದಾರೆ. ಮಾತ್ರವಲ್ಲದೆ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ರವರು ಕಿಚ್ಚ ಸುದೀಪ್ ರವರ ತಂದೆ ತಾಯಿಯ ಆಶೀರ್ವಾದವನ್ನೂ ಕೂಡ ಪಡೆದುಕೊಂಡಿದ್ದಾರೆ. ಇನ್ನು ಕಿಚ್ಚ ಸುದೀಪ್ ರವರ ತಮ್ಮ ಮುಂದಿನ ಚಿತ್ರಗಳಲ್ಲಿ ಒಳ್ಳೆಯ ಪಾತ್ರವನ್ನು ನೀಡುವುದಾಗಿ ಇಬ್ಬರಿಗೂ ಕೂಡ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಕಿಚ್ಚ ಸುದೀಪ್ ರವರಿಂದ ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ರವರಿಗೆ ಸಿಕ್ಕಿರುವ ಸ್ಪೆಷಲ್ ಗಿಫ್ಟ್.

Leave a Reply

Your email address will not be published. Required fields are marked *